Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಹಣ ಕಳೆದುಕೊಂಡ ಜನ ಪರೇಶಾನ್

Friday, 10.08.2018, 5:35 AM       No Comments

ಲಕ್ಷ್ಮೀಕಾಂತ್ ಕುಲಕಲರ್ಣಿ ಯಾದಗಿರಿ
ಜಿಲ್ಲಾ ಕೇಂದ್ರ ಯಾದಗಿರಿಯ ಪ್ರತಿಷ್ಠಿತ ಬಡಾವಣೆಗಳಲ್ಲಿನ ನಿವೇಶನಗಳನ್ನು ಖೊಟ್ಟಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಇದರಿಂದ ನಿವೇಶನಗಳ ಮಾಲೀಕರು ಆತಂಕಕ್ಕೆ ಒಳಗಾಗಿ ಪೊಲೀಸ್ ಠಾಣೆಗೆ ಅಲೆದಾಡಬೇಕಾಗಿದೆ.

ಲಕ್ಷ್ಮೀ ನಗರ ಬಡಾವಣೆ ಪ್ರತಿಷ್ಠಿತ ಎಂದು ಗುರುತಿಸಿಕೊಂಡಿದೆ. ಆಥರ್ಿಕ ಸ್ಥಿತಿವಂತರು ಹಾಗೂ ಸುಶಿಕ್ಷಿತರೇ ಹೆಚ್ಚಿನ ಪ್ರಮಾಣದಲ್ಲಿ ವಾಸವಿದ್ದಾರೆ. ಸವರ್ೇ ನಂ.384/1ರಲ್ಲಿ ಬರುವ ಈ ಬಡಾವಣೆ ಜಮೀನನ್ನು ಡಾ.ಬಿ.ಆರ್.ಅಂಬೇಡ್ಕರ್ ನಗರ ನಿವಾಸಿಯಾಗಿದ್ದ ಆದಪ್ಪ ಭೀಮಪ್ಪ ಎಂಬುವರು 1988ರಲ್ಲಿ ಮಾರಾಟ ಮಾಡಿದ್ದರು. ನಂತರ ಕೃಷಿಯೇತರ ಭೂಮಿಯಾಗಿ ಮಾರ್ಪಡಿಸಿ ನಿವೇಶನಗಳನ್ನು ಮಾಡಿ ಮಾರಲಾಗಿತ್ತು. ಯಾವಾಗ ಈ ಬಡಾವಣೆ ನಿವೇಶನಗಳಿಗೆ ಚಿನ್ನದಂಥ ಬೇಡಿಕೆ ಬಂತೋ, ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಮಾರಿದ ನಿವೇಶನವನ್ನೇ ಮತ್ತೊಬ್ಬರ ಹೆಸರಿಗೆ ಬರೆಸಿ ನೋಂದಣಿ ಮಾಡಿಸುವ ಜಾಲ ಹುಟ್ಟಿಕೊಂಡಿದೆ. ಈ ಜಾಲದೊಳಗೆ ಇದೀಗ 30ರಿಂದ 50 ಜನ ಸಿಕ್ಕಿಬಿದ್ದು ಪರದಾಡುವಂತಾಗಿದೆ.

ಅಚ್ಚರಿ ಎಂದರೆ, ಸರ್ವೆ ನಂ.384/1ರ ಜಮೀನಿನ ಮಾಲೀಕ ತೀರಿಕೊಂಡು ಎರಡು ದಶಕವಾಗಿದೆ. ಆದರೆ ಆತನನ್ನೇ ಹೋಲುವ ಮೂಲತಃ ಯಾದಗಿರಿ ತಾಲೂಕಿನ ಸಾವೂರ ಗ್ರಾಮದ ವೃದ್ಧ ಭಾಸ್ಕರ್ ಎಂಬಾತನಿಗೆ ಆದಪ್ಪ ಎಂದು ಹೆಸರಿಸಿ ನಾಗರಿಕರಿಗೆ ವಂಚಿಸಲಾಗಿದೆ. ಈ ಪ್ರಕರಣ ಮೊದಲು ಗೊತ್ತಾಗಿದ್ದು, ಇತ್ತೀಚೆಗೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ. ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸದಸ್ಯ ಹಣಮಂತ ಇಟಗಿ, ತಾವು ಪ್ರತಿನಿಧಿಸುವ ವಾಡರ್್ನಲ್ಲಿ ಇಂಥದ್ದೊಂದು ವಂಚನೆ ನಡೆದಿದೆ. ಈ ಬಗ್ಗೆ ಪೌರಾಯುಕ್ತರು ಉತ್ತರಿಸಬೇಕು ಎಂದು ಆಗ್ರಹಿಸಿದ್ದರು.

ಬಳಿಕ ಎಚ್ಚೆತ್ತ ಲಕ್ಷ್ಮೀನಗರ ನಿವಾಸಿಗಳು ತಮ್ಮ ಮನೆಯ ಮೂಲ ದಾಖಲೆಗಳನ್ನು ಕೆದಕಿ ನೋಡಿದಾಗ ಶಾಕ್ ಹೊಡೆದಿದೆ. ಈಗಾಗಲೇ ಮನೆ ಕಟ್ಟಿಕೊಂಡಿರುವವರ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿದ ಆರೋಪಿಗಳು, ಕೋಟ್ಯಂತರ ರೂ. ಜೇಬಿಗಿಳಿಸಿ ಬಡವರಿಗೆ ಟೋಪಿ ಹಾಕಿದ್ದಾರೆ. ವಂಚನೆಗೆ ಸಂಬಂಧಿಸಿದಂತೆ ವೃದ್ಧ ಭಾಸ್ಕರ್ ಎಂಬಾತನನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಜಾಲದಲ್ಲಿ ಸಕ್ರಿಯವಾಗಿದ್ದ ಮತ್ತಿಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿವೇಶನ ಖರೀದಿಸಿದ ಬಳಿಕ ನಗರಸಭೆಯಲ್ಲಿ ಮ್ಯುಟೇಶನ್ ಮಾಡಿಸಬೇಕಾಗುತ್ತದೆ. ನಗರಸಭೆಯಲ್ಲಿ ನಗರದ ಎಲ್ಲ ವಾಡರ್್ಗಳ ಜಾತಕವೇ ಇರುತ್ತದೆ. ಆದರೆ ಮತ್ತೊಬ್ಬರ ಹೆಸರಿನ ನಿವೇಶನ ಇನ್ನೊಬ್ಬರ ಹೆಸರಿಗೆ ಮ್ಯುಟೇಶನ್ ಮಾಡಿಸುವಾಗ ಅಧಿಕಾರಿಗಳು ಗಮನ ಹರಿಸಲಿಲ್ಲವೇ? ಅಥವಾ ಗೊತ್ತಿದ್ದೂ ಇಂಥದ್ದೊಂದು ಫ್ರಾಡ್ಗೆ ಕೈ ಸಹಕರಿಸಿದರೆ ಎಂಬುದು ಬಿಲಿಯನ್ ಡಾಲರ್ ಪ್ರಶ್ನೆ.

ಸದ್ಯ ಹೊರಬಂದಿರುವ ಪ್ರಕರಣ ಸ್ಯಾಂಪಲ್ ಅಷ್ಟೆ. ಇಂಥದ್ದೇ 350ಕ್ಕೂ ಹೆಚ್ಚು ಪ್ರಕರಣಗಳಿವೆ ಎಂಬ ಗುಸುಗುಸು ಚಚರ್ೆ ನಗರದೆಲ್ಲೆಡೆ ಶುರುವಾಗಿದೆ. ಇದರಲ್ಲಿ ಕೆಲ ಕಾಣದ ಕೈಗಳು ಕೆಲಸ ಮಾಡಿವೆ ಎಂಬ ಅನುಮಾನ ಮೂಡಿಸಿದ್ದು, ಪೊಲೀಸ್ ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ಹೊರಬರಬೇಕಿದೆ.

ನಿವೃತ್ತ ನೌಕರರೇ ಟಾರ್ಗೇಟ್: ಬಲ್ಲ ಮೂಲಗಳ ಪ್ರಕಾರ, ನಿವೃತ್ತ ನೌಕರರನ್ನೇ ವಂಚಕರು ಟಾಗರ್ೆಟ್ ಮಾಡಿಕೊಂಡು ಕಡಿಮೆ ದರದಲ್ಲಿ ನಿವೇಶನ ಕೊಡಿಸುವುದಾಗಿ ನಂಬಿಸುತ್ತಿದ್ದರು. ರಿಟೈಡರ್್ ಹೊಂದಿದ ತಕ್ಷಣ ಸಕರ್ಾರದಿಂದ ಲಕ್ಷಾಂತರ ರೂಪಾಯಿ ಬರುತ್ತದೆ. ಸ್ವಂತ ಮನೆ ಕಟ್ಟಿಕೊಳ್ಳಬೇಕು ಎಂಬ ಕನಸು ಕಾಣುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಈ ಮೋಸದ ಜಾಲಕ್ಕೆ ಸಿಕ್ಕು ಬಿದ್ದಿದ್ದಾರೆ ಎನ್ನಲಾಗುತ್ತಿದೆ.

ನಗರಸಭೆಯತ್ತ ಅನುಮಾನದ ಹುತ್ತ: ಯಾದಗಿರಿಯಲ್ಲಿ 31 ವಾಡರ್್ಗಳಿವೆ. ಸ್ಟೇಷನ್ ಏರಿಯಾ ವಾಡರ್್ಗಳ ಬಡಾವಣೆ ನಿವೇಶನಗಳಿಗೆ ಡಿಮ್ಯಾಂಡ್ ಜಾಸ್ತಿ ಇದೆ. ಲಕ್ಷ್ಮೀ ನಗರದಲ್ಲಿ ನಡೆದ ನಿವೇಶನಗಳ ಅಕ್ರಮದಿಂದ ಆತಂಕಕ್ಕೆ ಸಿಲುಕಿರುವ ನಾಗರಿಕರು ನಗರಸಭೆಯತ್ತ ಬೊಟ್ಟು ಮಾಡಿದ್ದಾರೆ. ಸದ್ಯ ಈ ಪ್ರಕರಣ ಪೊಲೀಸ್ ವಿಚಾರಣೆ ಮೇಲೆ ಅವಲಂಬಿಸಿದೆ.

ಲಕ್ಷ್ಮೀ ನಗರ ಬಡಾವಣೆ ನಿವೇಶನಗಳಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ನಡೆಸುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ಮಾಡಲಾಗಿದೆ. ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆಯಾಗಲಿದೆ.
| ಎಂ.ಕೂರ್ಮರಾವ್ ಜಿಲ್ಲಾಧಿಕಾರಿ ಯಾದಗಿರಿ

Leave a Reply

Your email address will not be published. Required fields are marked *

Back To Top