ಮಸ್ಕಿ: ಪಟ್ಟಣದ ಖೇಣೆದ ಸಿದ್ದಪ್ಪ ಕಾಲನಿಯಲ್ಲಿರುವ ಯಮನೂರಪ್ಪ ದರ್ಗಾದ 35ನೇ ವರ್ಷದ ಉರುಸು ಗುುವಾರ ಶ್ರದ್ಧಾಭಕ್ತಿಯಿಂದ ಜರುಗಿತು.
ಇದನ್ನೂ ಓದಿ:ಯಮನೂರಪ್ಪ ಉರುಸು ಆಚರಣೆ
ಪಟ್ಟಣದ ಕಿಲ್ಲಾದಲ್ಲಿರುವ ಹಜರತ್ ಮೌಲಾಲಿ ದರ್ಗಾದಿಂದ ಬಾಜಾ-ಭಜಂತ್ರಿಯೊಂದಿಗೆ ಗಂಧದ ಮೆರವಣಿಗೆ ದರ್ಗಾವರೆಗೆ ನಡೆಯಿತು. ಭಕ್ತರು ಹೂವು ಮುಡಿಸಿ ವಿಶೇಷ ಪೂಜೆ ಸಲ್ಲಿಸಿ, ಸಕ್ಕರೆ, ಮಾದ್ಲಿ ನೈವೇದ್ಯ ನೀಡಿ, ದೀರ್ಘದಂಡ ನಮಸ್ಕಾರ ಹಾಕಿ ಪೂಜೆ ಸಲ್ಲಿಸಿದರು.
ಪ್ರಮುಖರಾದ ಬಸವನಗೌಡ ಪೊಲೀಸ್ ಪಾಟೀಲ್, ಹನುಮಂತಪ್ಪ ತೋರಣದಿನ್ನಿ, ರಾಮಣ್ಣ ಕುನಟಿಗಿ, ಮಂಜುನಾಥ ಮಾಟೂರು, ಶಾಹೀದಿ ಖಾಜಾ, ದ್ಯಾವಪ್ಪ, ದುರುಗಪ್ಪ ಲಿಂಗದಬಂಡಿ, ಯಮನೂರ, ಮಲ್ಲಪ್ಪ ಕುನಟಿಗಿ, ಶಂಕರಗೌಡ ಪೊಪಾ, ಪಂಪಾಪತಿ ಹೊಸಮಠ, ವೆಂಕಟೇಶ ಮಂಗನಾಳ ಇತರರಿದ್ದರು.