ಹೇಮರಡ್ಡಿ ಮಲ್ಲಮ್ಮ ಶ್ರೀಶೈಲಂನ ಅವಿಭಾಜ್ಯ ಅಂಗ

ಯಾದಗಿರಿ: ಕಾರ್ತಿಕ ಮಾಸ ಎಲ್ಲರಿಗೂ ಪವಿತ್ರವಾಗಿದೆ. ಭೂ ಕೈಲಾಸ ಎಂದು ಹೆಸರಾಗಿರುವ ಈ ಪವಿತ್ರ ಶ್ರೀಶೈಲ ಕ್ಷೇತ್ರ ಬರುವ ಭಕ್ತರ ಕಷ್ಟಗಳನ್ನು ನಿವಾರಣೆ ಮಾಡುವ ಪುಣ್ಯಭೂಮಿ ಇದಾಗಿದೆ ಎಂದು ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗತ್ಪಾದರು ನುಡಿದರು.

ನೆರೆಯ ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಗದಗನ ಹೇಮರಡ್ಡಿ ಮಲ್ಲಮ್ಮ ರಾಜ್ಯ ಯುವ ಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಮಲ್ಲಮ್ಮ ಶ್ರೀಶೈಲಂನ ಅವಿಭಾಜ್ಯ ಅಂಗವಾಗಿದ್ದಾಳೆ. ತನ್ನ ಸಾಂಸಾರಿಕ ಬದುಕಿನ ಜತೆಗೆ ಆಧ್ಯಾತ್ಮಿಕ ಸಾಧನೆ ಮೂಲಕ ಪರಶಿವ ಮಲ್ಲಿಕಾರ್ಜುನನ ಕೃಪೆಗೆ ಪಾತ್ರರಾಗಿ, ಸಮಾಜವನ್ನು ಸುಧಾರಣೆಯಾಗುವಂತಹ ಮಾನವೀಯ ಮೌಲ್ಯಗಳನ್ನು ನೀಡಿ ಎಲ್ಲರ ಮನಸ್ಸಿನ್ಲಲಿ ಶಾಶ್ವತವಾಗಿ ಉಳಿದಿದ್ದಾಳೆ ಎಂದು ತಿಳಿಸಿದರು.

ಶ್ರೀಶೈಲಂ ದೇವಸ್ಥಾನದ ಆಡಳಿತಾಧಿಕಾರಿ ಗಾಮ ಚಂದ್ರಮೂತರ್ಿ ಮಾತನಾಡಿ, ದೇವಸ್ಥಾನ ಅಭಿವೃದ್ಧಿಗೆ ಕನ್ನಡಿಗರು ನೀಡಿರುವ ಕೊಡುಗೆಯನ್ನು ನಾವು ಮರೆತಿಲ್ಲ. ಇಲ್ಲಿಗೆ ಬರುವ ಭಕ್ತರ ಭಾವನೆಗಳನ್ನು ನಾವು ಅರ್ಥ ಮಾಡಿಕೊಂಡು ಸದಾ ಗೌರವದಿಂದ ಕಾಣುತ್ತೇವೆ ಎಂದರು.

ಈ ವೇಳೆ ವಸಂತ ಕವಿತಾ ಶ್ರೀಕರ, ಟ್ರಸ್ಟ್ನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಾರಡ್ಡಿ, ಮುಖ್ಯ ಅರ್ಚಕರಾದ ಮಲ್ಲಯ್ಯ ಸ್ವಾಮಿ, ಗುರುಪಾದ ಸ್ವಾಮಿ, ಬಸವರಾಜ ಸ್ವಾಮೀಜಿ ಬಸವರಡ್ಡೇರ್ ನರಗುಂದ, ಗೌರಿಶಂಕರ ಸ್ವಾಮೀಜಿ, ಮಂಜುನಾಥ ಸ್ವಾಮೀಜಿ, ಯುವ ವೇದಿಕೆಯ ಮಂಜುನಾಥರಡ್ಡಿ ಗದಗ, ವೀರೇಂದ್ರ ಶಿರೋಳ, ಸಿದ್ದಲಿಂಗಪ್ಪ ಕವಲೂರ, ಭಾಸ್ಕರರಡ್ಡಿ, ವಸಂತ ಮೇಟಿ, ಚಿಂಟು ಶಿವಪ್ಪಗೌಡರ್, ಭಗವತಿ ಮಂಜು, ಪವಿತ್ರಾರಡ್ಡಿ, ಲಕ್ಷ್ಮೀರಡ್ಡಿ ಇದ್ದರು.

ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಗುರು ಹಿರಿಯ ಮಾರ್ಗದರ್ಶನದಲ್ಲಿ ಧಮರ್ಾಚರಣೆ ಬದುಕು ಸಾಗಿಸುವ ಮೂಲಕ ದುಡಿದು ಸಂಪಾದಿಸಿದ ಹಣದಲ್ಲಿ ಸ್ವಲ್ಪ ಹಣವನ್ನಾದರೂ ಸಮಾಜಮುಖಿ ಕಾರ್ಯಗಳಿಗೆ ದಾನ ಮಾಡಬೇಕು, ಇದರಿಂದ ಬದುಕಿಗೆ ಸಾರ್ಥಕತೆ ದೊರೆಯುತ್ತದೆ.
| ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು
ಶ್ರೀಶೈಲ ಜಗದ್ಗುರುಗಳು