ಮೋದಿ ಮತ್ತೊಮ್ಮೆ ಪ್ರಧಾನಿ ಮಾಡುವುದೇ ಗುರಿ

ಕೊಡೇಕಲ್: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಮಾಡುವುದೇ ಮುಖ್ಯ ಗುರಿಯಾಗಿದೆ ಎಂದು ಬಿಜೆಪಿ ಸ್ಟಾರ್ ಪ್ರಚಾರಕ, ಶಾಸಕ ನರಸಿಂಹ ನಾಯಕ ಹೇಳಿದರು.

ಗುರುವಾರ ಸಂಜೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕೊಡೇಕಲ್ ಜಿಪಂ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಗುರುಗುಂಟಾ ಸಂಸ್ಥಾನದ ರಾಜಾ ಅಮರೇಶ ನಾಯಕ ಅವರಿಗೂ ಮತ್ತು ಕೊಡೇಕಲ್ನ ರಾಜ ಮನೆತನಕ್ಕೂ ಅವಿನಾಭಾವ ಸಂಬಂಧವಿದೆ. ಈ ಚುನಾವಣೆಯಲ್ಲಿ ಕೊಡೇಕಲ್ ರಾಜ ಮನೆತನದವರೇ ಸ್ಪರ್ಧೆ ಮಾಡಿದ್ದಾರೆ ಎಂದು ತಿಳಿದು ಕಾರ್ಯಕರ್ತರ ಶ್ರಮಿಸಬೇಕು ಎಂದರು.

ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅನೇಕ ಜನಪರ ಯೋಜನೆಗಳನ್ನು ನೀಡಿದ್ದಾರೆ. ರೈತರಿಗಾಗಿಯೇ ವಿವಿಧ ಯೋಜನೆಗಳನ್ನು ನೀಡಿರುವ ಮೋದಿ ಅವರ ಕಾರ್ಯ ಸಾಧನೆಗಳೇ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಮುಖರಾದ ರಾಜಾ ಹನುಮಪ್ಪ ನಾಯಕ ತಾತಾ, ಬಬಲುಗೌಡ, ಅಂಬ್ರಣ್ಣ ಹುಡೇದ, ಎಚ್.ಸಿ.ಪಾಟೀಲ್, ರಂಗನಾಥ ದೋರಿ, ಮೋಹನ ಪಾಟೀಲ್, ಗೌಡಪ್ಪಗೌಡ ಪೊಲೀಸ್ ಪಾಟೀಲ್, ಡಾ.ಬಿ.ಬಿ. ಬಿರಾದಾರ, ಬಾಲಾಜಿ ಚವ್ಹಾಣ್, ಸೋಮನಿಂಗಪ್ಪ ದೋರಿ, ಕನಕು ಜಿರಾಳ, ಬಸನಗೌಡ ಅಳ್ಳಿಕೋಟಿ, ದೇವು ಗೋಪಾಳಿ, ಮಲ್ಲು ನವಲಗುಡ್ಡ, ಹಣಮಂತ್ರಾಯ ಕಾರಲಕುಂಟಿ, ವೀರಸಂಗಪ್ಪ ಹಾವೇರಿ, ಬಸವರಾಜ ಜೇವಗರ್ಿ, ರವೀಂದ್ರ ಅಂಗಡಿ, ಶಂಕರಗೌಡ ಜೇವಗರ್ಿ, ಮಹ್ಮದ್ ಖಾಜಿ, ಶಾಮಸುಂದರ ಜೋಶಿ, ವೀರಸಂಗಪ್ಪ ಅಂಬ್ಲಿಹಾಳ, ಬಸಣ್ಣ ಹಾವೇರಿ, ಧರೆಪ್ಪ ಮೇಟಿ, ಬಶೀರ್ ಅಹ್ಮದ್, ಬಸನಗೌಡ ಮಾಲಿಪಾಟೀಲ್, ರಾಚಪ್ಪಗೌಡ ಪೊಲೀಸ್ ಪಾಟೀಲ್ ಇತರರಿದ್ದರು.