ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ

ಸುರಪುರ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಸುಪ್ತವಾದ ಪ್ರತಿಭೆ ಅಡಗಿರುತ್ತದೆ. ಅದನ್ನು ಕಠಿಣ ಪರಿಶ್ರಮ ಹಾಗೂ ಸತತ ಅಧ್ಯಯನದ ಮೂಲಕ ಹೊರ ಹಾಕಬೇಕೆಂದು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬೀರಣ್ಣ ಬಿ.ಕೆ ಹೇಳಿದರು.

ದಿ.ಬಾಬಣ್ಣ ಕಂಬಳಿ ಹಾಗೂ ಬಸ್ಸಮ್ಮ ಕಂಬಳಿ ಸ್ಮರಣಾರ್ಥ ಹಾಲುಮತ ಸಮಾಜದ ವಿದ್ಯಾರ್ಥಿಗಳಿಗಾಗಿ ಸೋಮವಾರ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಯ ಸಾಧನೆ ಇತರರು ಕೊಂಡಾಡುವಂತಾಗಬೇಕೆ ವಿನಃ ಆಡುವ ಮಾತೆ ಸಾಧನೆಯಾಬಾರದು ಎಂದರು.

ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಅಂಕ ಪಡೆದ ಮುದಿಲಿಂಗಪ್ಪ ಅಬ್ಬಲಿ ಎತ್ತಿನಮನಿ, ಗುಡದಪ್ಪ ಮೇಟಿ ಮಂಜ್ಲಾಪುರ, ರಾಮಣ್ಣ ಧರೇಪೂರ ನಾಗರಾಳ, ಅನ್ನಪೂರ್ಣ ತುಂಬಿಗಿ ಕೆಂಭಾವಿ, ಮಲ್ಲಿಕಾರ್ಜುನ ಬನ್ನೆಟ್ಟಿ ಬೈರಿಮಡ್ಡಿ, ದೇವಿಂದ್ರ ಧರೇಪೂರ ಅವರನ್ನು ಸನ್ಮಾನಿಸಲಾಯಿತು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮರಡ್ಡಿ ಮಂಗಿಹಾಳ, ಜಿ.ಎಸ್.ಗೂಡಲಮನಿ, ದೇವರಾಜ ಪಾಟೀಲ್, ಶಿವಕುಮಾರ ಎಲಿಗಾರ, ತಮ್ಮಣ್ಣ ಸಾಹುಕಾರ, ದುರಗಪ್ಪ ಎಳಿಮೇಲಿ, ಆದಪ್ಪ ಜಂಬಲದಿನ್ನಿ, ಹೊನಕೆರಪ್ಪ ಹಾದಿಮನಿ, ಭೀಮರಾಯ ನಡಕೂರ, ನಿಂಗಣ್ಣ ಹೆಗ್ಗಣದೊಡ್ಡಿ, ಮಲ್ಲು ತಿಪ್ಪನಟಿಗಿ, ಸುಭಾಸ ಅಗ್ನಿ, ಭೀಮರಾಯ ಹುಣಸಗಿ, ಪರಮಣ್ಣ ಮಂಗಿಹಾಳ, ಮಲ್ಲಿಕಾರ್ಜುನ ಹೊಟ್ಟಿ, ಶಿವು ಬೇವಿನಾಳ ಇದ್ದರು. ರೇಣುಕಾ ಅರೆಶಂಕರ ಪ್ರಾರ್ಥಿಸಿದರು, ವಿಶ್ವರಾಜ ವಂಟೂರ ಸ್ವಾಗತಿಸಿದರು,ಧರ್ಮರಾಜ ನಿರೂಪಣೆ ಮಾಡಿದರು. ರವಿ ಕನ್ನೆಳ್ಳಿ ವಂದಿಸಿದರು.