ಪ್ರೀತಿಯ ಪುತ್ರಿಯ ಮುಖದರ್ಶನ ಮಾಡಿಸಿದ ಮಿಸ್ಟರ್​ ಆ್ಯಂಡ್​ ಮಿಸೆಸ್​ ರಾಮಾಚಾರಿ: ಟ್ವಿಟರ್​ನಲ್ಲಿ ಭಾವಚಿತ್ರ ಬಿಡುಗಡೆ

ಬೆಂಗಳೂರು: ಸ್ಯಾಂಡಲ್​ವುಡ್​ನ ತಾರಾ ಜೋಡಿ ಯಶ್​ ಮ್ಗತು ರಾಧಿಕಾ ಪಂಡಿತ್​ ತಮ್ಮ ಪ್ರೀತಿಯ ಪುತ್ರಿಯ ಭಾವಚಿತ್ರವನ್ನು ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಬಿಡುಗಡೆ ಮಾಡಿದ್ದಾರೆ. ಮಗಳು ಹುಟ್ಟಿ 5 ತಿಂಗಳ ಬಳಿಕ ಆಕೆಯ ಮುಖದರ್ಶನ ಮಾಡಿಸುವುದಾಗಿ ಇತ್ತೀಚೆಗೆ ಹೇಳಿದ್ದರು. ಅದರಂತೆ ಟ್ವಿಟರ್​ನಲ್ಲಿ ಆಕೆಯ ಮುಖದರ್ಶನ ಮಾಡಿಸಿ, ತಮ್ಮ ಮಾತು ಉಳಿಸಿಕೊಂಡಿದ್ದಾರೆ.

ಯಶ್​ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪುತ್ರಿಯ ಫೋಟೊವನ್ನು ಹಂಚಿಕೊಂಡಿದ್ದು, ನಾವು ಮಗಳಿಗೆ ಇನ್ನೂ ನಾಮಕರಣ ಮಾಡಿಲ್ಲ. ಅಲ್ಲಿಯವರೆಗೆ ಬೇಬು ವೈಆರ್ ಎಂದಷ್ಟೇ ಆಕೆಯನ್ನು ಗುರುತಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಮತ್ತು ನಿಮ್ಮ ಪ್ರೀತಿ, ಆಶೀರ್ವಾದ ಮಗುವಿನ ಮೇಲೆ ಸದಾ ಇರಲಿ ಎಂದು ಕೋರಿದ್ದಾರೆ.

ಯಶ್-ರಾಧಿಕಾ ಪಂಡಿತ್ ದಂಪತಿಗೆ ಡಿಸೆಂಬರ್ 2ರಂದು ಹೆಣ್ಣು ಮಗು ಜನಿಸಿತ್ತು. ಅವರು ಮಗುವಿನ ಫೋಟೋವನ್ನು ಇದೂವರೆಗೂ ಬಹಿರಂಗಪಡಿಸಿರಲಿಲ್ಲ. ಅವರ ಮಗುವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈಗ ಮಗುವಿನ ಫೋಟೊವನ್ನು ಬಹಿರಂಗ ಪಡಿಸಿದ್ದು ಅಭಿಮಾನಿಗಳು ಮಗುವಿನ ಫೋಟೊ ನೋಡಿ ಸಂತಸ ವ್ಯಕ್ತ ಪಡಿಸಿದ್ದಾರೆ.