ಆದರ್ಶ ಶಾಲೆಗೆ ಬಸ್ ಸೌಲಭ್ಯ ಕಲ್ಪಿಸಲು ಕರವೇ ಯುವಸೇನೆ ತಾಲೂಕು ಘಟಕದಿಂದ ಮನವಿ

ಯಲಬುರ್ಗಾ: ಇಟಗಿ ಗ್ರಾಮದ ಆದರ್ಶ ಶಾಲೆಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕರವೇ ಯುವಸೇನೆ ತಾಲೂಕು ಘಟಕ ಪಟ್ಟಣದಲ್ಲಿ ತಹಸೀಲ್ದಾರ್ ರಮೇಶ ಅಳವಂಡಿಕರ್‌ಗೆ ಮಂಗಳವಾರ ಮನವಿ ಸಲ್ಲಿಸಿತು.

ಸಂಘಟನೆ ತಾಲೂಕು ಅಧ್ಯಕ್ಷ ಶಿವಕುಮಾರ ನಾಗನಗೌಡ್ರ ಮಾತನಾಡಿ, ಇಟಗಿ ಆದರ್ಶ ಶಾಲೆಗೆ ತಾಲೂಕಿನ ವಿವಿಧ ಗ್ರಾಮಗಳಿಂದ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿದ್ದು, ಬಸ್ ಸೌಲಭ್ಯ ಕೊರತೆಯಿಂದ ತೊಂದರೆ ಆಗಿದೆ. ಯಲಬುರ್ಗಾದಿಂದ ದಿನ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ತೆರೆಳುತ್ತಿದ್ದು, ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲ. ಸಂಜೆ ವೇಳೆ ಇಟಗಿಯಿಂದ ಕುಕನೂರು ಮಾರ್ಗವಾಗಿ ಯಲಬುರ್ಗಾಕ್ಕೆ ಬಸ್ ಓಡಿಸುವಂತೆ ಶಾಸಕರು ಮತ್ತು ತಾಪಂ ಅಧ್ಯಕ್ಷ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಸೂಚಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಸಂಬಂಧಿಸಿದ ಅಧಿಕಾರಿಗಳು ಸಾರಿಗೆ ಘಟಕ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆ ಪದಾಧಿಕಾರಿಗಳಾದ ಕಲ್ಲೇಶಪ್ಪ ಕರಮುಡಿ, ಯಮನೂರಪ್ಪ ನಾಯಕ, ಈಶ್ವರ ಕಲಕಬಂಡಿ, ಶಿವು ನಿಡಗುಂದಿ, ಹನಮೇಶ ಹೂಗಾರ್, ಹುಲ್ಲೇಶ, ಮಂಜು ಕುರಿ ಇದ್ದರು.

ಇಟಗಿ ಆದರ್ಶ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಿ, ಸಮಸ್ಯೆ ಬಗೆಹರಿಸುವಂತೆ ಸಾರಿಗೆ ಘಟಕ ವ್ಯವಸ್ಥಾಪಕ ಹಾಗೂ ಕೆಎಸ್‌ಆರ್‌ಟಿಸಿ ಡಿಸಿಗೆ ಶೀಘ್ರ ಪತ್ರ ಬರೆಯುತ್ತೆನೆ.
| ರಮೇಶ ಅಳವಂಡಿಕರ್ ತಹಸೀಲ್ದಾರ್, ಯಲಬುರ್ಗಾ.

Leave a Reply

Your email address will not be published. Required fields are marked *