25.9 C
Bengaluru
Wednesday, January 22, 2020

ಹೌದು ಹುಲಿಯಾ ಬಿಎಸ್​ವೈ ದುನಿಯಾ

Latest News

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ಕರೋನಾ ವೈರಸ್​ ಪತ್ತೆ ಮಾಡಲು ಕೇರಳದ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್​ ಕೇಂದ್ರಗಳ ಸ್ಥಾಪನೆ

ತಿರುವನಂತಪುರ: ಕರೋನಾ ವೈರಸ್​ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಸಲಹೆ ಮೇರೆಗೆ ಕೇರಳದ ವಿಮಾನ ನಿಲ್ದಾಣಗಳಲ್ಲಿ ವೈರಸ್​ ಪತ್ತೆ ಮಾಡುವ ಸ್ಕ್ರೀನಿಂಗ್​ ಕೇಂದ್ರಗಳನ್ನು ಸ್ಥಾಪಿಸಲಾಗಿದೆ...

ಬೆಂಗಳೂರು: ಪರ್ವಕಾಲ ಸಂಕ್ರಾಂತಿಗೆ ಇನ್ನೊಂದು ತಿಂಗಳು ಬಾಕಿ ಇರುವಂತೆಯೇ ರಾಜ್ಯದಲ್ಲಿ ‘ರಾಜಕೀಯ ಸಂಕ್ರಾಂತಿ’ ಮೇಳೈಸಿದೆ. 17 ಅನರ್ಹ ಶಾಸಕರ ಪೈಕಿ 11 ಮಂದಿ ಜನತಾ ನ್ಯಾಯಾಲಯದಲ್ಲಿ ಅರ್ಹರೆನಿಸಿ ಬೀಗಿದ್ದಾರೆ. ಈ ಗೆಲುವಿನೊಂದಿಗೆ ಬಿ.ಎಸ್. ಯಡಿಯೂರಪ್ಪ ಸರ್ಕಾರ ಅಸ್ಥಿರತೆಯಿಂದ ಹೊರಬಂದು ಬಹುಮತದೊಂದಿಗೆ ನಿಟ್ಟುಸಿರು ಬಿಟ್ಟರೆ, ಕಾಂಗ್ರೆಸ್ 2 ಸ್ಥಾನಕ್ಕಷ್ಟೇ ತೃಪ್ತಿಪಟ್ಟುಕೊಳ್ಳುವ ಸ್ಥಿತಿ ತಲುಪಿದೆ. ಮತ್ತೊಮ್ಮೆ ‘ಸಮ್ಮಿಶ್ರ’ ಸರ್ಕಾರದ ಕನಸಿನಲ್ಲಿದ್ದ ಜೆಡಿಎಸ್ ಶೂನ್ಯದೊಂದಿಗೆ ನಿರಾಸೆ ಅನುಭವಿಸಿದೆ.

‘ಮಧ್ಯಂತರ ಚುನಾವಣೆ’ ಮತ್ತು ‘ಸ್ಥಿರ ಸರ್ಕಾರದ’ ವಿಷಯವಾಗಿ ನಡೆದ ಮತ ಸಮರದಲ್ಲಿ ಜನರು ಸ್ಥಿರ ಸರ್ಕಾರಕ್ಕೆ ಮಣೆ ಹಾಕಿರುವುದು ಸ್ಪಷ್ಟ. ಮಧ್ಯಂತರ ಚುನಾವಣೆ ಎಂದು ಮತಭಿಕ್ಷೆ ಕೇಳಿದ ಕಾಂಗ್ರೆಸ್ ದೊಡ್ಡ ಬೆಲೆ ತೆರಬೇಕಾಗಿದೆ. ಮೈತ್ರಿ ಸರ್ಕಾರ ಮಾಡುವ ಆಲೋಚನೆಯಲಿದ್ದ ಜೆಡಿಎಸ್ ಹಾಗೂ ಡಿಸೆಂಬರ್ 9ರಂದು ಗುಡ್ ನ್ಯೂಸ್ ಕೊಡುತ್ತೇವೆಂದು ಉತ್ಸಾಹ ತೋರಿದವರ ಆಸೆ ಈ ಫಲಿತಾಂಶದ ಮೂಲಕ ಕಮರಿದ್ದು, ಮುಂದಿನ ಮೂರೂವರೆ ವರ್ಷ ರಾಜಕೀಯ ಅಸ್ತಿತ್ವ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಬಹುಪಾಲು ಪಾಸ್: ಸ್ಪೀಕರ್ ನ್ಯಾಯಾಲಯದಲ್ಲಿ ಅನರ್ಹತೆ ಸರ್ಟಿಫಿಕೇಟ್ ಪಡೆದು ನ್ಯಾಯಾಲಯದಲ್ಲಿ ನ್ಯಾಯ ಕೇಳಿದ್ದವರ ಪೈಕಿ 11 ಅನರ್ಹರಿಗೆ ಜನತಾ ನ್ಯಾಯಾಲಯ ಅರ್ಹರೆಂದು ಪ್ರಮಾಣಪತ್ರ ನೀಡಿದೆ. ಡಿ.5ರಂದು ನಡೆದ ಚುನಾವಣೆಯಲ್ಲಿ 13 ಅನರ್ಹರು ಕಣಕ್ಕಿಳಿದಿದ್ದರು. ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಮತ್ತು ಹುಣಸೂರಿನಲ್ಲಿ ವಿಶ್ವನಾಥ್ ಮಾತ್ರ ಗೆಲುವಿನ ದಡ ತಲುಪಲು ವಿಫಲರಾಗಿ ಅನರ್ಹರಾಗೇ ಉಳಿದರು. ತಕ್ಷಣಕ್ಕೆ ಮತ್ತೆ ಅವರು ಅಧಿಕಾರ ಹಿಡಿಯಬೇಕೆಂದರೆ ಪರಿಷತ್​ಗೆ ಆಯ್ಕೆಯಾಗುವುದು ಅನಿವಾರ್ಯ.

ಹೊಸಕೋಟೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ವಿಜಯ ಸಾಧಿಸಿದ್ದು, ಇವರ ಬೆಂಬಲವೂ ಬಿಜೆಪಿ ಕಡೆ ಇರಲಿದೆ ಎಂದು ಹೇಳಲಾಗುತ್ತಿದೆ.

ಮುಖಭಂಗ: ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಅನರ್ಹರನ್ನು ಸೋಲಿಸಿ ಎಂದು ಪ್ರಚಾರದುದ್ದಕ್ಕೂ ಮತದಾರರಿಗೆ ಮನವಿ ಮಾಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್​ಗೆ ತೀವ್ರ ಮುಖಭಂಗವಾಗಿದೆ. 2018ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದ 12 ಕಡೆ ಈ ಬಾರಿ ಒಂದು ಕಡೆ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಹುಣಸೂರು ಕ್ಷೇತ್ರ ಪಕ್ಷಕ್ಕೆ ಬೋನಸ್ ರೂಪದಲ್ಲಿ ಸಿಕ್ಕಿದೆ. 2018ರಲ್ಲಿ ಮೂರು ಸ್ಥಾನ ಗೆದ್ದಿದ್ದ ಜೆಡಿಎಸ್, ಈಗ ಅದನ್ನು ಕಳೆದುಕೊಂಡಿದೆ.

ಬುಡಮೇಲಾದ ತಂತ್ರ

ಸಿದ್ದರಾಮಯ್ಯನವರ ಚುನಾವಣಾ ತಂತ್ರಗಳು ಬುಡಮೇಲಾಗಿರುವುದು ಸ್ಪಷ್ಟವಾಗಿದೆ. ಏಕಾಂಗಿ ಪ್ರಚಾರ ಮತ್ತು ಸಾಮೂಹಿಕ ನಾಯಕತ್ವದ ಕೊರತೆ ಪಕ್ಷಕ್ಕೆ ಪೆಟ್ಟುಕೊಟ್ಟಿದೆ. ಸಿದ್ದರಾಮಯ್ಯ ಭಾಷಣ ಪ್ರಾಮುಖ್ಯತೆ ಪಡೆದರೂ ಅವು ಮತವಾಗಿ ಪರಿವರ್ತನೆಯಾಗಿಲ್ಲ ಎಂದು ಪಕ್ಷ ಊಹಿಸಿದೆ. ಆದರೆ, ಅವರು ಅಹಿಂದ ಮತ ಹಿಡಿದಿಟ್ಟುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಜತೆಗೆ ಇಬ್ಬರು ಕುರುಬ ಅಭ್ಯರ್ಥಿಗಳನ್ನು ಸೋಲಿಸುವುದರಲ್ಲಿ ಯಶಸ್ವಿಯಾಗಿರುವುದು ವಿಶೇಷ.

ಎಲೆಕ್ಷನ್ ಸ್ಪೆಷಲಿಸ್ಟ್!

ಬಿಜೆಪಿ ಪಾಲಿಗೆ ಚುನಾವಣೆ ನಿರ್ವಹಿಸಲು ಯುವಕರ ತಂಡ ಸಿಕ್ಕಿದೆ. ಡಿಸಿಎಂ ಡಾ.ಅಶ್ವತ್ಥನಾರಾಯಣ, ಹಾಸನ ಶಾಸಕ ಪ್ರೀತಂ ಗೌಡ, ಬಿ.ವೈ.ವಿಜಯೇಂದ್ರ, ತಮ್ಮೇಶ್ ಗೌಡ ಟೀಮ್ ಕೆ.ಆರ್.ಪೇಟೆ ಗೆಲುವನ್ನು ಕಂಡು ಬಿಜೆಪಿ ನಾಯಕರು ಈ ರೀತಿ ಉದ್ಗಾರ ತೆಗೆದಿದ್ದಾರೆ. 2018ರಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ ಎಂಬ ಕ್ಷೇತ್ರದಲ್ಲಿ ಪ್ರೀತಂ ಗೌಡ ಆಯ್ಕೆಯಾಗಿದ್ದರು. ಈಗ ಅವರನ್ನೊಳಗೊಂಡ ಜೋಡಿ ಕೆ.ಆರ್.ಪೇಟೆಯನ್ನೂ ಗೆಲ್ಲಿಸಿಕೊಂಡುಬಂದಿದೆ. ಇನ್ನು ಅಶ್ವತ್ಥನಾರಾಯಣ ಅವರು ಮೈತ್ರಿ ಸರ್ಕಾರದ ಪತನದಲ್ಲಿ ಪ್ರಮುಖಪಾತ್ರ ವಹಿಸಿದ್ದು, ರಾಜೀನಾಮೆ ಕೊಟ್ಟವರನ್ನು ರಕ್ಷಿಸಿದ್ದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು ಗುಟ್ಟಾಗಿ ಉಳಿದ ವಿಚಾರವೇನಲ್ಲ.

ಸೋತವರಿಗೂ ಉಂಟು ಅವಕಾಶ? ಬಿಜೆಪಿ ಸರ್ಕಾರ ಇನ್ನು ಸಂಪುಟ ರಚನೆ ಕಸರತ್ತಿಗೆ ಕೈ ಹಾಕಲಿದೆ. ಬುಧವಾರ ಅಥವಾ ಗುರುವಾರ ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ. ಪ್ರಧಾನಿ, ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿ ಅನುಮತಿ ಪಡೆದುಕೊಳ್ಳಲಿದ್ದಾರೆ. ಗೆಲುವು ಸಾಧಿಸಿದವರಿಗೆಲ್ಲ ಸಚಿವ ಸ್ಥಾನ ನೀಡುವುದಾಗಿ ಪಕ್ಷ ಭರವಸೆ ನೀಡಿತ್ತು, ಇದೀಗ ಸೋಲುಂಡ ಎಂ.ಟಿ.ಬಿ.ನಾಗರಾಜ್, ವಿಶ್ವನಾಥ್​ಗೂ ಪರಿಷತ್ ಸ್ಥಾನದ ಮೂಲಕ ಮಂತ್ರಿ ಸ್ಥಾನ ನೀಡಲು ಯಡಿಯೂರಪ್ಪ ಆಸಕ್ತಿ ತೋರಿದ್ದಾರೆನ್ನಲಾಗಿದೆ. ಇತ್ತ ರಮೇಶ್ ಜಾರಕಿಹೊಳಿ ಡಿಸಿಎಂ ಸ್ಥಾನಕ್ಕೆ ಪ್ರಯತ್ನ ನಡೆಸಿದ್ದಾರೆಂಬ ಮಾಹಿತಿ ಇದೆ.

ಬೆಂಗ್ಳೂರಲ್ಲಿ ಬಿಜೆಪಿ ಬಾಸ್

ಉಪಚುನಾವಣೆ ನಂತರ ಬೆಂಗಳೂರಿನಲ್ಲೂ ಬಿಜೆಪಿ ಬಲಗೊಂಡಿದೆ. 2018ರ ಚುನಾವಣೆಯಲ್ಲಿ ಬೆಂಗಳೂರಿನ ಒಟ್ಟು 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 15, ಬಿಜೆಪಿ 11 ಮತ್ತು ಜೆಡಿಎಸ್ 2 ಸ್ಥಾನ ಗೆದ್ದುಕೊಂಡಿದ್ದವು. ಆದರೆ ಕೆಲ ತಿಂಗಳ ಹಿಂದೆ ಕಾಂಗ್ರೆಸ್​ನ ನಾಲ್ವರು ಮತ್ತು ಜೆಡಿಎಸ್​ನ ಓರ್ವ ಶಾಸಕ ರಾಜೀನಾಮೆ ನೀಡಿದ್ದರು. ಅವರು ಪ್ರತಿನಿಧಿಸುತ್ತಿದ್ದ 5 ಕ್ಷೇತ್ರಗಳ ಪೈಕಿ ರಾಜರಾಜೇಶ್ವರಿನಗರ ಹೊರತುಪಡಿಸಿ ಉಳಿದ ನಾಲ್ಕು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಮೂರರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹಾಗಾಗಿ ಕಾಂಗ್ರೆಸ್​ನ ಸಂಖ್ಯೆ 15ರಿಂದ 12ಕ್ಕೆ ಕುಸಿದಿದೆ. ಜೆಡಿಎಸ್ ಶಾಸಕರ ಬಲ ಒಂದಕ್ಕೆ ಸೀಮಿತವಾಗಿದೆ. ಬಿಜೆಪಿ ಸಂಖ್ಯೆ 11ರಿಂದ 14ಕ್ಕೆ ಏರಿಕೆಯಾಗಿದೆ.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...