ಅಂಬೇಡ್ಕರ್ ಸಂವಿಧಾನ ವಿಶ್ವಕ್ಕೆ ಮಾದರಿ

ಯಾದಗಿರಿ: ದೇಶದಲ್ಲಿನ ಶೋಷಿತ ವರ್ಗದ ಆಶಾಕಿರಣವಾಗಿ ಜನಿಸಿದ ಡಾ. ಅಂಬೇಡ್ಕರ್ ಅವರು ಇಡೀ ವಿಶ್ವವೇ ಮೆಚ್ಚುವಂಥ ಸಂವಿಧಾನ ನೀಡಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ (ಕ್ರಾಂತಿಕಾರಿ ಬಣ) ರಾಜ್ಯ ಸಂಚಾಲಕ ಡಾ. ಮಲ್ಲೇಶಿ ಸಜ್ಜನ್ ತಿಳಿಸಿದರು.

ಬುಧುವಾರ ನಗರದ ಚರ್ಚ್​ ಹಾಲ್ನಲ್ಲಿ ಡಾ. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ನಿಮಿತ್ತ ಸಮಿತಿಯಿಂದ ಹಮ್ಮಿಕೊಂಡ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ದೇಶದಲ್ಲಿನ ಎಲ್ಲ ಜಾತಿ, ಧರ್ಮಗಳಿಗೆ ಸಮಾನವಾದ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಎಲ್ಲರಿಗೂ ಸಮಬಾಳು, ಸಮಪಾಲು ಎಂಬ ಧ್ಯೇಯದೊಂದಿಗೆ ರಚಿತವಾದ ಸಂವಿಧಾನವನ್ನು ಕೇವಲ ಭಾರತವಲ್ಲದೇ ವಿಶ್ವದ ಅನೇಕ ರಾಷ್ಟ್ರಗಳು ಬಣ್ಣಿಸಿವೆ ಎಂದರು.

ರಾಜ್ಯ ಸಂಘಟನಾ ಸಂಚಾಲಕ ಅರ್ಜುನ ಭದ್ರೆ ಮಾತನಾಡಿ, ಡಾ.ಅಂಬೇಡ್ಕರ್ರು ರಚಿಸಿದ ಸಂವಿಧಾನದಲ್ಲಿ ದಲಿತ ದಮನಿತರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಎಲ್ಲ ಅಂಶಗಳು ಅಳವಡಿಸಿದ್ದಾರೆ. ಆದರೆ ಭಾರತದ ಯಾವೊಬ್ಬ ಜಾತಿ ಜನಾಂಗದವರನ್ನೂ ಸಹ ಬಿಡದೇ ಎಲ್ಲರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂವಿಧಾನ ರಚಿಸಿದ್ದಾರೆ ಎಂದು ಹೇಳಿದರು.

ನಗರಸಭೆ ಮಾಜಿ ಸದಸ್ಯ ಮರೆಪ್ಪ ಚಟ್ಟೇರಕರ್, ದಲಿತ ಹಿಂದುಳಿದ ವರ್ಗಗಳಿಗೆ ಸಂವಿಧಾನವೇ ಪ್ರಬಲ ಅಸ್ತ್ರವಾಗಿದೆ ಎಂದರು.  ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಅಧಿಕಾರಿ ಡಾ.ಶರಣಪ್ಪ ಪಾಟೀಲ್, ಡಾ.ಭಗವಂತ ಅನವಾರ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದಶರ್ಿ ಹಣುಮೇಗೌಡ ಬೀರನಕಲ್, ನಗರಸಭೆ ಸದಸ್ಯರಾದ ಸ್ವಾಮಿದೇವ ದಾಸನಕೇರಿ, ಶೇಖ್ ಜಕಿಯುದ್ದೀನ್, ಖಾಜಿ ಇಮ್ತಿಯಾಜುದ್ದಿನ್, ಇನಾಯಿತುರ್ ರಹೆಮಾನ, ಭಾಗಪ್ಪ ಖಾನಾಪುರ, ಸುರಪೂರ ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಹಸ್ನಾಪುರ ಇದ್ದರು.

ಮಲ್ಲಿಕಾರ್ಜುನ ಆಶನಾಳ ಸ್ವಾಗತಿಸಿದರು. ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಪ್ರಾಸ್ತಾವಿಕ ಮಾತನಾಡಿದರು, ತಾಯಪ್ಪ ಲಿಂಗೇರಿ ನಿರೂಪಿಸಿದರು. ಚಂದ್ರಕಾಂತ ಕಂಚಗಾರಹಳ್ಳಿ ವಂದಿಸಿದರು.