More

    ಕಲೆಗಾಗಿಯೇ ಜೀವನ ಮುಡಿಪಾಗಿಟ್ಟಿದ್ದ ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರು ಇನ್ನಿಲ್ಲ

    ಕಾರವಾರ : ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರು (79) ತೀವ್ರ ಅನಾರೋಗ್ಯದಿಂದ ಇಂದು ನಿಧನರಾದರು. ಲಿವರ್ ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರು ಕೆಲ ದಿನಗಳಿಂದ ತಮ್ಮ ಆಪ್ತ ಸೋಂದಾ ಹಳೆಯೂರಿನ ಶ್ರೀಪಾದ ಜೋಶಿ ಅವರ ಮನೆಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.

    ಯಕ್ಷಗಾನ ಕೃತಿಗಳ ರಚನೆ, ಅಧ್ಯಯನ, ಅಧ್ಯಾಪನ, ಭಾಗವತಿಕೆ, ನೃತ್ಯಗಾರಿಕೆಯ ಕಲೆಗಾಗಿಯೇ ತಮ್ಮ ಇಡೀ ಜೀವನ ಮುಡಿಪಾಗಿಟ್ಟಿದ್ದ ಮಂಜುನಾಥ ಭಾಗವತರು ಕೆಲವು ವರ್ಷಗಳಿಂದ ಅಂಕೋಲಾ ತಾಲೂಕಿನ ಅಚವೆ ಸಮೀಪದ ಮೋತಿ ಗುಡ್ಡದಲ್ಲಿ ಕುಟೀರ ಕಟ್ಟಿಕೊಂಡು ಏಕಾಂಗಿಯಾಗಿ ಜೀವನ ನಡೆಸುತ್ತಿದ್ದರು.

    ಅಭಿಮಾನಿಗಳೇ ನೋಡಿಕೊಂಡರು

    ಮಂಜುನಾಥ ಭಾಗವತರು ಪರಿವ್ರಾಜಕರಾಗಿ ಬದುಕಿದವರು. ಯಕ್ಷಗಾನವೇ ಅವರ ಕುಟುಂಬವಾಗಿತ್ತು. ಅಪಾರ ಶಿಷ್ಯವೃಂದವನ್ನು ಹೊಂದಿದವರು. ಅವರ ಕಡೆಯ ಕಾಲದಲ್ಲಿ ಯಕ್ಷಗಾನ ಕುಟುಂಬವೇ ಅವರನ್ನು ಕಾಳಜಿಯಿಂದ ನೋಡಿಕೊಂಡಿದೆ.

    ಉಡುಪಿಯಲ್ಲಿ ಯಕ್ಷಗಾನ ಕಲಾ ರಂಗದ ಮುರಳಿ ಕಡೆಕಾರ್ ಲಕ್ಷಾಂತರ ರೂ. ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಕೆರೆಕೊಪ್ಪ ಸುಬ್ಬಣ್ಣ ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಆರೈಕೆ ಮಾಡಿದ್ದಾರೆ. ರೋಟರಿ ಆಸ್ಪತ್ರೆಯಲ್ಲಿ ಇದ್ದಾಗ ರಾಮಕೃಷ್ಣಾಶ್ರಮದ ಶಿಷ್ಯರು, ಅವರ ಅಭಿಮಾನಿಗಳು ಕಾಳಜಿ ವಹಿಸಿದರು. ಕೊನೆಯ ದಿನಗಳಲ್ಲಿ ಸೋಂದಾ ಬಾಡಲಕೊಪ್ಪದ ಶ್ರೀಪಾದ ಜೋಶಿ ಭಾಗವತರನ್ನು ತಮ್ಮ ಪಾಲಕರಂತೆ ನೋಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts