18,245 ಹೊಸ ಮತದಾರರು ನೋಂದಣಿ

ಯಾದಗಿರಿ: ಜಿಲ್ಲಾದ್ಯಂತ ಅಕ್ಟೋಬರ್ 10ರಿಂದ ನವೆಂಬರ್ 25ರವರೆಗೆ 18,245 ಹೊಸ ಮತದಾರರು ಹೆಸರು ನೋಂದಾಯಿಸಿದ್ದಾರೆ ಎಂದು ಜಿಲ್ಲಾ ಮತದಾರರ ಪಟ್ಟಿ ವೀಕ್ಷಕರಾದ ವಸತಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ಜೆ. ರವಿಶಂಕರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿಧಾನಸಭೆ, ಲೋಕಸಭಾ ಚುನಾವಣೆ ಪರಿಷ್ಕೃತ ಮತದಾರರ ಪಟ್ಟಿ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಾ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿದರ್ೇಶನದಂತೆ 2019ರ ಜನವರಿ 1ರ ಅರ್ಹತಾ ದಿನದಂತೆ ವಿಧಾನಸಭೆ ಕ್ಷೇತ್ರಗಳ ಮತದಾರರ ಭಾವಚಿತ್ರ ಒಳಗೊಂಡ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುತ್ತಿದೆ. ಪಟ್ಟಿ ಬಗ್ಗೆ ಬಂದಂತಹ ದೂರು, ಆಕ್ಷೇಪಣೆಗಳ ಪರಿಶೀಲನೆ ನಡೆದಿದ್ದು, ಡಿಸೆಂಬರ್ 31ರೊಳಗೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 2019ರ ಜನವರಿ 15ರಂದು ಮತದಾರರ ಭಾವಚಿತ್ರವಿರುವ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಹೇಳಿದರು.

ಸುರಪುರ ವಿಧಾನಸಭೆ ಕ್ಷೇತ್ರದಲ್ಲಿ ಹೊಸ ಮತದಾರರ ಸೇರ್ಪಡೆಗಾಗಿ ಆನ್ಲೈನ್ ಮತ್ತು ನೇರವಾಗಿ ಅರ್ಜಿ ನಮೂನೆ 6ರಲ್ಲಿ 4,056 ಅರ್ಜಿ ಬಂದಿವೆ. ಶಹಾಪುರ ಕ್ಷೇತ್ರದಲ್ಲಿ 4,589, ಯಾದಗಿರಿ 5,295 ಮತ್ತು ಗುರುಮಠಕಲ್ ಕ್ಷೇತ್ರದಲ್ಲಿ 4,305 ಸೇರಿ 18,245 ಅರ್ಜಿ ಬಂದಿವೆ. ಹೆಸರು ತೆಗೆದು ಹಾಕಲು ಅರ್ಜಿ ನಮೂನೆ 7ರಲ್ಲಿ ನಾಲ್ಕೂ ಕ್ಷೇತ್ರಗಳಿಂದ 13,420 ಅರ್ಜಿ ಬಂದಿವೆ. ನಮೂನೆ 8ರಲ್ಲಿ ತಿದ್ದುಪಡಿಗಾಗಿ 2,918, ಬೂತ್ ಸ್ಥಳಾಂತರಕ್ಕಾಗಿ ನಮೂನೆ 8ಎ ನಲ್ಲಿ 415 ಅರ್ಜಿ ಸ್ವೀಕೃತವಾಗಿವೆ ಎಂದು ವಿವರಿಸಿದರು.

ಕ್ಷೇತ್ರಗಳ ಮತದಾರರ ಭಾವಚಿತ್ರ ಒಳಗೊಂಡ ಪಟ್ಟಿಯನ್ನು ಲೋಪದೋಷ ಇಲ್ಲದಂತೆ ಸಿದ್ಧಪಡಿಸಲು ಅಧಿಕಾರಿಗಳು ಶ್ರಮಿಸಬೇಕು. ಚುನಾವಣಾ ಆಯೋಗದ ನಿದರ್ೇಶನದಂತೆ ಪರಿಷ್ಕರಣೆ ಮಾಡಿದ್ದಲ್ಲಿ ಚುನಾವಣೆ ವೇಳೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದರು.

ಜಿಲ್ಲಾ ಚುನಾವಣಾಧಿಕಾರಿ ಎಂ.ಕೂಮರ್ಾರಾವ್ ಮಾತನಾಡಿ, ಜಿಲ್ಲೆಯಲ್ಲಿ 8 ಮತದಾನ ಕೇಂದ್ರ ಹೆಚ್ಚಿಸಲಾಗಿದೆ. ಮತಗಟ್ಟೆಗಳ ಸಂಖ್ಯೆ 1,135ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 4,87,799 ಪುರುಷ, 4,87,215 ಮಹಿಳೆಯರು ಸೇರಿ 9,75,014 ಮತದಾರರಿದ್ದಾರೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಸಹಾಯಕ ಆಯುಕ್ತ ಡಾ.ಬಿ.ಎಸ್. ಮಂಜುನಾಥ ಸ್ವಾಮಿ, ಜಿಪಂ ಉಪ ಕಾರ್ಯದರ್ಶಿ ವಸಂತರಾವ ವಿ.ಕುಲಕರ್ಣಿ, ಚುನಾವಣೆ ಶಾಖೆ ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಬಾಡಿಯಾಳ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್, ಜೆಡಿಎಸ್ನ ಶಾಂತಪ್ಪ ಜಾಧವ್ ಇದ್ದರು.

ಚುನಾವಣಾ ಪೂರ್ವ ಅಧಿಕಾರಿಗಳು ನಡೆಸುವ ಪ್ರಕ್ರಿಯೆಯಲ್ಲೂ ಎಲ್ಲ ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಾಗಿದೆ. ಹಾಗಾಗಿ ರಾಜಕೀಯ ಪಕ್ಷದವರು ಬೂತ್ ಲೆವೆಲ್ ಏಜೆಂಟ್ (ಬಿಎಲ್ಎ)ರನ್ನು ನೇಮಿಸುವ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿಖರ ಮಾಹಿತಿ ಪಡೆಯಲು ಬಿಎಲ್ಒಗಳಿಗೆ ಸಹಕರಿಸಬೇಕು.
| ಡಾ.ಜೆ. ರವಿಶಂಕರ್
ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