Jungle Mangal Review; ಪ್ರೀತಿ, ದ್ವೇಷ, ಕಾಮ, ಸೇಡಿನ ಅರಣ್ಯಕಾಂಡ

blank

ಚಿತ್ರ: ಜಂಗಲ್​ ಮಂಗಲ್​
ನಿರ್ದೇಶನ: ರಕ್ಷಿತ್​ ಕುಮಾರ್​
ತಾರಾಗಣ: ಯಶ್​ ಶೆಟ್ಟಿ, ಹರ್ಷಿತಾ ರಾಮಚಂದ್ರ, ಉಗ್ರಂ ಮಂಜು, ದೀಪಕ್​ ರೈ ಪಾಣಾಜೆ, ಬಲರಾಜವಾಡಿ ಮತ್ತಿತರರು

| ಹರ್ಷವರ್ಧನ್​ ಬ್ಯಾಡನೂರು

ಅಂದು 2020ರ ಏ.5 ಕರೊನಾ ಲಾಕ್​ಡೌನ್​ ಸಮಯ. ಮಲೆನಾಡ ಯುವಕ ಪ್ರವೀಣ (ಯಶ್​ ಶೆಟ್ಟಿ) ಕೆಲಸ ಬಿಟ್ಟು ಸಾಲ ಮಾಡಿ ಐಸ್​ಕ್ರೀಮ್​ ಡಿಸ್ಟ್ರಿಬ್ಯೂಷನ್​ಗೆ ಕೈಹಾಕಿದ ಕೆಲವೇ ತಿಂಗಳಲ್ಲಿ ಕರೊನಾದಿಂದಾಗಿ ಬಿಜಿಯಾಗಿದ್ದ ಬಿಜಿನೆಸ್​, ಗಜಿಬಿಜಿಯಾಗಿರುತ್ತದೆ. ಅದೇ ಗ್ರಾಮದ ಅಂಗನವಾಡಿ ಟೀಚರ್​ ಭವ್ಯ ಅಲಿಯಾಸ್​ ಅಮ್ಮಿ (ಹರ್ಷಿತಾ) ಜತೆ ಅವನದ್ದೊಂದು ಲವ್​ಸ್ಟೋರಿ. ಅಪ್ಪ ಕುಡುಕ, ತಾಯಿ ಮುಗ್ಧೆ. ನಾಲ್ವರು ಹೆಣ್ಣುಮಕ್ಕಳಲ್ಲಿ ಹಿರಿಯಾಕೆ ಅಮ್ಮಿ. ರಾವಣನನ್ನೂ ಮೀರಿಸುವ ಬಾಬು (ಮಂಜು) ಅಮ್ಮಿ ಮೇಲೆ ಕಣ್ಣು ಹಾಕಿರುತ್ತಾನೆ. ಮದುವೆಯಾಗು ಅಂತ ಆಕೆಯ ಹಿಂದೆ ಬಿದ್ದಿರುತ್ತಾನೆ. ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಮಲಗಿರುವ ಈ ಯುವಪ್ರೇಮಿಗಳು, ಆ ಹತಾಶೆಯಿಂದ ಹೊರಬರಲು ನಿರ್ಧರಿಸುತ್ತಾರೆ. ಊರಿಂದ ದೂರ ಮಲೆನಾಡ ಹಸಿರ ಸಿರಿಯ ನಡುವೆ ಹರಿವ ಝರಿಯ ಪಕ್ಕ ಕಷ್ಟ&ಸುಖ ಮಾತನಾಡಲು ತೆರಳುತ್ತಾರೆ. ಜೋಡಿಯನ್ನು ನೋಡುವ ಸ್ಥಳಿಯರು ನೈತಿಕ ಪೊಲೀಸ್​ಗಿರಿಗೆ ಮುಂದಾಗುತ್ತಾರೆ. ಹಾಗಾದರೆ ಮುಂದೆ? ಈ ಜೋಡಿ ಊರಿನವರಿಂದ ತಪ್ಪಿಸಿಕೊಳ್ಳುತ್ತಾರಾ? ಹೇಗೆ? ಮುಂದೇನು? ತಿಳಿಯಲು “ಜಂಗಲ್​ ಮಂಗಲ್​’ ಸಿನಿಮಾ ನೋಡಿ.

