ಯೋಗದಿಂದ ಚೈತನ್ಯ ವೃದ್ಧಿಸುತ್ತದೆ

ಯಲಬುರ್ಗಾ: ಯೋಗದಿಂದ ಚೈತನ್ಯ ವೃದ್ಧಿಯಾಗುತ್ತದೆ ಎಂದು ಪತಂಜಲಿ ಯೋಗ ಸಮಿತಿಯ ತಾಲೂಕು ಪ್ರಭಾರ ಸಂಗಣ್ಣ ಟೆಂಗಿನಕಾಯಿ ಹೇಳಿದರು.

ಪಟ್ಟಣದ ಬೇವೂರ ರಸ್ತೆಯಲ್ಲಿರುವ ಸಂಗಣ್ಣ ಟೆಂಗಿನಕಾಯಿ ಮಿಲ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪತಂಜಲಿ ಯೋಗಾಸನ ಸಮಿತಿ, ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಆಯೋಜಿಸಿರುವ ಉಚಿತ ಯೋಗ ಪ್ರಾಣಾಯಾಮ ವಿಶೇಷ ಶಿಬಿರದಲ್ಲಿ ಭಾನುವಾರ ಮಾತನಾಡಿದರು.

ಯೋಗ ಮಾಡುವುದರಿಂದ ನಿತ್ಯ ಬದುಕು ಹುಮ್ಮಸ್ಸಿನಿಂದ ಇರುತ್ತದೆ. ಉತ್ಸಾಹದಿಂದ ಇರಲು ಸಹಕಾರಿಯಾಗುತ್ತದೆ. ಆರೋಗ್ಯ ಸುಧಾರಣೆಯಾಗುವುದರ ಜತೆಗೆ ದೈಹಿಕ, ಮಾನಸಿಕವಾಗಿ ಸದೃಢರಾಗಿರಲು ಸಾಧ್ಯವಾಗುತ್ತದೆ. ಕ್ರಿಯಾಶೀಲ ಮನಸ್ಸು ಮನುಷ್ಯನನ್ನು ಉಲ್ಲಾಸದಿಂದ ಇರಲು ಕಾರಣವಾಗುತ್ತದೆ. ಧ್ಯಾನದಲ್ಲಿ ಪರಮಾತ್ಮನನ್ನು ನೆನೆಯುವುದರಿಂದ ಮನಸ್ಸು ಏಕಾಗ್ರತೆಯಿಂದ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪ್ರತಿದಿನ ಯೋಗದಲ್ಲಿ ತೊಡಗಬೇಕು ಎಂದರು.

ಯೋಗ ಶಿಕ್ಷಕರಾದ ಮಲ್ಲಪ್ಪ ಸತ್ತೂರ, ಬಿ.ಎಂ.ಶಿರೂರ, ಫಕೀರಶೆಟ್ಟಿ ಕಜ್ಜಿ, ಪರಶುರಾಮ ಹೊಸಮನಿ, ವೀರೇಶ ಟೆಂಗಿನಕಾಯಿ ಗಾಳೆಪ್ಪ, ರತ್ನಾ ಹೊಸಮನಿ ಇತರರು ಇದ್ದರು.

Leave a Reply

Your email address will not be published. Required fields are marked *