ಮಕ್ಕಳು ಸೃಜನಶೀಲತೆ ಹೆಚ್ಚಿಸಿಕೊಳ್ಳಲಿ

ಯಾದಗಿರಿ: ಮಕ್ಕಳು ಸಮಯ ಹಾಳು ಮಾಡದೇ ಸೃಜನಾತ್ಮಕ ಕಲೆ, ನೃತ್ಯ, ಬರವಣಿಗೆ ಹೀಗೆ ಹಲವಾರು ವಿಷಯಗಳಲ್ಲಿ ಪರಿಣಿತಿ ಹೊಂದಿ ಶಿಬಿರದ ಲಾಭ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಬಸವರಾಜ ಪಾಟೀಲ್ ಸಲಹೆ ನೀಡಿದರು.

ನಗರದ ಜಿಲ್ಲಾ ಬಾಲ ಭವನದಲ್ಲಿ ರಾಜ್ಯ ಬಾಲ ಭವನ ಸೊಸೈಟಿಯಿಂದ ಹಮ್ಮಿಕೊಂಡ ಜಿಲ್ಲಾ ಮಟ್ಟದ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳು ಬೇಸಿಗೆ ಶಿಬಿರದಲ್ಲಿ ಭಾಗವಹಿಸುವುದರಿಂದ ಅವರಲ್ಲಿ ಸೃಜನಶೀಲತೆ ಹೆಚ್ಚಳವಾಗಲಿದೆ ಎಂದರು.

ಬೇಸಿಗೆಯಂತಹ ರಜಾ ದಿನಗಳಲ್ಲಿ ವಿದ್ಯಾಭ್ಯಾಸದ ಜತೆಗೆ ಇತರ ಕಲೆ, ಬರವಣಿಗೆ, ಚರ್ವಾ ಸ್ಪರ್ಧೆ, ಮನರಂಜನೆ, ಸಂಗೀತದಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಬೌದ್ಧಿಕ ಮಟ್ಟ ಬೆಳವಣಿಗೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಬಾಲ ಕಾಮರ್ಿಕ ಇಲಾಖೆಯ ಯೋಜನಾ ನಿರ್ದೇ‘ಶಕ ರಘುವೀರಸಿಂಗ್ ಠಾಕೂರ್ ಮಾತನಾಡಿ, ಜಿಲ್ಲಾ ಬಾಲ ಭವನ ಸೋಸೈಟಿಯು ಉತ್ತಮ ರೀತಿಯಲ್ಲಿ ಮಕ್ಕಳ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಬೇಸಿಗೆ ಶಿಬಿರ ಮಕ್ಕಳಿಗೆ ಒಳ್ಳೆಯ ವೇದಿಕೆ ಕೂಡ ಆಗಿದೆ ಎಂದು ಹೇಳಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಜಿ.ಮಣ್ಣೂರು, ಅಧೀಕ್ಷಕಿ ನಾಗಮ್ಮ ಹಿರೇಮಠ, ಶಿವಶಂಕರ ಬಿ.ತಳವಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪರಿವೀಕ್ಷಣಾಧಿಕಾರಿ ರಾಜೇಂದ್ರಕುಮಾರ ಯಾದವ, ಸಂಯೋಜಕ ಅನಿಲಕುಮಾರ ಪಾಟೀಲ್ ಇದ್ದರು.

Leave a Reply

Your email address will not be published. Required fields are marked *