More

    ಅಭಿಮಾನಿ ಮಾಡಿದ ಹಾಡು ಬಿಡುಗಡೆ, ಕೆಜಿಎಫ್​ 2ನ ಪೋಸ್ಟರ್, 5 ಸಾವಿರ ಕೆ.ಜಿ. ತೂಕದ ಕೇಕ್​; ‘ರಾಕಿಂಗ್ ಸ್ಟಾರ್’ ಯಶ್ ಬರ್ತ್​ಡೇ ವಿಶೇಷ

    ಬೆಂಗಳೂರು: ‘ರಾಕಿಂಗ್ ಸ್ಟಾರ್’ ಯಶ್ ಬರ್ತ್​ಡೇ ಇನ್ನೇನು ಬಂದೇ ಬಿಡ್ತು. ಅದಕ್ಕಾಗಿ ಎಲ್ಲ ತಯಾರಿಗಳು ಆಗಿವೆ.

    ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ಪಂತರಪಾಳ್ಯ ಬಳಿಯ ನಂದಿ ಲಿಂಕ್ ಮೈದಾನದಲ್ಲಿ ಯಶ್ ಅವರ 216 ಅಡಿ ಎತ್ತರದ ಬೃಹತ್ ಕಟೌಟ್ ನಿರ್ವಿುಸಲಾಗಿದೆ.

    ಅದರ ಮುಂದೆ ಯಶ್ ಅವರಿಂದ 5,000 ಕೆ.ಜಿ. ಕೇಕ್ ಕಟ್ ಮಾಡಿಸುವ ಯೋಜನೆಯನ್ನು ಅಭಿಮಾನಿಗಳು ಹಾಕಿಕೊಂಡಿದ್ದಾರೆ. ಈಗಾಗಲೇ ಕೇಕ್​ ತಯಾರಾಗಿದೆ.

    ಇನ್ನು ಇಂದು ರಾತ್ರಿ 12ರಿಂದ ಮುಂಜಾನೆ 4ಗಂಟೆವರೆಗೂ ಅಭಿಮಾನಿಗಳ ಜೊತೆ ಯಶ್ ಇರಲಿದ್ದಾರೆ. ನಂದಿ ಲಿಂಕ್ ಗ್ರೌಂಡ್​ನಲ್ಲಿ ಅದ್ಧೂರಿಯಾಗಿ ನಟ ಯಶ್ ಬರ್ತಡೇ ನಡೆಯಲಿದೆ.

    ಇದೇ ವೇಳೆ ಯಶ್ ಬರ್ತಡೇಗೆ ಫ್ಯಾನ್ ಮೇಡ್ ಹಾಡು ಕೂಡ ಬಿಡುಗಡೆಯಾಗಲಿದೆ. ಸಿನಿಮಾ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದು, ಶಶಾಂಕ್ ಶೇಷಗಿರಿ ಹಾಡಿಗೆ ಧ್ವನಿ ನೀಡಿದ್ದಾರೆ.

    ಮುದ್ದು ಕೃಷ್ಣ ಟೀಮ್ ಕಡೆಯಿಂದ ಯಶ್​ಗೆ ಜನ್ಮದಿನದ ಉಡುಗೊರೆಯಾಗಿ ಈ ಹಾಡು ಬಿಡುಗಡೆಯಾಗಲಿದ್ದು, ಯಶ್ ಅವರಿಂದಲೇ ಹಾಡನ್ನು ಬಿಡುಗಡೆ ಮಾಡಿಸಲಾಗುವುದು.

    ಇಂದು ಬೆಳಗ್ಗೆ 10.08ಕ್ಕೆ ಕೆಜಿಎಫ್​ ಚಿತ್ರದ 2ನೇ ಪೋಸ್ಟರ್ ಬಿಡುಗಡೆ ಆಗಲಿದೆ ಎಂದು ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ. ಸದ್ಯ ಆಂಧ್ರಪ್ರದೇಶದ ಕಡಪದಲ್ಲಿ ‘..ಚಾಪ್ಟರ್ 2’ ಶೂಟಿಂಗ್ ನಡೆಯುತ್ತಿದ್ದು, ಇಡೀ ತಂಡ ಅಲ್ಲೇ ಬಿಡಾರ ಹೂಡಿದೆ. ಬರ್ತ್​ಡೇ ನಿಮಿತ್ತ ಇಡೀ ತಂಡ ಬೆಂಗಳೂರಿಗೆ ಆಗಮಿಸಿದೆ.

    ನಟ ಯಶ್ ಹುಟ್ಟುಹಬ್ಬಕ್ಕೆ ಆಗಮಿಸುತ್ತಿರುವ ಅಭಿಮಾನಿಗಳಿಗಾಗಿ ಬುಧವಾರ ಬೆಳಗ್ಗೆ 9ಗಂಟೆಯಿಂದ ಸಂಜೆ 6ಗಂಟೆವರೆಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.

    ಮೆಜೆಸ್ಟಿಕ್ ರೈಲ್ವೇ ಗೇಟ್, ಮತ್ತು ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ನಂದಿ ಲಿಂಕ್ ಗ್ರೌಂಡ್​ವರೆಗೂ ಸಂಘದ ಲೋಗೋ ಇರುವ ಶಬರಿ ಬಸ್​ಗಳು ಓಡಾಡಲಿವೆ. ಇದನ್ನು ಅಭಿಮಾನಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಯಶ್​ ಅಭಿಮಾನಿಗಳ ಸಂಘ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts