ಬಾಂಗ್ಲಾದೇಶ ವಲಸಿಗರನ್ನು ಗಡಿಪಾರು ಮಾಡಿ

ಯಾದಗಿರಿ: ಭಾರತದಲ್ಲಿ ಅಕ್ರಮವಾಗಿ ನೆಲಸಿರುವ ಬಾಂಗ್ಲಾದೇಶ ವಲಸಿಗರನ್ನು ಕೂಡಲೇ ದೇಶದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಸಂಘಟನೆಯಿಂದ ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧ್ಯಕ್ಷ ವಿಜಯ ಪಾಟೀಲ್ ಮಾತನಾಡಿ, ಈ ನುಸುಳುಕೋರರಿಂದ ದೇಶದ ಆಂತರಿಕ ಭದ್ರತೆ ಅಪಾಯದಲ್ಲಿ ಸಿಲುಕಿದೆ. ಸಾಮಾಜಿಕ, ಆಥರ್ಿಕ, ರಾಜಕೀಯ, ಅನೈತಿಕ ಜನಸಂಖ್ಯೆ ವ್ಯಾಪಾರ ನಮ್ಮ ದೇಶದ ಜನತೆಯ ಉದ್ಯೋಗ, ದೇಶದ ಕರ ಮುಂತಾದ ವಿಷಯಗಳಿಗೆ ಇವರು ಕಂಟಕಪ್ರಾಯರಾಗಿದ್ದಾರೆ. ಕೋಟ್ಯಂತರ ಸಂಖ್ಯೆಯಲ್ಲಿ ದೇಶಾದ್ಯಂತ ಪಸರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತದಲ್ಲಿ ಬಾಂಗ್ಲಾದೇಶದ ವಲಸಿಗರು ಅಕ್ರಮವಾಗಿ ಠಿಕಾಣಿ ಹೂಡುವ ಮೂಲಕ ದೇಶದ ಆರ್ಥಿಕ ಭದ್ರತೆಗೆ ಕಂಟಕಪ್ರಾಯರಾಗಿದ್ದಾರೆ. ಈಗಾಗಲೇ ಸುಪ್ರಿಂಕೋರ್ಟ್​ ನಿರ್ದೇಶನದ ಮೇರೆಗೆ ಆಸ್ಸಾಂ ರಾಜ್ಯದಲ್ಲಿ ನಡೆದ ಪೌರತ್ವ ನೋಂದಣಿ ಅಭಿಯಾನದಲ್ಲಿ 40 ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿ ನುಸುಳುಕೋರರು ಇರುವ ಬಗ್ಗೆ ಆಘಾತಕಾರಿ ಸತ್ಯ ಹೊರಬಿದ್ದಿದೆ. ಇದೇ ರೀತಿ ದೇಶದಲ್ಲಿ ಬಾಂಗ್ಲಾ ನುಸುಳುಕೋರರು ಪಸರಿಸಿದ್ದು, ತಕ್ಷಣವೇ ದೇಶಾದ್ಯಂತ ಇರುವ ಬಾಂಗ್ಲಾ ವಲಸಿಗರನ್ನು ಕೇಂದ್ರ ಸಕರ್ಾರ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಶಾಂಕ ನಾಯಕ, ಸಂದೀಪ ಮಹೇಂದ್ರಕರ್, ಅಂಬರೀಶ ತಡಿಬಿಡಿ, ರವಿಂದ್ರನಾಥ ನಾಯಕ, ಮಲ್ಲಿಕಾಜರ್ುನ ಪೂಜಾರಿ, ಸುರೇಶ ದಿಗ್ಗಾವಿ, ವಿನೋದ ಕುರಕುಂದಿ, ದೇವಿಂದ್ರ ಮಸ್ಕನಳ್ಳಿ, ಶರಣು ಕುರಕುಂದಿ, ರವಿ ವರ್ಕನಳ್ಳಿ, ಹುಲುಗಪ್ಪ ನಗನೂರು, ಹರೀಶ ವರ್ಕನಳ್ಳಿ, ಶಿವು ಬೀರನಾಳ, ಮರಲಿಂಗ ನಾಯಕ, ಆಕಾಶ ಚವ್ಹಾಣ, ಶಶಾಂಕ ನಾಲ್ವಡಿಗಿ ಇದ್ದರು.

Leave a Reply

Your email address will not be published. Required fields are marked *