ಬೆಳಗಾವಿ (ಉಗರಗೋಳ): ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿ ಗುರುವಾರ ಧಾರಾಕಾರ ಮಳೆ ಸುರಿದಿದ್ದರಿಂದ ಹಳ್ಳ-ಕೊಳ್ಳ ಉಕ್ಕಿ ಹರಿದವು.
ಎಣ್ಣೆ ಹೊಂಡ ತುಂಬಿ ಹರಿದು ಯಲ್ಲಮ್ಮದೇವಿ ದೇವಸ್ಥಾನಕ್ಕೆ ಅಪಾರ ಪ್ರಮಾಣದಲ್ಲಿ ಮಳೆ ನೀರು ನುಗ್ಗಿತು. ಇಡೀ ದೇವಸ್ಥಾನ ಜಲಾವೃತವಾಗಿತ್ತು. ಹಾಗಾಗಿ ದೇವಿ ದರ್ಶನಕ್ಕಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬಂದಿದ್ದ ಭಕ್ತರು ಪರದಾಡಿದರು.
ಈ ಹಿಂದೆ ಎಣ್ಣೆ ಹೊಂಡ ತುಂಬಿ ಹರಿದರೂ, ಮಳೆ ನೀರು ಸರಾಗವಾಗಿ ಹರಿದುಹೋಗುತ್ತಿತ್ತು. ಆದರೆ, ಈ ಬಾರಿ ಚರಂಡಿ ಗಳು ಬ್ಲಾಕ್ ಆಗಿದ್ದರಿಂದ ದೇವಸ್ಥಾನಕ್ಕೆ ನೀರು ನುಗ್ಗಿದೆ.
ಬೈಲಹೊಂಗಲ, ಗೋಕಾಕ್, ರಾಮದುರ್ಗ ಮತ್ತು ರಾಯಬಾಗ ತಾಲೂಕಿನಲ್ಲೂ ಉತ್ತಮ ಮಳೆ ಸುರಿದಿದೆ.