ಯರಗೋಳ ಗ್ರಾಮಕ್ಕೆ ವೇಗದೂತ್ ಬಸ್ ಓಡಿಸಿ

ಅಂಬೇಡ್ಕರ್ ಸೇನೆ ಒತ್ತಾಯ | ಶಾಸಕ ಕಂದಕೂರ , ಅಧಿಕಾರಿಗಳಿಗೆ ಮನವಿ

ವಿಜಯವಾಣಿ ಸುದ್ದಿಜಾಲ ಯಾದಗಿರಿ
ಜಿಲ್ಲೆಯ ದೊಡ್ಡ ಊರುಗಳಲ್ಲಿ ಒಂದಾಗಿರುವ ಮತ್ತು ರಾಷ್ಟಿçÃಯ ಹೆದ್ದಾಗಿಗೆ ಹೊಂದಿಕೊAಡಿರುವ ಯರಗೋಳ್ ಗ್ರಾಮಕ್ಕೆ ಎಲ್ಲಾ ವೇಗದೂತ ಬಸ್‌ಗಳು ಸಂಚರಿಸುವAತೆ ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ್ ಸೇನೆ ಜಿಲ್ಲಾ ಸಮಿತಿ ಮನವಿ ಮಾಡಿದೆ.
ಈ ಕುರಿತು ಜಿಲ್ಲಾಧಿಕಾರಿಗಳು, ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಹಾಗೂ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದ ಸೇನೆ ಕಾರ್ಯಕರ್ತರು, ಯರಗೋಳ ಜನತೆಯ ಬೇಡಿಕೆ ಈಡೇರಿಸಬೆಕೆಂದು ಒತ್ತಾಯಿಸಿದ್ದಾರೆ.
ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ನಡುವಣ ಪ್ರಮುಖ ಸಂಚಾರದ ಊರಾದ ಯರಗೋಳ ಗ್ರಾಮದಲ್ಲಿ ಸುಮಾರು ೧೫೦೦೦ ಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದು, ತಾಲೂಕಾ ಕೇಂದ್ರವಾಗುವ ಎಲ್ಲಾ ಲಕ್ಷಣಗಳು ಹೊಂದಿದೆ. ಈ ಗ್ರಾಮಕ್ಕೆ ಹೊಂದಿಕೊAಡಿರುವ ಚಿತ್ತಾಪೂರ ತಾಲೂಕಿನ ಹಲವಾರು ತಾಂಡಾಗಳಾದ ಯಾಗಾಪೂರ, ಬಾಚವಾರ ಗ್ರಾಮಗಳಿದ್ದು, ಈ ಗ್ರಾಮದ ತಾಂಡಾಗಳ ಜನರು ಶಾಲೆ, ಕಾಲೇಜು ವಿದ್ಯಾರ್ಥಿಗಳು ಮತ್ತು ರೈತರು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗಾಗಿ ಯಾದಗಿರಿ- ಕಲಬುರಗಿಗೆ ಹೋಗಬೇಕಾದರೆ ಈ ಗ್ರಾಮದಿಂದಲೇ ಪ್ರಯಾಣ ಮಾಡಬೇಕಾಗುತ್ತದೆ.
ಹಲವಾರು ಸರ್ಕಾರಿ ಖಾಸಗಿ ಕಛೇರಿಗಳು, ಉಕ್ಕಡ ಪೊಲೀಸ್ ಠಾಣೆ, ಬ್ಯಾಂಕ್‌ಗಳು, ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳು ಈ ಗ್ರಾಮದಲ್ಲಿ ಇದ್ದು, ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬೇರೆ ಬೇರೆ ಕಡೆಯಿಂದ ಇಲ್ಲಿಗೆ ಬರುತ್ತಾರೆ. ಅನೇಕರು ಇಲ್ಲಿಂದ ಬೇರೆ, ಬೇರೆ ಕಡೆಗೆ ಕೆಲಸದ ನಿಮಿತ್ಯ ನಿತ್ಯ ಹೊಗಿ,ಬಂದು ಮಾಡುತ್ತಾರೆ.ಆದರೇ ನಿಗದಿತ ಸಮಯಕ್ಕೆ ಬಸ್‌ಗಳ ಸಂಚಾರವಿಲ್ಲದೇ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ. ಸಾಕಷ್ಟು ಬಸ್ ಸಂಚಾರವಿದ್ದರೂ ಅವುಗಳು ಬೈಪಾಸ್ ರಸ್ತೆಯಿಂದ ಹೋಗುತ್ತಿರುವ ಕಾರಣ ಈ ಗ್ರಾಮದಲ್ಲಿ ಬಸ್ಸಿಗಾಗಿ ಕಾಯುವ ಸಾವಿರಾರು ಜನರು ಪರದಾಡುವ ಸ್ಥಿತಿ ಇದ್ದು, ಕೂಡಲೇ ಯರಗೋಳ ಗ್ರಾಮದ ಮೂಲಕ ಹೆಚ್ಚಿನ ಬಸ್‌ಗಳನ್ನು ಓಡಿಸಬೇಕು ಮತ್ತು ಇವುಗಳ ಉಸ್ತುವಾರಿಗಾಗಿ ಓರ್ವ ನಿಯಂತ್ರಕರನ್ನು ಇಲ್ಲಿ ನಿಯೋಜಿಸಬೇಕೆಂದು ಮನವಿ ಮಾಡಿದ್ದಾರೆ.ಈ ಮುಖ್ಯವಾದ ಬೇಡಿಕೆ ಒಂದು ವಾರದಲ್ಲಿ ಈಡೆರಿಸದಿದ್ದರೇ ಯರಗೋಳ ಮುಖ್ಯ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದ್ದಾರೆ.
ಶಾಸಕ ಶರಣಗೌಡ ಕಂದಕೂರ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಅಂಬೇಡ್ಕರ್ ಸೇನೆ ಜಿಲ್ಲಾದ್ಯಕ್ಷ ಭೀಮಾಶಂಕರ ಯರಗೋಳ ಮನವಿ ಸಲ್ಲಿಸಿದರು.ಜೆಡಿಎಸ್ ಮುಖಂಡ ಮಾರ್ಥಂಡಪ್ಪ ಮಾನೇಗಾರ, ಬಾಬು ಚವ್ಹಾಣ, ಸೇನೆ ಕಾರ್ಯಕರ್ತರಾದ ಸೈದಪ್ಪ ಸೋನೆದಾರ, ನ್ಯಾಯವಾದಿ ಮರಲಿಂಗ ಅನವಾರ, ಶಂಕರ ಅನವಾರ, ಮಲ್ಲಿಕಾರ್ಜುನ, ಮಹೇಶ ರÀಂಗಾನೋರ್, ಕಾಂತರಾಜ್ ಹಾದಿಮನಿ ಇತರರಿದ್ದರು.
—-

