ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸೂಚನೆ

ವಿಜಯವಾಣಿ ಸುದ್ದಿಜಾಲ ಯಾದಗಿರಿ
ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರ್ ನ್ಯಾಯಾಲಯಗಳಲ್ಲಿ ವಿವಿಧ ಕಾಯ್ದೆ ಕಲಂಗಳಡಿ ದಾಖಲಾದ ಎರಡು ವರ್ಷಕ್ಕಿಂತ ಹೆಚ್ಚಿನ ಅರೆ ನ್ಯಾಯಾಲಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಜಿಲ್ಲೆಯ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ಯಾದಗಿರಿ ತಹಸೀಲ್ದಾರ್ ನ್ಯಾಯಾಲಯದಲ್ಲಿ 38 ಮತ್ತು ಗುರುಮಠಕಲ್ ತಹಸೀಲ್ದಾರ್ ನ್ಯಾಯಾಲಯದಲ್ಲಿ 7 ಪ್ರಕರಣಗಳು 2 ವರ್ಷಕ್ಕೂ ಮೇಲ್ಪಟ್ಟು ಇದ್ದು, ತ್ವರಿತವಾಗಿ ಇತ್ಯರ್ಥಗೊಳಿಸಬೇಕು. ಅದೇ ರೀತಿ ಇಲಾಖಾ ವಿಚಾರಣೆಗಳನ್ನು ಇತ್ಯರ್ಥಗೊಳಿಸಬೇಕು ಎಂದರು.

ಗುರುಮಠಕಲ್, ವಡಗೇರಾ ಹಾಗೂ ಹುಣಸಗಿ ತಾಲೂಕುಗಳ ದಾಖಲೆ ಗುರುತಿಸುವಿಕೆ ಕುರಿತ ಪ್ರಶ್ನೆಗೆ, ಹೊಸ ಮೂರು ತಾಲೂಕು ಸೇರಿ ಎಲ್ಲ ಆರು ತಾಲೂಕುಗಳ ಆಯಾ ಪಹಣಿ (ಆರ್ಟಿಸಿ) ಮತ್ತು ಮುಟೇಶನ್ ಪಡೆಯಬಹುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಾದೇಶಿಕ ಆಯುಕ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಕ್ಫ್ ಮಂಡಳಿ ಜಿಲ್ಲಾ ಅಧಿಕಾರಿಗಳು, 2ನೇ ಸವರ್ೇಯಲ್ಲಿ ವಕ್ಫ್ ಆಸ್ತಿಯ 185 ಪ್ರಕರಣಗಳಿವೆ. ಇವುಗಳನ್ನು ಜಿಲ್ಲಾಧಿಕಾರಿ ಮೂಲಕ ಸಕರ್ಾರಕ್ಕೆ ಕಳುಹಿಸಿದ್ದು, ಸದ್ಯದಲ್ಲೇ ರಾಜ್ಯಪತ್ರದಲ್ಲಿ ಪ್ರಕಟವಾಗಲಿದೆ ಎಂದರು.

ಜಿಲ್ಲೆಯಲ್ಲಿರುವ 1,394 ವಕ್ಫ್ ಆಸ್ತಿಗಳ ಪೈಕಿ 648 ಪ್ರಕರಣಗಳ ಖಾತಾ ಅಪ್ಡೇಟ್ ಆಗಿದೆ. ಉಳಿದ 746 ಪ್ರಕರಣಗಳ ಖಾತಾ ಆಗಬೇಕಿದೆ. ಕಂದಾಯ ಇಲಾಖೆ, ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯ ವಕ್ಫ್ ಆಸ್ತಿಗಳನ್ನು ಒಂದು ವಾರದಲ್ಲಿ ಖಾತೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಹಾಯಕ ಆಯುಕ್ತ ಡಾ.ಬಿ.ಎಸ್. ಮಂಜುನಾಥ ಸ್ವಾಮಿ ಸಭೆಗೆ ವಿವರಿಸಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಜಂಟಿ ಕೃಷಿ ನಿದರ್ೇಶಕಿ ಆರ್.ದೇವಿಕಾ, ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ, ಚನ್ನಮಲ್ಲಪ್ಪ ಘಂಟಿ, ಸಂಗಮೇಶ, ಸುರೇಶ ಇದ್ದರು.

ಸರ್ಕಾರಿ ಜಮೀನು ಒತ್ತುವರಿ ಶೀಘ್ರ ತೆರವುಗೊಳಿಸಬೇಕು. ಸಕರ್ಾರಿ ಭೂಮಿಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಸೂಕ್ತ ರಕ್ಷಣೆ ಮಾಡಬೇಕು. ಇತರ ಇಲಾಖೆಗಳು ಅಭಿವೃದ್ಧಿ ಕೆಲಸಗಳಿಗೆ ಜಾಗ ಕೇಳಿದ್ದಲ್ಲಿ ಆದ್ಯತೆ ಮೇರೆಗೆ ಮಂಜೂರು ಮಾಡಬೇಕು.
| ಸುಬೋಧ ಯಾದವ್
ಪ್ರಾದೇಶಿಕ ಆಯುಕ್ತ ಕಲಬುರಗಿ