More

    ಸಿನಿ ಕಾರ್ವಿುಕರಿಗೆ ಲಸಿಕೆ: ಯಶ್​ರಾಜ್ ಸಂಸ್ಥೆಯಿಂದ ಮಹತ್ವದ ತೀರ್ಮಾನ

    ಮಹಾರಾಷ್ಟ್ರದಲ್ಲಿ ಲಾಕ್​ಡೌನ್ ವಿಸ್ತರಣೆಯಾಗಿದ್ದು, ಹಿರಿತೆರೆ ಮತ್ತು ಕಿರುತರೆಯ ಚಟುವಟಿಕೆಗಳು ಬಂದ್ ಆಗಿ ಬಹಳ ದಿನಗಳಾಗಿವೆ. ಇನ್ನೆಷ್ಟು ದಿನಗಳ ಕಾಲ ಇದೇ ರೀತಿ ಮುಂದುವರೆಯುತ್ತದೋ ಎಂಬುದು ಯಾರಿಗೂ ಗೊತ್ತಿಲ್ಲ.

    ಈ ಮಧ್ಯೆ, ಯಶ್​ರಾಜ್ ಫಿಲಂಸ್​ನ ಅಂಗಸಂಸ್ಥೆಯಾದ ಯಶ್​ರಾಜ್ ಫೌಂಡೇಶನ್ ಮುಂದಾಳತ್ವ ವಹಿಸಿಕೊಂಡಿರುವ ಯಶ್ ಚೋಪ್ರಾ ಅವರ ಮಗ ಆದಿತ್ಯ ಚೋಪ್ರಾ ಒಂದು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ.

    ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯನ್ಸ್ ನ 30 ಸಾವಿರ ಕಾರ್ವಿುಕರಿಗೆ ಕೋವಿಡ್ ಲಸಿಕೆ ಕೊಡಿಸುವುದಕ್ಕೆ ತೀರ್ವನಿಸಿದ್ದು, ಈ ಕುರಿತು ಮಹಾರಾಷ್ಟ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಫೆಡರೇಷನ್​ನಲ್ಲಿ 30 ಸಾವಿರ ಕಾರ್ವಿುಕರು ಗುರುತಿಸಿಕೊಂಡಿದ್ದು, ಈ ಕಾರ್ವಿುಕರು ಹಿರಿತೆರೆ ಮತ್ತು ಕಿರುತೆರೆಗೆ ಕೆಲಸ ಮಾಡುತ್ತಿದ್ದಾರೆ.

    ಈ 30 ಸಾವಿರ ಜನ ಧೈರ್ಯವಾಗಿ ಮನೆಯಿಂದ ಹೊರಬಂದು ಕೆಲಸ ಮಾಡಬೇಕೆಂದರೆ ಲಸಿಕೆಯ ಅವಶ್ಯಕತೆ ಇದ್ದು, 60 ಸಾವಿರ ಲಸಿಕೆ ಕೊಡಬೇಕೆಂದು ಯಶ್​ರಾಜ್ ಫೌಂಡೇಶನ್ ಮನವಿ ಮಾಡಿದೆ. ಅದಕ್ಕೆ ಅಗತ್ಯವಿರುವ ಹಣವನ್ನು ಭರಿಸುವುದಾಗಿಯೂ ಹೇಳಿದೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts