ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಒತ್ತಾಯ

ಯಲಬುರ್ಗಾ: ಕುಕನೂರು ಪಟ್ಟಣದಲ್ಲಿ ಮಾಜಿ ಶಾಸಕ ದಿ.ಶಿರೂರು ವೀರಭದ್ರಪ್ಪನವರ ಕಂಚಿನ ಪುತ್ಥಳಿ ಸ್ಥಾಪಿಸುವಂತೆ ಒತ್ತಾಯಿಸಿ ಶಾಸಕ ಹಾಲಪ್ಪ ಆಚಾರ್‌ಗೆ ಬಿಜೆಪಿ ಮುಖಂಡರು ಶನಿವಾರ ಮನವಿ ಸಲ್ಲಿಸಿದರು.

ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ ಮಾತನಾಡಿ, ಯಲಬುರ್ಗಾ ತಾಲೂಕಿನವರಾದ ಸ್ವಾತಂತ್ರ್ಯ ಹೋರಾಟಗಾರ ದಿ.ಶಿರೂರು ವೀರಭದ್ರಪ್ಪನವರು ಎರಡು ಬಾರಿ ಶಾಸಕರಾಗಿದ್ದರು. ದೊಡ್ಡಮೇಟಿ ಅಂದಾನಪ್ಪವರು, ಹರ್ಡೇಕರ್ ಮಂಜಪ್ಪನವರ ಮಾರ್ಗದರ್ಶನದಲ್ಲಿ ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ್ದಾರೆ. ರೈತರ ಆರ್ಥಿಕ ಸ್ಥಿತಿಗತಿ ಸುಧಾರಿಸಲು ಸಹಕಾರಿ ಚಳವಳಿ ಪ್ರಾರಂಭಿಸಿದರು. ಶಿರೂರು ಗ್ರಾಮದ ಮಾಜಿ ಶಾಸಕ ದಿ.ಶಿರೂರು ವೀರಭದ್ರಪ್ಪ ಕೊಡುಗೆ ಎಲ್ಲ ರಂಗದಲ್ಲಿಯೂ ಅಪಾರವಾಗಿದೆ. ಈಗಾಗಲೇ ಕುಕನೂರಲ್ಲಿ ವೃತ್ತವಿದೆ ಅಲ್ಲಿ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.

ತಾಪಂ ಸದಸ್ಯ ಶರಣಪ್ಪ ಈಳಿಗೇರ್, ಮುಖಂಡರಾದ ಬಸಲಿಂಗಪ್ಪ ಭೂತೆ, ಸಿ.ಎಚ್.ಪಾಟೀಲ್, ರತನ್ ದೇಸಾಯಿ, ಶಿವಕುಮಾರ ನಾಗಲಾಪುರಮಠ, ಈರಪ್ಪ ಕುಡಗುಂಟಿ, ಸಿದ್ರಾಮೇಶ ಬೆಲೇರಿ, ಅಮರೇಶ ಹುಬ್ಬಳ್ಳಿ, ನಾಗರಾಜ ಹಾಲಳ್ಳಿ ಇನ್ನಿತರರಿದ್ದರು.

Leave a Reply

Your email address will not be published. Required fields are marked *