ಶಾಸಕರ ಲಂಚದ ಬೇಡಿಕೆಗೆ ಪಿಎಸ್‌ಐ ಪರಶುರಾಮ ಬಲಿ


ಯಾದಗಿರಿಯಲ್ಲಿ ದಲಿತ ಸಂಘಟನೆಗಳಿoದ ಪ್ರತಿಭಟನೆ : ಶಾಸಕ ಚನ್ನಾರೆಡ್ಡಿ ಪುತ್ರನ ವಿರುದ್ದ ಕೇಸ್
ಯಾದಗಿರಿ: ಇಲ್ಲಿನ ನಗರ ಠಾಣೆಯ ಪಿಎಸ್‌ಐ ಪರಶುರಾಮ ಸಾವಿಗೆ ಶಾಸಕರ ಹಾಗೂ ಅವರ ಪುತ್ರನ ಲಂಚದ ಬೇಡಿಕೆಯೇ ಕಾರಣ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಘಟನೆ ಖಂಡಿಸಿ ಶನಿವಾರ ದಲಿತ ಇನ್ನಿತರ ಸಂಘಟನೆಯವರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಎಂ ವಿರುದ್ಧ ಮುಡಾ ಅಕ್ರಮ ನಿವೇಶನ ಹಂಚಿಕೆ,ವಾಲ್ಮೀಕಿ ನಿಗಮ ಹಗರಣ ಚರ್ಚೆಗೆ ಜೋರಾಗಿರುವ ಹೊತ್ತಿನಲ್ಲಿಯೇ ಸರ್ಕಾರದ ವರ್ಗಾವಣೆ ದಂಧೆಗೆ ಕಾಂಗ್ರೆಸ್ ಶಾಸಕರ ಲಂಚದ ಬೇಡಿಕೆಗೆ ಪಿಎಸ್‌ಐ ಬಲಿಯಾಗಿರುವುದು ವಿಪಕ್ಷಗಳಿಗೆ ಮತ್ತೊಂದು ಅಸ್ತç ಸಿಕ್ಕಂತಾಗಿದೆ.
ಶುಕ್ರವಾರ ರಾತ್ರಿ ಪಿಎಸ್‌ಐ ಪರಶುರಾಮ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆರಂಭದಲ್ಲಿ ಹೃದಯಾಘಾತ ಎನ್ನಲಾಗಿತ್ತು. ಆದರೆ, ಅವರನ್ನು ವರ್ಗಾವಣೆಗೊಳಿಸಿದ್ದರಿಂದ ಮತ್ತು ಮೊದಲಿನ ಹುದ್ದೆಯಲ್ಲಿ ಮುಂದುವರೆಸಲು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಮತ್ತು ಅವರ ಪುತ್ರ ಪಂಪಣ್ಣಗೌಡ ೩೦ ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಇದರಿಂದಲೇ ಘಾಸಿಗೊಂಡು ತಮ್ಮ ಪತಿ ಮೃತಪಟ್ಟಿದ್ದಾರೆ ಎಂದು ಪತ್ನಿ ಶ್ವೇತಾ ಹಾಗೂ ಪ್ರತಿಭಟನಾಕಾರರು ಗಂಭೀರವಾಗಿ ಆರೋಪಿಸಿದ್ದಾರೆ.
ಪಿಎಸ್‌ಐ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಾಗೂ ಘಟನೆ ಖಂಡಿಸಿ ಶನಿವಾರ ಬೆಳಗ್ಗೆ ಯಾದಗಿರಿ ನಗರದ ಚಿತ್ತಾಪುರ ರಸ್ತೆಯ ಜಿ¯್ಲÁ ಆಸ್ಪತ್ರೆ ಮುಖ್ಯದ್ವಾರದ ಮುಂದೆ ದಲಿತ ಸಂಘಟನೆ ಮುಖಂಡರು ರಸ್ತೆ ನಡೆಸಿ ಪ್ರತಿಭಟನೆ ನಡೆಸಿದರು. ಪಿಎಸ್‌ಐ ಸಾವಿಗೆ ಕಾರಣರಾದ ಯಾದಗಿರಿ ಶಾಸಕ ಚನ್ನಾರೆಡ್ಡಿ ಅವರನ್ನು ಬಂಧಿಸುವAತೆ ಪ್ರತಿಭಟನಾಗಾರರು ಘೋಷಣೆ ಕೂಗಿ ಆಗ್ರಹಿಸಿದರು. ರಸ್ತೆ ತಡೆಯಿಂದ ನೂರಾರು ವಾಹನಗಳು ರಸ್ತೆ ನಿಂತಿದ್ದವು. ಎಲ್ಲಡೆ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರತಿಭಟನಾ ಸ್ಥಳಕ್ಕೆಎಸ್‌ಪಿ ಸಂಗೀತಾ ದೌಡಾಯಿಸಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು. ಅಲ್ಲದೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಹ ಕರೆ ಮಾಡಿ ದೂರವಾಣಿ ಮೂಲಕ ಪ್ರತಿಭಟನೆನಿರತರೊಂದಿಗೆ ಮಾತನಾಡಿ,ಪ್ರತಿಭಟನೆ ಕೈಬಿಡಿ, ಸೂಕ್ತ ಕ್ರಮ ಸರ್ಕಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರೂ ಜಗ್ಗಲಿಲ್ಲ. ಸಚಿವರೊಂದಿಗೆ ಮಾತನಾಡುವಾಗ ಕಣ್ಣೀರಿಟ್ಟ ದಲಿತ ನಾಯಕ ಪರಶುರಾಮ ಕುರಕುಂದಿ. ದಲಿತರ ಮೇಲೆ ಯಾದಗಿರಿ ನಗರ ಶಾಸಕ ಮತ್ತು ಅವರ ಮಕ್ಕಳಿಂದ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಶಾಸಕರ ವಿರುದ್ದ ದೂರು ದಾಖಲಿಸಲು ಯಾಕಿಷ್ಟು ಹಿದೇಟು. ಜಿ¯್ಲÁ ಪೊಲೀಸ್ ವೈಫಲ್ಯ ಖಂಡಿಸಿದರು. ಬೇಕು, ಬೇಕು ನ್ಯಾಯ ಬೇಕು ಎಂಬ ಘೊಷಣೆ ಕೂಗುತ್ತಲೇ ಇದ್ದರು. ಹೀಗಾಗಿ ಮಧ್ಯಾಹ್ನದವರೆಗೂ ಪ್ರತಿಭಟನೆ ಮುಂದುವರೆಯಿತು.
ಮೃತ ಪಿಎಸ್‌ಐ ಪತ್ನಿ ಶ್ವೇತಾ ಅವರನ್ನು ಪೊಲೀಸರು ನಗರ ಠಾಣೆಗೆ ಕರೆದುಕೊಂಡು ಹೋಗಿ ಅವರಿಂದ ದೂರು ಪಡೆದುಕೊಂಡರು. ಅದರಲ್ಲಿ ಮೊದಲ ಆರೋಪಿಯಾಗಿ ಶಾಸಕ ಚನ್ನಾರೆಡ್ಡಿ ಪಾಟೀಲ್, ೨ನೇ ಆರೋಪಿಯಾಗಿ ಅವರ ಪುತ್ರ ಪಂಪನಗೌಡ ಅಲಿಯಾಸ್ ಸನ್ನಿಗೌಡ ಹೆಸರು ನೀಡಲಾಗಿದೆ. ಬಳಿಕ ಶವವನ್ನು ಖಾಸಗಿ ಆಸ್ಪತ್ರೆಯಿಂದ ವೈದ್ಯಕೀಯ ಕಾಲೇಜಿನ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಿ ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

Share This Article

ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…