ಯಲಬುರ್ಗಾ: ಕರೊನಾ ಸೋಂಕು ನಿಯಂತ್ರಣ ಕ್ರಮವಾಗಿ ಮಾಸ್ಕ್ ಇಲ್ಲದೆ ಸಂಚರಿಸುವ ವಾಹನ ಸವಾರರಿಗೆ ಪಟ್ಟಣದಲ್ಲಿ ಪಿಎಸ್‌ಐ ಹನುಮಂತಪ್ಪ ತಳವಾರ್ ಬುಧವಾರ ದಂಡ ಹಾಕಿದರು.
ನಂತರ ಮಾತನಾಡಿದ ಅವರು, ಮಾಸ್ಕ್ ಧರಿಸದೆ ಇರುವವರಿಗೆ ದಂಡ ಹಾಕುವಂತೆ ಜಿಲ್ಲಾಡಳಿತದಿಂದ ಆದೇಶವಿದ್ದು, ಪ್ರತಿಯೊಬ್ಬರೂ ಕಡ್ಡಾಯ ಮಾಸ್ಕ್ ಹಾಕಬೇಕು. ಸೋಂಕು ತಡೆಯಲು ಸರ್ಕಾರದ ನಿಯಮ ಪಾಲಿಸಬೇಕು. ಪಟ್ಟಣದಲ್ಲಿ ಅಗತ್ಯ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದರೂ ಕಡ್ಡಾಯ ಮಾರ್ಗಸೂಚಿ ಪಾಲಿಸಬೇಕು. ಗ್ರಾಹಕರು ತಮ್ಮ ಅಂಗಡಿಗಳಿಗೆ ಆಗಮಿಸಿದಾಗ ಕಡ್ಡಾಯ ಮಾಸ್ಕ್ ಧರಿಸುವಂತೆ ಅಂಗಡಿ ಮಾಲೀಕರು ತಿಳಿಸಬೇಕು ಎಂದರು.
100 ಜನರಿಗೆ ದಂಡ: ಮಾಸ್ಕ್ ಇಲ್ಲದೆ ಓಡಾಡುತ್ತಿದ್ದ 100ಕ್ಕೂ ಅಧಿಕ ವಾಹನ ಸವಾರರಿಗೆ ದಂಡ ಹಾಕಲಾಗಿದೆ. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ 75, ಪಟ್ಟಣದಲ್ಲಿ 25 ಜನರಿಗೆ ದಂಡ ವಿಧಿಸಲಾಗಿದೆ. ಒಟ್ಟು 10 ಸಾವಿರ ರೂ. ಸಂಗ್ರಹವಾಗಿದೆ.