ಬೀದಿನಾಟಕದ ಮೂಲಕ ಮತದಾನ ಜಾಗೃತಿ

ಕಕ್ಕೇರಾ: ಪಟ್ಟಣದಲ್ಲಿ ಬುಧವಾರ ಮಾಲಗತ್ತಿಯ ಸಿದ್ಧಾರ್ಥ ಎಜ್ಯುಕೇಶನ್ ಕಲಾ ತಂಡದ ಸದಸ್ಯರು ಬೀದಿ ನಾಟಕದ ಮೂಲಕ ಲೋಕಸಭೆ ಚುನಾವಣೆ ಮತದಾನ ಕುರಿತು ಜಾಗೃತಿ ಮೂಡಿಸಿದರು.

ವಾಲ್ಮೀಕಿ ವೃತ್ತದ ಅಗಸಿ ಮಾರ್ಗದಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆ 2019ರ ಪ್ರಯುಕ್ತ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುರಪುರ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಡೆದ ಮತದಾರರಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಕಲಾತಂಡದ ಸದಸ್ಯರಿಂದ 23ರಂದು ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತ ಚಲಾವಣೆ ಮಾಡಬೇಕು ಎಂದು ತಿಳಿಸಿದರು.

ಉತ್ತಮ ವ್ಯಕ್ತಿಗೆ ಮತದಾನ ಮಾಡುವ ಮೂಲಕ ಸದೃಢ ದೇಶ ಕಟ್ಟಲು ತಾವೆಲ್ಲರೂ ಮತ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಿರಿ. ಯಾವುದೇ ಕಾರಣಕ್ಕೂ ನೋಟು, ಮದ್ಯ ಹಾಗೂ ಇನ್ನಿತರ ಆಸೆ, ಆಮಿಷಗಳಿಗೆ ಬಲಿಯಾಗದೇ ಮತ ಮಾರಾಟದ ವಸ್ತು ಅಲ್ಲ ಎಂಬುದನ್ನು ನಾಟಕದ ಮೂಲಕ ಪ್ರದರ್ಶಿಸಿದರು.
ಅಂಗನವಾಡಿ ಕಾರ್ಯಕತರ್ೆಯರಾದ ಭಾರತಿ ಜೋಶಿ, ಶಶಿಕಲಾ ಕಾಂಗ್ರೇಸ್, ನರಸಮ್ಮ ಅಂಗಡಿ, ಮಲ್ಕಮ್ಮ ಸಾಹುಕಾರ, ಪ್ರೇಮಿಳಾ ಕುಲಕಣರ್ಿ, ಮಲ್ಲಮ್ಮ, ಸುನೀತಾ ಇದ್ದರು.