ಯಲಬುರ್ಗಾ: ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 808ರ ಪೈಕಿ 679 ಪ್ರಕರಣ ಇತ್ಯರ್ಥಗೊಂಡವು.
341 ಜನನ ನೋಂದಣಿ ಪ್ರಕರಣ, 4 ಪಾಲುವಿಭಾಗ ಪ್ರಕರಣ, 2 ಚೆಕ್‌ಬೌನ್ಸ್ ಕೇಸ್, 2 ಎಂವಿಸಿ ಪ್ರಕರಣದಲ್ಲಿ (28,50,000 ರೂ. ಅರ್ಜಿದಾರರು ಪಡೆದ ಮೊತ್ತ), 274 ಲಘು ಪ್ರಕರಣ ಸೇರಿ ಒಟ್ಟು 679 ಪ್ರಕರಣಗಳು ಇತ್ಯರ್ಥಗೊಂಡವು.
ಸಿವಿಲ್ ನ್ಯಾಯಾಧೀಶೆ ಆಯಿಷಾಬಿ ಮಜೀದ್, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ಸಹಾಯಕ ಸರ್ಕಾರಿ ಅಭಿಯೋಜಕ ರವಿ ಹುಣಸೀಮರದ, ವಕೀಲರಾದ ಎಚ್.ಎಚ್. ಹಿರೇಮನಿ, ಎ.ಎಂ.ಶಂಕರಗೌಡ, ಎಂ.ಎಸ್.ನಾಯ್ಕರ್, ಎ.ಎಂ.ಪಾಟೀಲ್, ಸಂಗಮೇಶ ಅಂಗಡಿ, ತಹಸಿಲ್ ಕಚೇರಿಯ ದೇವರಡ್ಡಿ, ನ್ಯಾಯಾಲಯ ಸಿಬ್ಬಂದಿ ರಾಘವೇಂದ್ರ ಕೋಳಿಹಾಳ, ವಿನಾಯಕ ಇತರರಿದ್ದರು.