ಇಂದು ಯುರೋಕಪ್ ಫೈನಲ್: ಬರ್ಲಿನ್‌ನಲ್ಲಿ ಇಂಗ್ಲೆಂಡ್- ಸ್ಪೇನ್ ಸೆಣಸಾಟ, ವಿಜೇತ ತಂಡಕ್ಕೆ ಸಿಗಲಿದೆ 71.87 ಕೋಟಿ ರೂ.

blank

ಬರ್ಲಿನ್: ಹಾಲಿ ರನ್ನರ್ ಅಪ್ ಇಂಗ್ಲೆಂಡ್ ಹಾಗೂ ಮೂರು ಬಾರಿಯ ಚಾಂಪಿಯನ್ ಸ್ಪೇನ್ ತಂಡಗಳು ಪ್ರತಿಷ್ಠಿತ ಯುರೋ ಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಎದುರಾಗಲಿವೆ. 1936ರಲ್ಲಿ ನಿರ್ಮಿಸಲ್ಪಟ್ಟ ಒಲಿಂಪಿಯಾ ಸ್ಟೇಡಿಯಂನಲ್ಲಿ ಭಾನುವಾರ ಉಭಯ ತಂಡಗಳು ಪ್ರಶಸ್ತಿ ಕಾದಾಟ ನಡೆಸಲಿದ್ದು, ಭವಿಷ್ಯದ ತಾರೆ ಎನಿಸಿರುವ 17 ವರ್ಷದ ಲ್ಯಾಮಿನ್ ಯಮಲ್ ಹಾಗೂ 21 ವರ್ಷದ ಜೂಡ್ ಬೆಲ್ಲಿಂಗ್‌ಹ್ಯಾಮ್ ಮುಖಾಮುಖಿಗೆ ವೇದಿಕೆ ಎನಿಸಿದೆ. ಆರು ವರ್ಷಗಳ ಬಳಿಕ ಉಭಯ ತಂಡಗಳು ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ರನ್ನರ್‌ಅಪ್ ತಂಡ 44.92 ಕೋಟಿ ರೂ. ಪಡೆಯಲಿದೆ.

ಟೂರ್ನಿಯ ಆರಂಭಕ್ಕೂ ಮುನ್ನ ಫೇವರಿಟ್ ಎನಿಸದ ಸ್ಪೇನ್, ಹಾಲಿ ಚಾಂಪಿಯನ್ ಇಟಲಿ, ನಾಕೌಟ್‌ನಲ್ಲಿ ಆತಿಥೇಯ ಜರ್ಮನಿ ಹಾಗೂ ್ರಾನ್ಸ್ ತಂಡಗಳನ್ನು ಮಣಿಸಿ ಪ್ರಶಸ್ತಿಯ ಫೇವರಿಟ್ ಎನಿಸಿದೆ. ಸತತ ಆರು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಸ್ಪೇನ್ ತಂಡ 2008-12ರಲ್ಲಿ ಸ್ಥಾಪಿಸಿದ ಅಧಿಪತ್ಯದ ಗತವೈಭವ ಮರುಕಳುಹಿಸುವ ಸೂಚನೆ ನೀಡಿದೆ.

2008 ಹಾಗೂ 2012ರಲ್ಲಿ ಸತತ 2 ಯುರೋ ಕಪ್ ಜಯಿಸಿದ್ದ ಸ್ಪೇನ್, 2010ರಲ್ಲಿ ಫಿಾ ಚಾಂಪಿಯನ್ ಆಗಿತ್ತು. ಇದುವರೆಗೆ ಟೂರ್ನಿಯಲ್ಲಿ 13 ಗೋಲುಗಳನ್ನು ದಾಖಲಿಸಿರುವ ಸ್ಪೇನ್‌ಗೆ ಲ್ಯಾಮಿನ್ ಯಮಲ್, ನಿಕೋ ವಿಲಿಯಮ್ಸ್ ಹಾಗೂ ಡ್ಯಾನಿ ಓಲ್ಮೊ ಪ್ರಮುಖ ತಾರೆಗಳಾಗಿದ್ದಾರೆ. ಕೈಲಿಯಾನ್ ಎಂಬಾಪೆ, ಕ್ರಿಶ್ಚಿಯಾನೊ ರೊನಾಲ್ಡೊ ಹಾಗೂ ಹ್ಯಾರಿ ಕೇನ್ ಅವರಂಥ ಸ್ಟಾರ್ ಆಟಗಾರರ ನಡುವೆ ಮಿಂಚಿರುವ ಲ್ಯಾಮಿಲ್ ಯಮಲ್ ಸ್ಪೇನ್‌ನ ಪ್ರಮುಖ ಬಲ. ಸೆಮೀಸ್‌ನಲ್ಲಿ ಟೂರ್ನಿ ಇತಿಹಾಸದಲ್ಲೇ ಗೋಲು ಸಿಡಿಸಿದ ಅತಿ ಕಿರಿಯರೆನಿಸಿದ ಯಮಲ್, ಶನಿವಾರವಷ್ಟೇ 17ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಕೈಲಿಯಾನ್ ಎಂಬಾಪೆ 2018ರಲ್ಲಿ 19ನೇ ವಯಸ್ಸಿನಲ್ಲಿ ಮತ್ತು ಪೀಲೆ 1958ರಲ್ಲಿ 17ನೇ ವಯಸ್ಸಿನಲ್ಲಿ ಫಿಾ ವಿಶ್ವಕಪ್‌ನಂಥ ಮೇಜರ್ ಪ್ರಶಸ್ತಿ ಗೆದ್ದಿದ್ದ ಸಾಧನೆಯನ್ನು ಸರಿಗಟ್ಟುವ ಅವಕಾಶ ಯಮಲ್ ಮುಂದಿದೆ.

