ಹಣಮಂತ ದೇವರ ಅದ್ದೂರಿ ಕಾರ್ತಿಕೋತ್ಸವ

ವಿಜಯವಾಣಿ ಸುದ್ದಿಜಾಲ ಕಕ್ಕೇರಾ
ಪೀರನಾಯ್ಕತಾಂಡಾದ ಹತ್ತಿರದ ಗವಿರಂಗ ಹಣಮಂತ ದೇವರ ಕಾರ್ತಿಕೋತ್ಸವವು ಭಾನುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ಕಾರ್ತಿಕೋತ್ಸವ ನಿಮಿತ್ತ ಶನಿವಾರ ರಾತ್ರಿ ದೇವರ ಗಂಗಸ್ಥಳ ನಡೆಯಿತು. ಭಾನುವಾರ ಬೆಳಗ್ಗೆ ದೇವಸ್ಥಾನದ ಭಕ್ತರು ದೀಡ್ ನಮಸ್ಕಾರ, ಜಾವಳ, ದೇವರಿಗೆ ನೈವೇದ್ಯ, ದೇವರ ಕಳಸ, ಛತ್ರಿ ಹಾಗೂ ಗಂಟೆಗಳನ್ನು ಅಪರ್ಿಸಿದರು. ಮೈಸೂರು ದಸರಾ ಖ್ಯಾತಿಯ ಜೆಟ್ಟೆಪ್ಪ ಯಲಗಟ್ಟಿಯ ಬೀರಲಿಂಗೇಶ್ವರ ಡೊಳ್ಳಿನ ಕಲಾತಂಡದ ಸದಸ್ಯರಿಂದ ಡೊಳ್ಳಿನ ನೃತ್ಯ ಮತ್ತು ಪದಗಳ ಕಾರ್ಯಕ್ರಮ ನಡೆದು ನೆರೆದ ಭಕ್ತರನ್ನು ರಂಜಿಸಿದರು.

ಪೂರ್ವಜರ ನಡೆಯಂತೆ 5ಜನ ಭಕ್ತರು ಕಲ್ಲಿನ ಬಂಡೆ ಮೇಲೆ ದೇವರ ಪ್ರಸಾದ ಸೇವಿಸಿದ ನಂತರ ಮಹಾಪ್ರಸಾದಕ್ಕೆ ಚಾಲನೆ ನೀಡಲಾಯಿತು. ನಂತರ ಮಧ್ಯಾಹ್ನ ಅರ್ಚಕರಿಂದ ದೇವರ ಹೇಳಿಕೆ ನಡೆಯಿತು.
ಗೈಯ್ಯಪ್ಪಪೂಜಾರಿ, ರೇವಣಸಿದ್ದಪ್ಪ ಪೂಜಾರಿ, ಭೀಮಣ್ಣಪೂಜಾರಿ, ಸೋಮನಿಂಗಪ್ಪ ಪೂಜಾರಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಸೋಮನಿಂಗಪ್ಪ ದೇಸಾಯಿ, ವೀರಸಂಗಪ್ಪ ಸಾಹು, ಪುರಸಭೆ ಮಾಜಿ ಅಧ್ಯಕ್ಷ ರಾಜು ಹವಾಲ್ದಾರ, ನಿಂಗಪ್ಪನಾಯ್ಕ ರಾಠೋಡ್, ತಿರುಪತಿ ಪವಾರ್, ಜಾನಪದ ಕಲಾವಿದ ಜೆಟ್ಟೆಪ್ಪ ಯಲಗಟ್ಟಿ, ಹಣಮಂತ ಯಲಗಟ್ಟಿ, ಅಯ್ಯಪ್ಪ ಮಾಲಗತ್ತಿ, ಅಂಬ್ರಪ್ಪ ಮುಂಡರಗಿ, ಅಂಬ್ರಣ್ಣ ಬೆಂಚಿಗಡ್ಡಿ, ಚಿದಾನಂದ ಯಲಗಟ್ಟಿ, ಸಣ್ಣನಿಂಗಪ್ಪ ಕುಂಟೋಜಿ ಇತರರಿದ್ದರು.