ವಾಂತಿ ಭೇದಿಯಿಂದ ಒಂದೇ ಕುಟುಂಬದ ಮೂವರು ಸಾವು

ಯಾದಗಿರಿ: ಅನಾರೋಗ್ಯದಿಂದಾಗಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ವಡಗೇರಾ ತಾಲೂಕಿನ ಕೋಡಾಲ ಗ್ರಾಮದಲ್ಲಿ ನಡೆದಿದೆ.

ಪ್ರದೀಪ್(3), ಅಜ್ಜಿ ಶಾಂತಮ್ಮ(40) ವಾಂತಿ-ಭೇದಿಯಿಂದಾಗಿ ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ.

ಪ್ರದೀಪ್ ಸಾವಿನ ಸುದ್ದಿ ಕೇಳಿ ಶಾಂತಮ್ಮಳ ಮಗಳು ಭಾಗ್ಯಮ್ಮ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕೋಡಾಲ ಗ್ರಾಮದವರಾದ ಪ್ರದೀಪ್‌ ಮತ್ತು ಶಾಂತಮ್ಮ ಅವರು ವಾಂತಿಭೇದಿಯಿಂದ ಬಳಲುತ್ತಿದ್ದಾಗ ಜಿಲ್ಲಾಸ್ಪತ್ರೆಗೆ ದಾಖಲಿಸಲು ಕರೆ ತರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಇನ್ನು ಶಾಂತಮ್ಮಳ ಮಗಳು ಭಾಗ್ಯಮ್ಮ ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ವಡಗೇರಾ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *