ಯಲಬುರ್ಗಾ: ಪ್ರಯಾಣಿಕರನ್ನು ಸುರಕ್ಷಿತವಾಗಿ ನಿಗದಿತ ಸ್ಥಳಕ್ಕೆ ತಲುಪಿಸುವಲ್ಲಿ ಚಾಲಕರ ಶ್ರಮ ಸಾಕಷ್ಟಿದೆ ಎಂದು ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್ ಹೇಳಿದರು.
ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಾಲಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಯಾಣಿಕರ ರಕ್ಷಾ ಕವಚವಾಗಿ ಸೇವೆ ಸಲ್ಲಿಸುವ ಚಾಲಕರು ಮತ್ತು ನಿರ್ವಾಹಕರ ಜವಾಬ್ದಾರಿ ದೊಡ್ಡದಿದೆ. ಚಾಲಕರೊಂದಿಗೆ ಪ್ರಯಾಣಿಕರ ಸಹಕಾರ ಅಗತ್ಯ. ಚಾಲಕರು ಸಂಯಮದಿಂದ ವಾಹನ ಚಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಉಗ್ರಾಣಾಧಿಕಾರಿ ಬಿ.ಆರ್.ತಳವಾರ್ ಕಾರ್ಯಕ್ರಮ ಉದ್ಘಾಟಿಸಿದರು. ಸಾರಿಗೆ ಘಟಕ ವ್ಯವಸ್ಥಾಪಕ ಸಣ್ಣಕುಂಟೆಪ್ಪ ಆಲೂರು, ಎಎಸ್‌ಐ ಬಸವರಾಜ ಮಾಲಗಿತ್ತಿ, ಚಾಲಕರಾದ ಬಸವರಾಜ, ಶಿವಪ್ಪ, ರಾಜು ಮುಧೋಳ ಇತರರಿದ್ದರು.