ಮೈತ್ರಿಧರ್ಮ ಪಾಲಿಸಲು ಸಲಹೆ

ಯಾದಗಿರಿ: ಶಾಸಕ ನಾಗನಗೌಡ ಕಂದಕೂರ ಮತ್ತು ಡಾ.ಮಲ್ಲಿಕಾರ್ಜುನ ಖರ್ಗೆ ಮಧ್ಯೆ ಇರುವ ಯಾವುದೇ ಭಿನ್ನಾಭಿಪ್ರಾಯದ ಬಗ್ಗೆ ಸಧ್ಯ ಕಾರ್ಯಕರ್ತರು ಕಿವಿಗೊಡದೆ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ ಮೈತ್ರಿಧರ್ಮ ಪಾಲನೆ ಮಾಡಬೇಕಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶರಣಗೌಡ ಕಂದಕೂರ ತಿಳಿಸಿದರು.

ಗುರುಮಠಕಲ್ ಪಟ್ಟಣದಲ್ಲಿ ನಡೆದ ಜೆಡಿಎಸ್ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆದೇಶ ಮೇರೆಗೆ ನಾವು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡಬೇಕಿದ್ದು, ಹಿರಿಯರಾದ ಖರ್ಗೆ ಕೂಡ ಶಾಸಕ ನಾಗನಗೌಡ ಕಂದಕೂರ ಅವರಿಗೆ ಭೇಟಿ ಮಾಡಿ ತಮಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದ್ದಾರೆ ಎಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದು ಪಕ್ಷದ ವರೀಷ್ಠರ ಮಾತಿಗೆ ಬೆಲೆ ಕೊಡಬೇಕಾಗಿರುವುದು ನಮ್ಮ ಕರ್ತವ್ಯ. ಹೀಗಾಗಿ ಕಾಂಗ್ರೆಸ್ ಅಭ್ಯಥರ್ಿಯಾಗಿರುವ ಖರ್ಗೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಕಾರ್ಯಕರ್ತರು ಕೂಡಲೇ ಚುನಾವಣಾ ಪ್ರಚಾರಕ್ಕೆ ಅಣಿಯಾಗುವಂತೆ ಕೋರಿದರು.

ಸಭೆಯಲ್ಲಿ ಮುಖಂಡರಾದ ಲಕ್ಷ್ಮಾರಡ್ಡಿ ಅನಪೂರ, ಬಾಲಪ್ಪ ನಿರೇಟಿ, ಜಿ.ತಮ್ಮಣ್ಣ, ಕೃಷ್ಣಾರಡ್ಡಿ ಪಾಟೀಲ್, ಭೀಮರಡ್ಡಿ ಚಂಡ್ರಿಕಿ, ಭೀಮಶಪ್ಪ ಗುಡುಸೆ, ಮಸಿಯೋದ್ದಿನ್ ಆಸಿಂ, ವೀರಪ್ಪ ಪ್ಯಾಟಿ, ಲಿಂಗಪ್ಪ ತಾಂಡೂರಕರ್, ಯುವ ಮುಖಂಡರಾದ ಪ್ರಕಾಶ ನಿರೆಟ್ಟಿ, ನವಾಜರಡ್ಡಿ ಪಾಟೀಲ್, ರವೀಂದ್ರರಡ್ಡಿ, ಬಾಲು ದಾಸರಿ, ಸಿರಾಜ್ ಚಿಂತಕುಂಟಾ, ಅಂಬಾದಾಸ್ ಜಿತ್ರಿ, ವಿಜಯಕುಮಾರ್ ನಿರೆಟಿ, ಸತ್ಯನಾರಾಯಣ ತಿವಾರಿ, ನರಸಪ್ಪ ಧನವಾಡ, ಅಯ್ಯುಬ್ ಪುಟಪಾಕ್ ಇದ್ದರು.

Leave a Reply

Your email address will not be published. Required fields are marked *