ಜಿಲ್ಲಾ ವಾಲ್ಮೀಕಿ ನಾಯಕ ನೌಕರರ ಸಂಘದ ಸಮ್ಮೇಳನ 25ಕ್ಕೆ

ಯಾದಗಿರಿ: ನಗರದ ಇಂಪಿರಿಯಲ್ ಗಾರ್ಡನ್ನಲ್ಲಿ ನವೆಂಬರ್ 25ರಂದು ಜಿಲ್ಲಾ ವಾಲ್ಮೀಕಿ ನಾಯಕ ನೌಕರರ ಸಂಘದ 2ನೇ ಜಿಲ್ಲಾ ಮಟ್ಟದ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ಯಮುನಪ್ಪ ನಾಯಕ ತನಿಕೆದಾರ ತಿಳಿಸಿದರು.

ಯಾದಗಿರಿ ಜಿಲ್ಲೆಯಲ್ಲಿ 2 ಲಕ್ಷಕ್ಕಿಂತ ಹೆಚ್ಚು ವಾಲ್ಮೀಕಿ ನಾಯಕ ಸಮಾಜ ಬಾಂಧವರಿದ್ದು, ಈ ಪೈಕಿ ವಿವಿಧ ಇಲಾಖೆಗಳಲ್ಲಿ ಸುಮಾರು 800 ಜನ ಸಮಾಜದ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಸಮಾಜದ ನೌಕರರು ಮತ್ತು ಸಮಾಜ ಬಾಂಧವರು ಅನುಭವಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಅದಕ್ಕೆ ಪರಿಹಾರ ಹುಡುಕಲು ಈ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

25ರಂದು ಬೆಳಗ್ಗೆ ನಡೆಯಲಿರುವ ಸಮ್ಮೇಳನವನ್ನು ಶಾಸಕ ಸತೀಶ ಜಾರಕಿಹೊಳಿ ಉದ್ಘಾಟಿಸಲಿದ್ದು, ಸಾನ್ನಿಧ್ಯವನ್ನು ರಾಜನಳ್ಳಿ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ವರದಾನೇಶ್ವರ ಸ್ವಾಮೀಜಿ ಹಾಗೂ ಡಾ.ಜ್ಞಾನಪ್ರಕಾಶ ಸ್ವಾಮೀಜಿ ವಹಿಸಲಿದ್ದಾರೆ. ಸುರಪುರ ಸಂಸ್ಥಾನದ ರಾಜ ವಂಶಸ್ಥ ರಾಜಾ ಕೃಷ್ಣಪ್ಪ ನಾಯಕ ಉಪಸ್ಥಿತರಿರಲಿದ್ದಾರೆ ಎಂದರು.

ಮಹರ್ಷಿ ವಾಲ್ಮೀಕಿ ಭಾವಚಿತ್ರವನ್ನು ಶಾಸಕ ಬಿ.ಶ್ರೀರಾಮುಲು ಬಿಡುಗಡೆಗೊಳಿಸಲಿದ್ದು, ಬಳ್ಳಾರಿ ಸಂಸದ ವಿ.ಎಸ್.ಉಗ್ರಪ್ಪ, ರಾಯಚೂರು ಸಂಸದ ಬಿ.ವಿ.ನಾಯಕ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಸ್ವಾಗತ ಸಮಿತಿ ಅಧ್ಯಕ್ಷ ಚನ್ನಬಸ್ಸಪ್ಪ ಮೆಕಾಲೆ ಸೇರಿದಂತೆ ಮತ್ತಿತರ ಗಣ್ಯರು ಸಮಾರಂಭಕ್ಕೆ ಸಾಕ್ಷೀಕರಿಸಲಿದ್ದಾರೆ ಎಂದು ವಿವರಿಸಿದರು.

ಅಂದು ಸಂಜೆ ನಡೆಯಲಿರುವ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಬೆಂಗಳೂರಿ ಪಕ್ಷಿಮ ವಲಯ ಡಿಸಿಪಿ ರವಿ ಚನ್ನಣ್ಣನವರ್ ವಹಿಸಿಲಿದ್ದಾರೆ ಎಂದು ಹೇಳಿದರು.  ಪ್ರಮುಖರಾದ ಎಸ್.ಎಸ್.ನಾಯಕ, ಚಂದ್ರಪ್ಪ ಗುಂಜನೂರು, ಮಹಾಂತೇಶ ದೊರಿ, ತಿಮ್ಮಪ್ಪ ನಾಯಕ, ಬಸಲಿಂಗಪ್ಪ ಇದ್ದರು.

ವಾಲ್ಮೀಕಿ ನಾಯಕ ನೌಕರರ ಸಮ್ಮೇಳನವನ್ನು ಐತಿಹಾಸಿಕಗೊಳಿಸಲು ಈಗಾಗಲೇ ಸಂಘದಿಂದ ಹಲವು ಸಮಿತಿ ರಚಿಸಿಕೊಂಡು ಸಾಕಷ್ಟು ಸಿದ್ಧತೆ ನಡೆಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಜನತೆ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಯಶಸ್ಸಿಗೊಳಿಸಬೇಕು.
| ಯಮುನಪ್ಪ ನಾಯಕ ತನಿಕೆದಾರ
ವಾಲ್ಮೀಕಿ ನಾಯಕ ನೌಕರರ ಸಂಘದ ಜಿಲ್ಲಾಧ್ಯಕ್ಷ