1966ರ ಬಳಿಕ ಪ್ರಮುಖ ಟ್ರೋಫಿ ಜಯಿಸಲು ವಿಫಲವಾಗಿರುವ ಇಂಗ್ಲೆಂಡ್ ಕಳೆದ ಬಾರಿ ಕೈತಪ್ಪಿದ ಟ್ರೋಫಿಯನ್ನು ಈ ಬಾರಿ ಎತ್ತಿಹಿಡಿಯುವ ಹಂಬಲದಲ್ಲಿದೆ. ನಾಯಕ ಹ್ಯಾರಿ ಕೇನ್ ಹಾಗೂ ತರಬೇತುದಾರ ಗರೆಥ್ ಸೌತ್‌ಗೇಟ್ ಮಾರ್ಗದರ್ಶನದಲ್ಲಿ ತ್ರಿ ಲಯನ್ಸ್ ಖ್ಯಾತಿಯ ಇಂಗ್ಲೆಂಡ್, ಮೊದಲ ಬಾರಿಗೆ ತವರಿನಾಚೆ ಪ್ರಮುಖ ಟೂರ್ನಿಯ ಫೈನಲ್ ಆಡಲಿದೆ. ಹ್ಯಾರಿ ಕೇನ್ ಜತೆಗೆ ಜೂಡ್ ಬೆಲ್ಲಿಂಗ್‌ಹ್ಯಾಮ್, ಫಿಲ್ ಫೋಡೆನ್, ಬುಕಾಯೊ ಸಾಕ ಇಂಗ್ಲೆಂಡ್ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ.

ಹ್ಯಾರಿ ಕೇನ್ ಟೂರ್ನಿಯಲ್ಲಿ ಗರಿಷ್ಠ ಗೋಲು ದಾಖಲಿಸಿದ ಆಟಗಾರರ ಪೈಕಿ ಜಂಟಿ ಅಗ್ರಸ್ಥಾನದಲ್ಲಿದ್ದು, ಟೂರ್ನಿಯಲ್ಲಿ ಇದುವರೆಗೆ ಆರು ಆಟಗಾರರು ತಲಾ 3 ಗೋಲು ದಾಖಲಿಸಿದ್ದಾರೆ. ಇವರಲ್ಲಿ ಹ್ಯಾರಿ ಕೇನ್ ಹಾಗೂ ಸ್ಪೇನ್‌ನ ಡ್ಯಾನಿ ಓಲ್ಮೋ ಮಾತ್ರ ೈನಲ್ ಪಂದ್ಯ ಆಡಲಿದ್ದು, ಇವರಿಬ್ಬರಲ್ಲಿ ಒಬ್ಬರು ಗೋಲು ಸಿಡಿಸಿದರೆ ಗೋಲ್ಡನ್ ಬೂಟ್ ಜಯಿಸಲಿದ್ದಾರೆ. ಇಲ್ಲವಾದರೆ ಆರು ಆಟಗಾರರಿಗೂ ಪ್ರಶಸ್ತಿಯನ್ನು ಹಂಚಿಕೆ ಮಾಡುವುದಾಗಿ ಯುಇಎ್ಎ ಶನಿವಾರ ೋಷಿಸಿದೆ.

ಆರಂಭ: ರಾತ್ರಿ 12.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್

Share This Article

ಅಪ್ಪಿತಪ್ಪಿಯೂ ಈ ಆಹಾರಗಳನ್ನು ತುಪ್ಪದೊಂದಿಗೆ ಸೇವಿಸಬೇಡಿ; ಉತ್ತಮ ಆರೋಗ್ಯಕ್ಕಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದಲ್ಲಿ ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ…

ಕಾಫಿ ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಪ್ರಪಂಚದಾದ್ಯಂತ ಕಾಫಿ ಪ್ರಿಯರನ್ನು ಕಾಣಬಹುದು. ಇಲ್ಲಿಯವರೆಗೆ ಕಾಫಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇದು ಅದರ…

ಕಪ್ಪು ದ್ರಾಕ್ಷಿ vs ಹಸಿರು ದ್ರಾಕ್ಷಿ.. ಆರೋಗ್ಯಕ್ಕೆ ಯಾವುದು ಉತ್ತಮ..? grapes

grapes: ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಹಸಿರು…