
ಕೆ.ಆರ್.ಪೇಟೆ: ತಾಲೂಕಿನ ಸಾಕ್ಷಿಬೀಡು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಯಶವಂತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನ ಬಯಸಿ ಯಶವಂತ್ ಮತ್ತು ಎಸ್.ಜಿ.ದರ್ಶನ್ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಮತದಾನದಲ್ಲಿ ಯಶವಂತ್ 8 ಮತ ಪಡೆದು ಗೆಲುವು ಸಾಧಿಸಿದರು.
ಉಪಾಧ್ಯಕ್ಷ ಸ್ಥಾನ ಬಯಸಿ ಮಂಜಾಚಾರಿ ಹೊರತುಪಡಿಸಿ ಬೇರೆ ಯಾರೂ ಸಹ ನಾಮಪತ್ರ ಸಲ್ಲಿಸದ ಕಾರಣ. ಉಪಾಧ್ಯಕ್ಷರಾಗಿ ಮಂಜಾಚಾರಿ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಅಧಿಕಾರಿ ಎಚ್.ಎಸ್.ಮುಕ್ತ ಕಾರ್ಯ ನಿರ್ವಹಿಸಿದರು. ಸಹ ಚುನಾವಣಾಧಿಕಾರಿಯಾಗಿ ಸಂಘದ ಸಿಇಒ ಸುಬ್ರಹ್ಮಣ್ಯ ಕಾರ್ಯ ನಿರ್ವಹಿಸಿದರು. ನೂತನ ಅಧ್ಯಕ್ಷರಾದ ಮತ್ತು ಉಪಾಧ್ಯಕ್ಷ ಅವರನ್ನು ಮುಖಂಡರು ಅಭಿನಂದಿಸಿದರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಪ್ರಭುದೇವೇಗೌಡ, ಗ್ರಾ.ಪಂ. ಸದಸ್ಯ ಎಸ್.ಎನ್.ಮಂಜೇಗೌಡ, ಗ್ರಾ.ಪಂ. ಅಧ್ಯಕ್ಷೆ ಸುಜಾತಾ ನಾಗರಾಜು, ಸದಸ್ಯ ಎಸ್.ಎನ್.ಮಂಜೇಗೌಡ, ಎಸ್.ಎಚ್.ನಾಗರಾಜು, ಉದಯಶಂಕರ್, ಅಶೋಕ್, ಲಕ್ಷ್ಮಣೇಗೌಡ, ಸಂಘದ ನಿರ್ದೇಶಕರಾದ ಸೋಮೇಶ್, ಪ್ರದೀಪ್ ಕುಮಾರ್, ನಿಂಗೇಗೌಡ, ಸ್ವಾಮಿ, ರಮೇಶ್, ರೇಣುಕಾ, ನೀಲಮ್ಮ, ಮಂಜುನಾಥ್ ಹಾಗೂ ಗ್ರಾಮದ ಮುಖಂಡರು ಇದ್ದರು.