Jungle Mangal Review; ಪ್ರೀತಿ, ದ್ವೇಷ, ಕಾಮ, ಸೇಡಿನ ಅರಣ್ಯಕಾಂಡ

ನಿರ್ದೇಶಕ ರಕ್ಷಿತ್​ ಕುಮಾರ್​ ಚೊಚ್ಚಲ ಪ್ರಯತ್ನದಲ್ಲೇ ಭರವಸೆ ಮೂಡಿಸುತ್ತಾರೆ. ಕೇವಲ 92 ನಿಮಿಷದ ಚಿತ್ರವಾಗಿದ್ದು, ಎಲ್ಲೂ ಬೋರ್​ ಹೊಡಿಸದೇ ಅಚ್ಚುಕಟ್ಟಾಗಿ ನೋಡಿಸಿಕೊಂಡು ಹೋಗುತ್ತದೆ. ನಾಯಕ. ನಾಯಕಿಯ ಜತೆಗೆ ಸುತ್ತಮುತ್ತಲಿನ ಬಹುತೇಕ ಪಾತ್ರಗಳ ಹಿನ್ನೆಲೆಯನ್ನೂ ಹೇಳುತ್ತಾ, ಒಂದಕ್ಕೊಂದು ಬೆಸೆದಿರುವ ರೀತಿ ಶ್ಲಾಘನೀಯ. ಹೀಗಾಗಿ ಈ ಚಿತ್ರಕ್ಕೆ ಕಥಾನಾಯಕನಿಲ್ಲ, ಕಥೆಯೇ ನಾಯಕ. ಫ್ರಸ್ಟ್ರೆಟೆಡ್​ ಪ್ರವೀಣನಾಗಿ ಯಶ್​ ಶೆಟ್ಟಿ, ಆತಂಕ, ಗೊಂದಲಗಳಿಂದ ಕೂಡಿದ ಅಸಹಾಯಕ ಅಮ್ಮಿ ಪಾತ್ರದಲ್ಲಿ ಹರ್ಷಿತಾ ಪಾತ್ರಗಳನ್ನು ಜೀವಿಸಿದ್ದಾರೆ. ಆದರೆ, ಅಕ್ರಮ ಮರಳು ದಂಧೆಕೋರ ಬಾಬು ಪಾತ್ರದಲ್ಲಿ ಉಗ್ರಂ ಮಂಜು ನಟನೆ ಎಲ್ಲರನ್ನೂ ಮೀರಿಸುವಂತಿದೆ. ಮಲೆನಾಡಿನ ಸೌಂದರ್ಯವನ್ನು ವಿಷ್ಣುಪ್ರಸಾದ್​ ಬೆಳ್ಳಿತೆರೆಯ ಮೇಲೆ ಅಷ್ಟೇ ಸುಂದರವಾಗಿ ತೋರಿಸಿದ್ದಾರೆ. ಒಂದೂವರೆ ತಾಸು ಆರಾಮಾಗಿ ಕುಳಿತು ನೋಡಬಹುದಾದ ಒಂದೊಳ್ಳೆ ಮನರಂಜನಾತ್ಮಕ ಅಡ್ವೆಂಚರ್​ ಥ್ರಿಲ್ಲರ್​ ಚಿತ್ರವಿದು.

Jungle Mangal Review; ಪ್ರೀತಿ, ದ್ವೇಷ, ಕಾಮ, ಸೇಡಿನ ಅರಣ್ಯಕಾಂಡ

 

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…