ಡಿ-ಬಾಸ್​ ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಗಿಫ್ಟ್​ ಆಗಿ ‘ಯಜಮಾನ’ ಚಿತ್ರದ​ ಹಾಡು

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರ ಮೋಸ್ಟ್​ ಎಕ್ಸೈಟೆಡ್​ ಚಿತ್ರಗಳಲ್ಲಿ ಒಂದಾದ ಯಜಮಾನ ಚಿತ್ರದ ‘ಶಿವನಂದಿ’ ಲಿರಿಕಲ್​ ಹಾಡನ್ನು ಸಂಕ್ರಾಂತಿ ಹಬ್ಬದಂದು ಬಿಡುಗಡೆ ಮಾಡಲಾಗಿದೆ.

ಈ ಮೂಲಕ ಡಿ-ಬಾಸ್​ ಅಭಿಮಾನಿಗಳಿಗೆ ಸಂಕ್ರಾಂತಿ ಉಡುಗೊರೆ ನೀಡಿರುವ ಯಜಮಾನ ತಂಡ, ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.

ಹಾಡು ಬಿಡುಗಡೆಯಾಗಿ ಕೇವಲ ಮೂರು ಗಂಟೆಗಳಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲ್​ಚಲ್​ ಎಚ್ಚಿಸಿದ್ದು, ಈಗಾಗಲೇ ಯೂ ಟ್ಯೂಬ್​ನಲ್ಲಿ ನಾಲ್ಕೂವರೆ ಲಕ್ಷ ಜನರು ವೀಕ್ಷಿಸಿದ್ದಾರೆ.

ಯಜಮಾನನಿಗೆ ವಿ.ಹರಿಕೃಷ್ಣ ಹಾಗೂ ಪಿ.ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದು, ದರ್ಶನ್​ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ದೊಡ್ಡ ಕಲಾವಿದರ ದಂಡೇ ಇರುವ ಈ ಸಿನಿಮಾ ಮೇಲಿನ ನಿರೀಕ್ಷೆಯನ್ನು ಶಿವನಂದಿ ಹಾಡು ದುಪ್ಪಟ್ಟು ಮಾಡಿದೆ. (ದಿಗ್ವಿಜಯ ನ್ಯೂಸ್)