ಮಲ್ಲಯ್ಯನ ಜಾತ್ರೆಯಲ್ಲಿ ಭಕ್ತರಿಂದ 700 ಕುರಿ ಮರಿಗಳ ಜಪ್ತಿ

ಯಾದಗಿರಿ: ಮೈಲಾಪುರ ಗ್ರಾಮದ ಜಾತ್ರೆಯಲ್ಲಿ ಮಲ್ಲಯ್ಯ ಪಲ್ಲಕ್ಕಿ ಮೇಲೆ ಎಸೆಯಲು ತಂದ 700 ಕುರಿ ಮರಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಜಾತ್ರೆಯಲ್ಲಿ ದಾಳಿ ನಡೆಸಿದ ಕಂದಾಯ ಇಲಾಖೆ ಹಾಗೂ ಪೊಲೀಸರು ಜಾತ್ರೆಯಲ್ಲಿ ಎಸೆಯಲು ಭಕ್ತರು ತಂದಿದ್ದ ಕುರಿಮರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಇಂದು ಮಧ್ಯಾಹ್ನ ಮಲ್ಲಯ್ಯ ಗಂಗಾ ಸ್ನಾನಕ್ಕೆ ತೆರಳುವ ವೇಳೆ ಮಲ್ಲಯ್ಯನ ಪಲ್ಲಕ್ಕಿ ಮೇಲೆ ಭಕ್ತರಿಂದ ಪಲ್ಲಕ್ಕಿ ಮೇಲೆ‌ ಕುರಿಮರಿ, ಕುರಿ ಉಣ್ಣೆ, ಜೋಳದ‌ ದಂಟುಗಳನ್ನು ಎಸೆಯುವುದು ಭಕ್ತರ ರೂಢಿ,

ಆದರೆ ಪಲ್ಲಕ್ಕಿ ‌ಮೇಲೆ ಕುರಿ ಮರಿ ಎಸೆಯುವದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ನಿಷೇಧದ ನಡುವೆಯೂ ಕುರಿಮರಿ ತಂದಿದ್ದಕ್ಕೆ ಕುರಿಮರಿಗಳನ್ನು‌ ಜಪ್ತಿ ಮಾಡಲಾಗಿದೆ.

ಜಿಲ್ಲಾಡಳಿತದಿಂದ 6 ಚೆಕ್ ಪೋಸ್ಟ್‌ಗಳನ್ನು ತೆರೆದಿದ್ದು, ಡ್ರೋಣ್ ಕ್ಯಾಮರಾದ ಮೂಲಕ ಕಿಡಿಗೇಡಿಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.

ನಿಷೇಧವಿದ್ದರೂ ಕುರಿಮರಿಗಳನ್ನು ತಂದಿದ್ದ ಭಕ್ತರಿಂದ 700 ಕುರಿ‌ಮರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು‌ ವಿಜಯವಾಣಿಗೆ ಯಾದಗಿರಿ ತಹಸೀಲ್ದಾರ್‌ ಚನ್ನಮಲ್ಲಪ್ಪ‌ ಘಂಟಿ ಹೇಳಿದ್ದಾರೆ.

Leave a Reply

Your email address will not be published. Required fields are marked *