Share This Article

ನರ ದೌರ್ಬಲ್ಯಕ್ಕೆ ನೆಲ್ಲಿಕಾಯಿಯೇ ರಾಮಬಾಣ! ಇದರ ಅನೇಕ ಪ್ರಯೋಜನಗಳ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರುತ್ತೆ | Gooseberry

Gooseberry : ಪ್ರಕೃತಿಯಲ್ಲಿ ಹಲವು ರೀತಿಯ ಔಷಧಿಗಳಿವೆ. ಅವು ನಮ್ಮ ಕಣ್ಣಿಗೆ ಗೋಚರಿಸುತ್ತಿದ್ದರೂ ಅವುಗಳಲ್ಲಿರುವ ವಿಶೇಷ…

ಕೊರಿಯನ್ನರು, ಚೀನಿಯರು, ಜಪಾನಿಯರು ರಾತ್ರಿ ಹೊತ್ತು ಸ್ನಾನ ಮಾಡೋದೇಕೆ?ಅಚ್ಚರಿಯ ಮಾಹಿತಿ ಇಲ್ಲಿದೆ..! Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…

ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನಿ! ಅನಾರೋಗ್ಯ ದೂರ ಮಾಡಿ…Mango

ಬೆಂಗಳೂರು: ( Mango ) ಬೇಸಿಗೆಯಲ್ಲಿ  ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.…