ಮಾರುತೇಶ್ವರ ಜಾತ್ರೆಯಲ್ಲಿ ಸೌಲಭ್ಯ ಕಲ್ಪಿಸಿ

Preliminary Meeting

ಯಲಬುರ್ಗಾ: ಮಸಾರಿ ಭಾಗದ ಆರಾಧ್ಯದೈವ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಯಶಸ್ಸಿಗೆ ಕೈಜೋಡಿಸಬೇಕು ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.

ತಾಲೂಕಿನ ಸುಕ್ಷೇತ್ರ ಚಿಕ್ಕವಂಕಲಕುಂಟಾ ಗ್ರಾಮದ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಐತಿಹಾಸಿಕ ಶ್ರೀ ಮಾರುತೇಶ್ವರ ಜಾತ್ರೆ ಫೆ.18, 19ರಂದು ನಡೆಯಲಿದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಗ್ರಾಪಂನಿಂದ ಸೌಲಭ್ಯ ಕಲ್ಪಿಸಬೇಕು. ಹಿರೇವಂಕಲಕುಂಟಾದಿಂದ ತಾಳಕೇರಿ ರಸ್ತೆಬದಿ ಸ್ವಚ್ಛಗೊಳಿಸಿ. ಜಾತ್ರೆ ವೇಳೆ ವಿದ್ಯುತ್ ಕಡಿತ ಆಗದಂತೆ ನೋಡಿಕೊಳ್ಳಬೇಕು.

ಕೆರೆ ಅಂಗಳದಲ್ಲಿ ಮತ್ತು ಜಾತ್ರೆ ನಡೆಯುವ ಸ್ಥಳದಲ್ಲಿ ವಿದ್ಯುತ್ ಪರಿವರ್ತಕ ಇದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಜೆಸ್ಕಾಂ ಸ್ಥಳಾಂತರಗೊಳಿಸಬೇಕು. ದೇವಸ್ಥಾನದ ಮುಂಭಾಗ ಅಳವಡಿಸಲಾದ ಹೈಮಾಸ್ಟ್ ವಿದ್ಯುತ್ ದ್ವೀಪ ದುರಸ್ತಿಗೊಳಿಸಿ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ರಥೋತ್ಸವಕ್ಕೂ ಮುನ್ನ ರಥ ತಪಾಸಣೆ ನಡೆಸಿ ದೃಢೀಕರಣ ಪತ್ರ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆ ಎಇಇ ಬಿ.ಮಲ್ಲಿಕಾರ್ಜುನ, ಇಂಜಿನಿಯರ್ ಮಹಾಂತೇಶ ಹಿರೇಮಠಗೆ ಸೂಚಿಸಿದರು.

ಉಪತಹಸೀಲ್ದಾರ್ ವಿಜಯಕುಮಾರ್ ಗುಂಡೂರ ಮಾತನಾಡಿ, ಪೊಲೀಸ್ ಇಲಾಖೆ ಬಂದೋಬಸ್ತ್‌ಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ಕಳೆದ ಎಪ್ರಿಲ್‌ನಿಂದ ಡಿ.31ರವರೆಗೆ ದೇವಸ್ಥಾನದ 17ಲಕ್ಷ ರೂ. ಎಕ್ಸಿಸ್ ಬ್ಯಾಂಕ್‌ಗೆ ಜಮೆ ಮಾಡಲಾಗಿದೆ. ಅದರಲ್ಲಿ 6 ಲಕ್ಷ ರೂ. ಖರ್ಚು ಮಾಡಲಾಗಿದೆ. ಉಳಿದ 11ಲಕ್ಷ ರೂ. ಜಮೆ ಇದೆ ಎಂದರು.

ಸಾರಿಗೆ ಘಟಕ ವ್ಯವಸ್ಥಾಪಕ ಕುಂಟೆಪ್ಪ ಆಲೂರು, ವೈದ್ಯಾಧಿಕಾರಿ ಟಿ.ಜೆ.ಘಾಟಗೆ, ಕಮಿಟಿ ವ್ಯವಸ್ಥಾಪಕ ಚಂದಪ್ಪ ಕುರಿ, ಗ್ರಾಪಂ ಕಾರ್ಯದರ್ಶಿ ಶಿವಪ್ಪ ಪುರ್ತಗೇರಿ, ಪಿಡಬ್ಲೂೃಡಿ ಇಂಜಿನೀಯರ್ ಮಹಾಂತೇಶ, ಕೆಇಬಿ ಎಸ್‌ಒ ಸೋಮಶೇಖರ, ವಿಎಒಗಳಾದ ಶಿವಶರಣಪ್ಪಗೌಡ ಪಾಟೀಲ್, ಅಂಜುಮಾ ಇತರರಿದ್ದರು.

Share This Article

ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt

salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…

ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts

gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ.  ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…

ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream

ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…