More

    ವಿದ್ಯಾರ್ಥಿಗಳು ಕಾನೂನು ತಿಳಿಯಲಿ

    ಯಲಬುರ್ಗಾ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕಾನೂನು ಅರಿವು ಹೊಂದಲಿ ಎಂದು ಸಿವಿಲ್ ನ್ಯಾಯಾಧೀಶ ಶ್ರೀಶೈಲ ಬಾಗಡಿ ಹೇಳಿದರು.

    ತಾಲೂಕಿನ ಹಿರೇವಂಕಲಕುಂಟಾದ ಸಪಪೂ ಕಾಲೇಜು ವಿಭಾಗದ ಸಪ್ರೌಶಾಲೆಯಲ್ಲಿ ನ್ಯಾಯಾಲಯ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ವಿದ್ಯಾಪ್ರಸಾರ ಹಾಗೂ ಪೋಕ್ಸೋ ಕಾಯ್ದೆ ಕುರಿತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಶಿಕ್ಷಕರು ದೈನಂದಿನ ಕರ್ತವ್ಯದ ಜತೆಗೆ ಕಾನೂನು ಸೇವೆಗಳ ಬಗ್ಗೆ, ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಬೇಕು. ಇದರಲ್ಲಿ ಪಾಲಕರ ಪಾತ್ರವೂ ಬಹಳ ಮುಖ್ಯವಾಗಿದೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಯು, ಮಕ್ಕಳ ಸ್ನೇಹಿ ಸಮಾಜ ನಿರ್ಮಾಣದಿಂದ ಮಾತ್ರ ಸಾಧ್ಯ ಎನ್ನುವುದು ಪ್ರತಿಯೊಬ್ಬರೂ ಮನಗಾಣಬೇಕು ಎಂದರು. ವಕೀಲ ಮಲ್ಲನಗೌಡ ಪಾಟೀಲ್ ಮಾತನಾಡಿದರು. ಶಾಲೆಯ ಉಪಪ್ರಾಚಾರ್ಯ ಚಂದ್ರಕಾಂತಯ್ಯ ಕಲ್ಯಾಣಮಠ ಅಧ್ಯಕ್ಷತೆ ವಹಿಸಿದ್ದರು.

    ವಕೀಲರಾದ ಸಿ.ಆರ್.ಕೆಂಚಮ್ಮನವರ್, ಎಂ.ಎ.ಪಾಟೀಲ್, ಮಂಜುನಾಥ ಶಾಸ್ತ್ರೀಮಠ, ಸಿಆರ್‌ಸಿ ಹನುಮಂತಗೌಡ ಬೇವೂರು, ಮುಖ್ಯಶಿಕ್ಷಕ ದೇವೇಂದ್ರ ಜಿರ್ಲಿ, ಕಾನೂನು ಸೇವಾ ಸಮಿತಿ ಸಿಬ್ಬಂದಿ ರಾಘವೇಂದ್ರ ಹಾಗೂ ವಿನಾಯಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts