15 ರಿಂದ 16 ಕೋಟಿ ಲೋನ್​ ಇದೆ, ಟ್ಯಾಕ್ಸ್​ ಕಟ್ಟದೇ ಯಾರು ಲೋನ್​ ಕೊಡುತ್ತಾರೆ: ಯಶ್​

ಬೆಂಗಳೂರು: ನನ್ನ ಪ್ರಕಾರ 15ರಿಂದ 16 ಕೋಟಿ ರೂ. ಲೋನ್​ ಇರಬಹುದು. 40 ಕೋಟಿ ರೂ. ಸಾಲ ಇಲ್ಲ. ಟ್ಯಾಕ್ಸ್ ಕಟ್ಟದೇ ಇದ್ದರೆ ಯಾರು ಲೋನ್ ಕೊಡ್ತಾರೆ ಎಂದು ರಾಕಿಂಗ್​ ಸ್ಟಾರ್​ ಯಶ್​ ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ಅಧಿಕಾರಿಗಳು ವಿಚಾರಣೆಗೆ ಬರಲು ಹೇಳಿದ್ದರು. ಹಾಗಾಗಿ ಬಂದಿದ್ದೇನೆ. ಈ ವಿಚಾರಣೆ ಇಂದಿಗೆ ಮುಗಿಯುವುದಲ್ಲ. ಮುಂದೆಯೂ ವಿಚಾರಣೆಗೆ ಕರೆದರೆ ಬರುತ್ತೇನೆ ಎಂದರು.

ಯಶ್​ ಆಡಿಟರ್​ ಕಚೇರಿ ಮೇಲೆ ಐಟಿ ದಾಳಿ
ನಟ ರಾಕಿಂಗ್​ ಸ್ಟಾರ್​ ಯಶ್​ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಬೆಳಗ್ಗೆ 9 ಗಂಟೆಯಿಂದ ಕಡತ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಎರಡು ಪ್ರತ್ಯೇಕ ತಂಡ ಆಡಿಟರ್ ಬಸವರಾಜ್ ಅವರ ಬ್ಯಾಂಕ್ ಖಾತೆಗಳ ಮಾಹಿತಿ ಕಲೆ ಹಾಕುತ್ತಿದ್ದು, ಇಂದು ರಾತ್ರಿಯವರೆಗೂ ದಾಖಲೆಗಳ ಪರಿಶೀಲನೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *