More

    ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ಸಿಗುವವರೆಗೆ ಹೋರಾಟ: ಹಿರಿಯ ಮುಖಂಡ ವೀರಣ್ಣ ಹುಬ್ಬಳ್ಳಿ ಹೇಳಿಕೆ

    ಯಲಬುರ್ಗಾ: ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ 2ಎ ಮೀಸಲಾತಿ ಕಲ್ಪಿಸುವವರೆಗೂ ಹೋರಾಟ ನಿಲ್ಲದು ಎಂದು ಸಮುದಾಯದ ಹಿರಿಯ ಮುಖಂಡ ವೀರಣ್ಣ ಹುಬ್ಬಳ್ಳಿ ಹೇಳಿದರು.

    ರಾಜ್ಯ ಪಂಚಮಸಾಲಿ ಸಮುದಾಯ ಸಂಘಟನೆಯ 28ನೇ ವಾರ್ಷಿಕೋತ್ಸವ ನಿಮಿತ್ತ ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ ಪುತ್ಥಳಿಗೆ ಸೋಮವಾರ ಮಾಲಾರ್ಪಣೆ ಮಾಡಿ ಮಾತನಾಡಿದರು. 1994ರಲ್ಲಿ ಪಟ್ಟಣದಲ್ಲಿ ಪ್ರಪ್ರಥಮ ಪಂಚಮಸಾಲಿ ಸಂಘಟನೆ ಆಯೋಜಿಸಿದ್ದ ಸಮಾವೇಶವನ್ನು ಅಂದಿನ ಸಿಎಂ ವೀರಪ್ಪ ಮೊಯ್ಲಿ ಉದ್ಘಾಟಿಸಿದ್ದರು. ಅಂದಿನಿಂದ ಸಮುದಾಯ ಸಂಘಟನೆಯಾಗುತ್ತಾ ಬಂದಿದ್ದು, ಸರ್ಕಾರಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ.

    ಆರ್ಥಿಕ ಮತ್ತು ಶೈಕ್ಷಣಿಕ ದೃಷ್ಟಿಯಿಂದ 2ಎ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸಮುದಾಯದ ತಾಲೂಕು ಕಾರ್ಯದರ್ಶಿ ರಾಜಶೇಖರ ನಿಂಗೋಜಿ ಮಾತನಾಡಿ, 2008ರಲ್ಲಿ ಸಮುದಾಯದ ಗುರುಪೀಠ ಸ್ಥಾಪನೆಯಾಯಿತು. 2ಎ ಮೀಸಲಿಗಾಗಿ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಯುತ್ತಿದೆ. ಸರ್ಕಾರ ಬೇಡಿಕೆ ಈಡೇರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸಮುದಾಯದ ತಾಲೂಕು ಅಧ್ಯಕ್ಷ ಕೆ.ಜಿ.ಪಲ್ಲೇದ ಮಾತನಾಡಿದರು. ಪ್ರಮುಖರಾದ ಶರಣಪ್ಪ ಅರಕೇರಿ, ವೀರಣ್ಣ ಉಳ್ಳಾಗಡ್ಡಿ, ಸಿದ್ರಾಮೇಶ ಬೇಲೇರಿ, ಬಸವರಾಜ ಬನ್ನಿಗೋಳ, ಅಪ್ಪಣ್ಣ ಬನ್ನಿಮರದ, ಬಸಲಿಂಗಪ್ಪ ಕೊತ್ತಲ, ಅಶೋಕ ಅರಕೇರಿ, ಕಳಕಪ್ಪ ತಳವಾರ, ಈರಪ್ಪ ಬಣಕಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts