ನೀರಾವರಿಗಾಗಿ ದೊಡ್ಡ ಕ್ರಾಂತಿಯಾಗಲಿ

ಕಕ್ಕೇರಾ: ಸುರಪುರ ತಾಲೂಕಿನೆಲ್ಲೆಡೆ ಕೆರೆಗಳ ನಿರ್ಮಾಣದಿಂದ ರೈತರ ಕೃಷಿ ಬದುಕು ಉತ್ತಮವಾದಿತು ಎಂದು ಸೌರಾಷ್ಟ್ರ ಶ್ರೀ ಸೋಮನಾಥ ನೀರು ಬಳಕೆದಾರರ ಮಹಾಮಂಡಳದ ಕಾರ್ಯದಶರ್ಿ ರಾಘವೇಂದ್ರ ಜಹಾಗೀರದಾರ ಅಭಿಪ್ರಾಯಪಟ್ಟರು.

ಪಟ್ಟಣದ ಯುಕೆಪಿ ಕ್ಯಾಂಪಿನಲ್ಲಿ ಸೌರಾಷ್ಟ್ರ ಶ್ರೀ ಸೋಮನಾಥ ವಿತರಣಾ ಕಾಲುವೆ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಸಹಕಾರ ಜಲ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾರಾಯಣಪುರ ವಲಯದಲ್ಲಿ 92 ನೀರು ಬಳಕೆದಾರರ ಸಂಘಗಳಿದ್ದು, ಕೃಷ್ಣಾ ಕಾಡಾ ಭೀಮರಾಯನಗುಡಿ ವ್ಯಾಪ್ತಿಯಲ್ಲಿ 1850 ಸಂಘ ನೋದಣಿ ಆಗಬೇಕಾಗಿದ್ದು, 650 ಮಾತ್ರ ನೋಂದಣಿಯಾಗಿವೆ. 350 ಹಸ್ತಾಂತರಗಳಾಗಿವೆ. ಈ ಮೂಲಕ ನೀರಿನ ಹಂಚಿಕೆ ಮಾಡಿ, ನೀರಾವರಿ ಕರವಸೂಲಿ ಮಾಡಿ, ರೈತರ ವಾಜ್ಯಗಳು ಬಗೆಹರಿಸಿ ಎಂದಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಸಹಕಾರ ಸಂಘ ಪ್ರಮುಖ ಸ್ಥಾನದಲ್ಲಿದೆ ಎಂದರು.

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಈ ಹಿಂದೆ ನೀರಿನ ಅಭಾವ ಸೃಷ್ಟಿಯಾಗಿರಲಿಲ್ಲ. ಪ್ರಸ್ತುತ ದಿನಮಾನಗಳಲ್ಲಿ ರೈತರ ಬೆಳೆಗಳಿಗೆ ನೀರಿನ ಸಮಸ್ಯೆ ಭೂತಾಕಾರವಾಗಿ ಕಾಡುತ್ತಿದೆ. ಈ ಭಾಗದಲ್ಲಿ ನೀರಾವರಿಗಾಗಿ ಬಗ್ಗೆ ದೊಡ್ಡ ಕ್ರಾಂತಿಯಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾಡಾ ಅಧಿಕಾರಿ ಬಸವರಾಜ ತಳ್ಳಳ್ಳಿ ಮಾತನಾಡಿ, ಭತ್ತ ಬೆಳೆ ಹಾಗೂ ರಾಸಾಯನಿಕ ರಸಗೊಬ್ಬರಗಳಿಂದ ಜಮೀನುಗಳು ಜವಳಾಗಿದ್ದು, ಈ ಕುರಿತು ರೈತರು ಎರೆಹುಳು ಘಟಕ ಸ್ಥಾಪಿಸಿ ಇದರಿಂದ ಗೊಬ್ಬರ ಉತ್ಪಾದನೆ ಮಾಡಿ ಪ್ರಗತಿ ಸಾಧಿಸಿ ಎಂದು ಸಲಹೆ ನೀಡಿದರು.

ಪುರಸಭೆ ಸದಸ್ಯ ಶರಣುಕುಮಾರ ಸೊಲ್ಲಾಪುರ ಮಾತನಾಡಿದರು. ಪುರಸಭೆ ಅಧ್ಯಕ್ಷ ಧಶರಥ ಅರೆಶಂಕರ ಕಾರ್ಯಕ್ರಮ ಉದ್ಘಾಟಿಸಿದರು. ನೀರು ಬಳಕೆದಾರರ ಸಂಘದ ಅಧ್ಯಕ್ಷ ರಂಗಪ್ಪ ಡೆಂಗಿ ಸಹಕಾರ ಜಲ ಸಪ್ತಾಹದ ಧ್ವಜಾರೋಹಣ ನೇರವೇರಿಸಿದರು. ಪುರಸಭೆ ಅಧ್ಯಕ್ಷ ದಶರಥ ಆರೇಶಂಕರ ಹಾಗೂ ಕೆಬಿಜೆಎಲ್ಎಲ್ ಕಚೇರಿಯ ಎಇ ಸಿಲಾರ ರಂಜಾನೆ ಅವರನ್ನು ನೀರು ಬಳಕೆದಾರರ ಸಂಘದ ವತಿಯಿಂದ ಪೌರ ಸನ್ಮಾನ ಮಾಡಲಾಯಿತು.

ಪ್ರಮುಖರಾದ ಪರಮಣ್ಣ ಪೂಜಾರಿ, ಬಸವರಾಜ ಶಿವಪೂಜಿ, ಪವಾಡೆಪ್ಪ ಮ್ಯಾಗೇರಿ, ಬಸವರಾಜ ಕಮತಗಿ, ಮಲ್ಲನಗೌಡ ಕಾಮನಟಗಿ, ಅಮಲಪ್ಪ ಹಳ್ಳಿ, ಚಂದ್ರಶೇಖರ ವಜ್ಜಲ್ ಇತರರಿದ್ದರು. ನೂರಾರು ರೈತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವರ್ಷದಲ್ಲಿನ ಮುಂಗಾರು-ಹಿಂಗಾರು ಬೆಳೆಗಳಿಗೆ ಸಂತೃಪ್ತಿ ನೀರು ಸಿಗಬೇಕಾದರೇ ತಾಲೂಕಿನ ಎಲ್ಲೆಡೆ ಬೃಹತ್ ಕೆರೆಗಳ ನಿಮರ್ಾಣವಾಗಬೇಕಾಗಿದೆ. ಈ ನಿಟ್ಟಿನಲ್ಲಿ ರೈತರು 2 ಬೆಳೆಗಳಿಗೆ ನೀರು ಲಭ್ಯವಾಗಿ ರೈತರ ಬಾಳು ಹಸನಾಗಲಿದೆ. ತಾಲೂಕಿನಲ್ಲಿ ಸಕರ್ಾರಿ ಭೂಮಿ ಖಾಲಿ ಇದ್ದು, ಶಾಸಕರು ಅವುಗಳನ್ನು ಗುರುತಿಸಿ ಬೃಹತ್ ಕೆರೆಗಳ ನಿರ್ಮಾಣ ಮಾಡಿ, ಅವುಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ.
| ರಾಘವೇಂದ್ರ ಜಹಾಗೀರದಾರ