ಕೆ.ಜಿ.ಎಫ್​. ಬಿಡುಗಡೆ: ದಿವಂಗತ ನಟ ಅಂಬರೀಷ್​ರನ್ನು ನೆನೆದ ನಟ ಯಶ್​

ಬೆಂಗಳೂರು: ಬಹುನಿರೀಕ್ಷಿತ ಕೆ.ಜಿ.ಎಫ್​. ಚಿತ್ರ ಇಂದು ವಿಶ್ವದಾದ್ಯಂತ ತೆರೆಕಂಡಿದ್ದು, ಎಲ್ಲೆಡೆ ಒಳ್ಳೆಯ ಸ್ಪಂದನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೆ ನಟ ಯಶ್​ ದಿವಂಗತ ಅಂಬರೀಷ್​ ಮನೆಗೆ ಭೇಟಿ ನೀಡಿ ಫೋಟೋಗೆ ನಮಸ್ಕರಿಸಿದ್ದಾರೆ.

ಜೆ.ಪಿ.ನಗರದಲ್ಲಿರುವ ಅಂಬಿ ಮನೆಯಲ್ಲಿ ತಿಂಗಳ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಇಂದೇ ಕೆ.ಜಿ.ಎಫ್​ ಚಿತ್ರ ಬಿಡೆಯಾಗಡೆಯಾಗಿದ್ದು, ಅಂಬಿ ಮನೆಗೆ ತೆರಳಿ ಪೂಜೆಯಲ್ಲಿ ಭಾಗವಹಿಸಿ, ಅಂಬಿ ಪೋಟೋಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ.

ಅಂಬರೀಷ್​ ಅವರ ಫೋಟೋಗೆ ನಮಸ್ಕರಿಸುತ್ತಿರುವ ಫೋಟೋವನ್ನು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿಕೊಂಡಿರುವ ಯಶ್​, ನಾನು ನಿಮ್ಮನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇವೆ ಅಣ್ಣ ಎಂದು ಬರೆದುಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

Miss you Anna..

Yash ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಡಿಸೆಂಬರ್ 20, 2018