ಚುನಾವಾಣೆ ಬಂದಾಗಲೇ ಇಲ್ಲಿನ ಜನರ ನೆನಪು

ಗುರುಮಠಕಲ್: ಚುನಾವಣೆ ಬಂದಾಗ ಮಾತ್ರ ಖರ್ಗೆ ಅವರಗೆ ಗುರುಮಠಕಲ್ ಜನರ ಮೇಲೆ ಪ್ರೀತಿ ಹುಟ್ಟುತ್ತದೆ. ಚುನಾವಣೆ ಮಗಿದ ಮರುದಿನವೇ ಇಲ್ಲಿನ ಜನರನ್ನು ಮರೆತು ಹೋಗುತ್ತಾರೆ ಎಂದು ಬಿಜೆಪಿ ಮುಖಂಡ ಸಾಯಿಬಣ್ಣ ಬೊರಬಂಡಾ ಖರ್ಗೆ ವಿರುದ್ಧ ಆರೋಪಿಸಿದರು.

ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಖರ್ಗೆ ಅವರು ಇಂದು ರಾಷ್ಟ್ರದ ನಾಯಕರಾಗಲು ಗುರುಮಠಕಲ್ ಜನರು ಮೂಲ ಕಾರಣ ಎಂಬುದನ್ನು ಮರೆತತಿದ್ದಾರೆ. ಚುನಾವಣೆಗೆ ಮಾತ್ರ ಇಲ್ಲಿನವರು ನೆನಪಾಗುತ್ತಾರೆ. ಆದರೆ ಇಲ್ಲಿವರೆಗೆ ಸ್ಥಳೀಯ ಮುಖಂಡರನ್ನು ಬೆಳಸುವ ಕೆಲಸ ಖಗರ್ೆ ಅವರು ಮಾಡಿಲ್ಲ. ಇದನ್ನು ಇಲ್ಲಿನ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಮೋದಿ ಅವರ ಸಾಧನೆ ಜನರಿಗೆ ತಿಳಿ ಹೇಳಬೇಕು. ಭೀಮಾ ನದಿಯಿಂದ ಕುಡಿವ ನೀರಿನ ಯೋಜನೆಯಿಂದ ಹಿಡಿದು ಕೆರೆ ತುಂಬುವ ಯೋಜನೆ ನಮ್ಮ ಹೋರಾಟದ ಫಲವಾಗಿದೆ. ನಮ್ಮ ಹೋರಾಟಗಳನ್ನು ಹಾಗೂ ಸಾಧನೆಗಳನ್ನು ಜನರ ಮುಂದೆ ಇಟ್ಟು ಮತ ಕೇಳಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.

ನಾಗೇಂದ್ರಪ್ಪ ದುಗುನೂರ, ಚಂದುಲಾಲ, ವೆಂಕಟಪ್ಪ, ಪುಷ್ಪವತಿ, ನರೇಶ, ಭೀಮು, ಕಿಷ್ಟಪ್ಪ, ರಾಜು, ಜನಾರ್ಧನ ಇತರರಿದ್ದರು.