ಪೌಷ್ಟಿಕಾಂಶ ಆಹಾರ ಸೇವಿಸಿ

ಯಾದಗಿರಿ: ಗರ್ಭಿಣಿಯರು ಪೌಷ್ಟಿಕಾಂಶದ ಆಹಾರ ಸೇವಿಸಬೇಕು. ಅಪೌಷ್ಟಿಕತೆ ನಿವಾರಿಸುವಲ್ಲಿ ಕೇವಲ ಗರ್ಭಿಣಿಯರಷ್ಟೇ ಮುತುವರ್ಜಿ ವಹಿಸಿದರೆ ಸಾಲದು. ಇದಕ್ಕೆ ವಿವಿಧ ಇಲಾಖೆಗಳು ಮತ್ತು ಮುಖ್ಯವಾಗಿ ಕುಟುಂಬದವರು ನೆರವು, ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.

ಮಗು ಮತ್ತು ಕಾನೂನು ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವಸಿಟಿ (ಸಿಸಿಎಲ್-ಎನ್ಎಲ್ಎಸ್ಐಯು) ಬೆಂಗಳೂರು ವತಿಯಿಂದ ಯುನಿಸೆಫ್ನ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕನರ್ಾಟಕ ಪ್ರಾದೇಶಿಕ ಕಚೇರಿ ಬೆಂಬಲದೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಡಿ ಜಿಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಯಾದಗಿರಿ ಜಿಲ್ಲೆಯಲ್ಲಿ ಅಪೌಷ್ಟಿಕತೆ ಸವಾಲುಗಳನ್ನು ಗುರುತಿಸುವ ಮತ್ತು ನಿವಾರಣೆ ಕುರಿತ ಸಮಾಲೋಚನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆರೋಗ್ಯವಂತ ಮಕ್ಕಳು ಜನಿಸುವಂತಾದರೆ ಅಪೌಷ್ಟಿಕತೆ ನಿವಾರಣೆಯಾಗಿ ಆರೋಗ್ಯಪೂರ್ಣ ಸಮಾಜ ನಿಮರ್ಾಣ ಮಾಡಲು ಸಾಧ್ಯವಾಗುತ್ತದೆ ಎಂದರು.

ಯುನಿಸೆಫ್ ಸಮಾಲೋಚಕ ಡಾ.ತಾರಾ ಎಂ.ಎಸ್. ಮಾತನಾಡಿ, ಹಸಿವು ನೀಗಿಸುವುದರಿಂದ ಮಾತ್ರ ಅಪೌಷ್ಟಿಕತೆ ನಿವಾರಣೆ ಆಗುವುದಿಲ್ಲ. ಪೌಷ್ಟಿಕಾಂಶದ ಆಹಾರ ಸೇವನೆ ಮಾಡಿದರೆ ಅಪೌಷ್ಟಿಕತೆ ನಿವಾರಣೆ ಆಗುತ್ತದೆ. ಇದಕ್ಕಾಗಿ ಸಕರ್ಾರದ ಹಲವು ಯೋಜನೆಗಳಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಗು ಮತ್ತು ಕಾನೂನು ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವಸಿಟಿಯ ಕುಮಾರಸ್ವಾಮಿ ಟಿ. ಮಾತನಾಡಿ, ಮಹಿಳೆ ಮತ್ತು ಮಕ್ಕಳಲ್ಲಿ ಹಲವಾರು ಕಾರಣಗಳಿಂದ ಅಪೌಷ್ಟಿಕತೆ ಉಂಟಾಗುತ್ತದೆ. ಇದನ್ನು ನಿವಾರಿಸುವ ಜವಾಬ್ದಾರಿ ಹೊತ್ತಿರುವ ಇಲಾಖೆಗಳ ನಡುವೆ ಸಮನ್ವಯತೆ ಇದ್ದಾಗ ಅಪೌಷ್ಟಿಕತೆ ನಿರ್ಮೂಲನೆ ಮಾಡಬಹುದು ಎಂದರು.

ಆರೋಗ್ಯ ಚೆನ್ನಾಗಿದ್ದರೆ ಜೀವನದಲ್ಲಿ ಏನಾದರೂ ಸಂಪಾದನೆ, ಸಾಧನೆ ಮಾಡಬಹುದು. ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ ನಿರ್ಮಿಸಿದ ಮನೆಗಳಿಗೆ ಸ್ವಚ್ಛ ಭಾರತ ಮಿಷನ್-2ರಡಿ ಶೌಚಗೃಹ ನಿರ್ಮಾಣ ಮಾಡಬೇಕಾಗಿದೆ. ಜಿಲ್ಲೆಯಲ್ಲಿ ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಂಡಿರುವ ಸಾರ್ವಜನಿಕರು ಅವುಗಳ ಬಳಕೆಗೆ ಹೆಚ್ಚಿನ ಒತ್ತು ನೀಡುವಂತೆ ಪ್ರಚಾರ ನಡೆಸಲಾಗುವುದು.
| ಕವಿತಾ ಎಸ್.ಮನ್ನಿಕೇರಿ ಜಿಪಂ ಸಿಇಒ