ಯಕ್ಷಗಾನ ಕಲಾವಿದರಿಗೆ ಮಾಸಾಶನ ಚಿಂತನೆ: ಸಚಿವ ಖಾದರ್

ವಿಜಯವಾಣಿ ಸುದ್ದಿಜಾಲ ಮಂಗಳೂರು
ವರ್ಷದಲ್ಲಿ ಆರು ತಿಂಗಳು ವೃತ್ತಿ, ಉಳಿದ ಆರು ತಿಂಗಳು ಕೆಲಸವಿಲ್ಲ. ಇದು ಯಕ್ಷಗಾನ ಕಲಾವಿದರ ಬದುಕು. ಹೀಗಾಗಿ ಯಕ್ಷಗಾನ ಕಲಾವಿದರಿಗೆ ಮಳೆಗಾಲದ ಅವಧಿಯಲ್ಲಿ ಸರ್ಕಾರದಿಂದ ಮಾಸಾಶನ ನೀಡುವ ಚಿಂತನೆ ಇದೆ. ಸಿಎಂ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭರವಸೆ ನೀಡಿದರು.

ಮಂಗಳವಾರ ನಗರದ ಮಂಗಳಾ ಸ್ಟೇಡಿಯಂನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಆಯೋಜಿಸಿದ ಯಕ್ಷಧ್ರುವ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ರಾತ್ರಿ ನಿದ್ದೆ ಬಿಟ್ಟು ಮೇಳಗಳಲ್ಲಿ ಕಲಾವಿದರಾಗಿ ದುಡಿಯುವುದರಿಂದ ಆರೋಗ್ಯ ಸಮಸ್ಯೆಯೂ ಕಾಡುತ್ತದೆ. ಜತೆಗೆ ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆ ಜವಾಬ್ದಾರಿಯೂ ಇರುತ್ತದೆ. ಆದ್ದರಿಂದ ಮಾಸಾಶನ ಹೇಗೆ ನೀಡಬೇಕು ಎಂದು ಕಲಾವಿದರ ಸಂಘಟನೆಗಳ ಜತೆ ಮಾತನಾಡಿ ರೂಪುರೇಷೆ ಸಿದ್ಧಪಡಿಸಬೇಕಿದೆ. ನಂತರ ಸಿಎಂ ಬಳಿ ಮಾತುಕತೆ ಎಂದರು.

Leave a Reply

Your email address will not be published. Required fields are marked *