ಶಿಕ್ಷಣಕ್ಕೆ ಪ್ರಾಯೋಗಿಕ ಜ್ಞಾನ ಅತಿ ಅವಶ್ಯಕ

ವಿಜಯವಾಣಿ ಸುದ್ದಿಜಾಲ ಸೈದಾಪುರ
ಗುಣಮಟ್ಟದ ಶಿಕ್ಷಣಕ್ಕೆ ಪ್ರಾಯೋಗಿಕ ಜ್ಞಾನ ಅವಶ್ಯಕತೆ ಹೊಂದಿದ್ದೂ, ಇದನ್ನು ವಸ್ತು ಪ್ರದರ್ಶನದಂತಹ ಕಾರ್ಯಕ್ರಮಗಳ ಮೂಲಕ ಕಂಡು ಕೊಳ್ಳಲು ಸಾಧ್ಯವಿದೆ ಎಂದು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಿರಿಯ ನ್ಯಾಯವಾದಿ ಬಸವರಾಜ ಪಾಟೀಲ್ ಕ್ಯಾತನಾಳ ಅಭಿಪ್ರಾಯಪಟ್ಟರು.

ವಿದ್ಯಾವರ್ಧಕ ಪ್ರೌಢ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ತ ಹಮ್ಮಿಕೊಂಡ ರಂಗೋಲಿ ಹಾಗೂ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿತ್ಯದ ಬದುಕಿನಲ್ಲಿ ನಮಗೆ ಅರಿವಿಲ್ಲದಂತೆ ವೈಜ್ಞಾನಿಕತೆ ಕಾಣುತ್ತೇವೆ. ಅದರ ಅನುಭವ ನಮಗಾಗುವುದಿಲ್ಲ. ಅದನ್ನು ಇಲ್ಲಿನ ವಿದ್ಯಾರ್ಥಿಗಳು ವಿವಿಧ ಮಾದರಿಗಳ ಪ್ರದರ್ಶನದೊಂದಿಗೆ ಜಾಗೃತಿ ಮೂಡಿಸುತ್ತಿರುವ ಕಾರ್ಯ ಉತ್ತಮವಾಗಿದೆ. ಇದರಿಂದ ಮಕ್ಕಳಲ್ಲಿ ಶೃಜನಶೀಲ ಗುಣ ಕಾಣಬಹುದು ಎಂದು ಹೇಳಿದರು.

ಸಂಸ್ಥೆ ಕಾರ್ಯದರ್ಶಿ ಮಹಿಪಾಲರಡ್ಡಿ ದುಪ್ಪಲ್ಲಿ, ಕೋಶಾಧ್ಯಕ್ಷ ವೆಂಕಟೇಶ ಪುರಿ, ಆಡಳಿತ ಮಂಡಳಿಯ ಸದಸ್ಯರಾದ ಸಂಗಪ್ಪಗೌಡ ಐರಡ್ಡಿ, ರಾಮೇಶ್ವರ ಕಟ್ಟಿಮನಿ, ದಿಲೀಪಕುಮಾರ, ಮುಖ್ಯಗುರು ಲಿಂಗಾರಡ್ಡಿ ನಾಯಕ, ಪ್ರಾಚಾರ್ಯರಾದ ಜಿ.ಎಂ.ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ, ವಿಜ್ಞಾನ ಶಿಕ್ಷಕ ರಾಚಯ್ಯ ಸ್ವಾಮಿ ಬಾಡಿಯಾಲ, ಕಾಶೀನಾಥ ಶೇಖಸಿಂದಿ, ಕವಿತಾ, ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.

40 ವಿಜ್ಞಾನ ವಸ್ತುಗಳ ಮಾದರಿ ಪ್ರದರ್ಶನ: ವಸ್ತು ಪ್ರದರ್ಶನದಲ್ಲಿ ವ್ಯವಸಾಯ ಮತ್ತು ಸಾವಯವ ಕೃಷಿ, ಮೀನುಗಾರಿಕೆ, ಕೋಳಿ ಸಾಗಣಿಕೆ, ಸ್ಮಾಟರ್್ ಸಿಟಿ, ಆಧುನಿಕ ಸಾರಿಗೆ ಸಂಪರ್ಕ, ಎಲೆಕ್ಟ್ರಾನಿಕ್ ವಿನ್ಯಾಸ, ರೇಖಾಗಣಿತ, ತ್ರಿಕೋನಮಿತಿ ಶಾಸ್ತ್ರ, ವರ್ಗಗಳ ಸಂಕೇತ, ಸ್ವಚ್ಛಭಾರತ ಅಭಿಯಾನ, ಕಾಗದದ ಮರುಬಳಿಕೆ, ವಿದ್ಯುತ ಪ್ರವಾಹ, ಸಮೀಪ ಹಾಗೂ ದೂರ ದೃಷ್ಟಿ ದೋಷ, ಮಳೆ ನೀರು ಕೊಯ್ಲು, ಮಾದರಿ ಹೂಗಳ ಭಾಗಗಳ ಪರಿಚಯ, ಸೋಲಾರ್ ವಿಲೇಜ್, ರೊಬೋಟ್, ಪವನ ಶಕ್ತಿ, ಸಸ್ಯ ಜೀವಕೋಶ, ನಿಲ್ಸ್ ಬೋರನ ಪರಮಾಣು ಮಾದರಿ, ನೀರಿನ ಶುದ್ಧಿಕರಣ, ಎ.ಸಿ.ಮೋಟಾರ್, ಬಾಹ್ಯಕಾಶಯಾನ, ಎರಡು ರಾಕೇಟ್ ಸೇರಿ ಒಟ್ಟು 40 ವಿಜ್ಞಾನ ವಸ್ತುಗಳ ಮಾದರಿಗಳನ್ನು ಪ್ರದರ್ಶಿಸಲಾಯಿತು. 8, 9, 10ನೇ ತರಗತಿ ವಿದ್ಯಾರ್ಥಿಗಳು ರಂಗೋಲಿ ಬಿಡಿಸಿ ತಮ್ಮ ಕಲೆ ಅನಾವರಣ ಮಾಡಿದರು.