ಬಹುನಿರೀಕ್ಷಿತ ಕೆ.ಜಿ.ಎಫ್​ ಚಿತ್ರಕ್ಕೆ ಕೆಜಿಎಫ್​ನಲ್ಲೇ ಬಿಡುಗಡೆ ಭಾಗ್ಯವಿಲ್ಲ ಏಕೆ?

ಕೋಲಾರ: ದೇಶಾದ್ಯಂತ ಬಹುನಿರೀಕ್ಷೆ ಹುಟ್ಟಿಸಿರುವ ಕೆ.ಜಿ.ಎಫ್. ‌ಚಿತ್ರಕ್ಕೆ ಕೆಜಿಎಫ್​ನಲ್ಲೆ ಬಿಡುಗಡೆ ಭಾಗ್ಯ ಇಲ್ಲದಿರುವುದು ನಟ ಯಶ್​ ಅವರ ಅಭಿಮಾನಿಗಳಲ್ಲಿ ಭಾರಿ ನಿರಾಶೆ ಉಂಟುಮಾಡಿದೆ.

ಡಿ.21ರಂದು ವಿಶ್ವಾದ್ಯಂತ ಕೆ.ಜಿ.ಎಫ್​. ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರದ ಬಾಕ್ಸ್ ಬಜೆಟ್​ ದುಬಾರಿಯಾಗಿರುವುದರಿಂದ ಚಿತ್ರಮಂದಿರದ ಮಾಲೀಕರು ದೂರ ಸರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಜಿಎಫ್​ನಲ್ಲಿರುವ ಲಕ್ಷ್ಮೀ ಹಾಗೂ ಒಲಿಂಪಿಯಾ ಚಿತ್ರಮಂದಿರಗಳಲ್ಲಿ ಚಿತ್ರದ ಬಿಡುಗಡೆ ಆಗುತ್ತಿಲ್ಲ.

ಸುಮಾರು ಎರಡು ತಿಂಗಳ‌ ಕಾಲ ಸತತವಾಗಿ ಕೋಲಾರ ಜಿಲ್ಲೆ ಕೆಜಿಎಫ್ ಸೈನೆಡ್ ಗುಡ್ಡದ ಮೇಲೆ ಸಿನಿಮಾ ಚಿತ್ರೀಕರಣ ನಡೆದಿದೆ. ಬಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ ಸೇರಿದಂತೆ ಇಡೀ ಚಲನಚಿತ್ರರಂಗ ಬಿಡುಗಡೆಗೆ ಎದುರು ನೋಡುತ್ತಿದೆ. ಚಿತ್ರವನ್ನು ಉಗ್ರಂ ಖ್ಯಾತಿಯ ಪ್ರಶಾಂತ್​ ನೀಲ್​ ನಿರ್ದೇಶಿಸಿದ್ದು, ನಟಿ ಶ್ರೀನಿಧಿ ನಾಯಕಿಯಾಗಿ ಸ್ಯಾಂಡಲ್​ವುಡ್​ ಪ್ರವೇಶಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

https://www.youtube.com/watch?v=y6P4TboNtMo