ಎಸ್ಎಸ್ಕೆ ಸಮಾಜಕ್ಕೆ ಶಿಕ್ಷಣ ಅವಶ್ಯ

ಗುರುಮಠಕಲ್: ಯಾವುದೇ ಸಮಾಜ ಅಭಿವೃದ್ಧಿಯಾಗಬೇಕಾದರೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಅವಶ್ಯಕತೆ ಇದೆ ಎಂದು ಎಸ್ಎಸ್ಕೆ ಸಮಾಜದ ಸಹ ಕಾರ್ಯದರ್ಶಿ ಹಣಮಂತರಾವ ಗೋಂಗಲೆ ಹೇಳಿದರು.

ಪಟ್ಟಣದ ಅಂಕಮ್ಮ ದೇವಸ್ಥಾನದಲ್ಲಿ ಆಯೋಜಿಸಿದ್ದ ರಾಜರಾಜೇಶ್ವರ ಸಹಸ್ತ್ರಾಜರ್ುನ ಮಹಾರಾಜರ ಜಯತ್ಯುತ್ಸವದಲ್ಲಿ ಮಾತನಾಡಿದ ಅವರು, ಸಮಾಜದ ಮಕ್ಕಳಲ್ಲಿ ಓದುವ ಸಾಮಥ್ರ್ಯ ಸಾಕಷ್ಟಿದೆ. ಆದರೆ ಪಾಲಕರ ಪ್ರೋತ್ಸಾಹ ಅಗತ್ಯವಾಗಿದೆ. ಸಮಾಜದಲ್ಲಿ ಆಥರ್ಿಕವಾಗಿ ಹಿಂದುಳಿದವರ ಸಬಲೀಕರಣಕ್ಕೆ ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದರು.

ಸಮಾಜದ ಉಪಾಧ್ಯಕ್ಷ ಬುಡ್ಡಪ್ಪ ಜನಾರ್ಧನ ಮಾತನಾಡಿ, ಭೂಮಂಡಲದ 7 ಚಕ್ರವರ್ತಿ ರಾಜರಲ್ಲಿ ಸಹಸ್ರಾಜರ್ುನ ಮಹಾರಾಜ ಪರಾಕ್ರಮಿಯಾಗಿದ್ದರು. ಇಂತಹ ರಾಜರ ವಂಶಸ್ಥರಾದ ನಾವು ಅವರ ಜೀವನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯುವಕ ಸಂಘದ ಅಧ್ಯಕ್ಷ ಅನೀಲ ಬಸೂದೆ, ಸಮಾಜದ ಅಧ್ಯಕ್ಷ ರಾಮಕಿಶನರಾವ ಗೋಂಗಲೆ, ಡಾ.ಜಯವಂತರಾವ ಕಾಶಿಗಾವ್, ರಾಜಕುಮಾರ ಹಬೀಬ್, ಡಾ.ನರಸಿಂಗರಾವ ವೈದ್ಯ, ನಾರಾಯಣರಾವ ಚೌದ್ರಿ, ಕಾರ್ಯದರ್ಶಿ ಚಂದುಲಾಲ ಚೌದ್ರಿ, ಲಕ್ಷ್ಮಣರಾವ ಕಮಲಾಪೂರ, ಲಕ್ಷ್ಮೀ ಚೌದ್ರಿ ಮತ್ತು ಪ್ರೀತಿಬಾಯಿ ಅಂಬಾದಾಸ್, ಜೀತ್ರಿ ಅವರನ್ನು ಸನ್ಮಾನಿಸಲಾಯಿತು.