ಜಿಲ್ಲಾದ್ಯಂತ ಶೇ.68.02 ಮತದಾನ

ಯಾದಗಿರಿ: ಕಳೆದ ಒಂದು ತಿಂಗಳಿನಿಂದ ಭಾರಿ ನಿರೀಕ್ಷೆ ಮೂಡಿಸಿದ್ದ ಜಿಲ್ಲೆಯ ಮೂರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಶುಕ್ರವಾರದಂದು ಕೆಲ ಸಣ್ಣಪುಟ್ಟ ಗೊಂದಲಗಳು ಹೊರತು ಪಡಿಸಿ ಬಹುತೇಕ ಶಾಂತಿಯುತ ಮತದಾನ ನಡೆಯಿತು.

ಬೆಳಗ್ಗೆ 7ರಿಂದ ಸಂಜೆ 5ರವರಗೆ ನಡೆದ ಮತದಾನದಲ್ಲಿ ಜಿಲ್ಲಾದ್ಯಂತ ಶೇ.61.64 ಮತದಾನವಾಗಿದ್ದು, ಈ ಪೈಕಿ ಯಾದಗಿರಿ 56.27, ಸುರಪುರ 66.29 ಹಾಗೂ ಗುರುಮಠಕಲ್ 70.06 ಮತದಾನವಾಗಿದ್ದು, ಸುರಪುರ ನಗರಸಭೆಗೆ ಹೆಚ್ಚು ಮತದಾನವಾದರೆ ಯಾದಗರಿ ನಗರಸಭೆಗೆ ಅತಿ ಕಡಿಮೆ ಮತದಾನವಾಗಿದೆ. ಬೆಳಗ್ಗೆಯಿಂದ ಯಾದಗಿರಿಯ ವಿವಿಧ ಮತಗಟ್ಟೆಗಳಲ್ಲಿ ಜನತೆ ಸರದಿಯಲ್ಲಿ ನಿಂತು ಮತದಾನ ಮಾಡುತ್ತಿರುವುದು ಕಂಡು ಬಂತು.

ಅಂತಿಮವಾಗಿ ಕಣದಲ್ಲಿರುವ 256 ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಎವಿಎಂ ಯಂತ್ರದಲ್ಲಿ ಬರೆದು ಭದ್ರವಾಗಿಸಿಟ್ಟಿದ್ದು, 3ರಂದು ನಡೆಯಲಿರುವ ಮತ ಎಣಿಕೆಯಲ್ಲಿ ವಿಜಯಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆ ಎಂಬ ಕುತೂಹಲ ಮನೆ ಮಾಡಿದೆ.  ಇನ್ನೂ ಈ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳನ್ನು ನಾಚಿಸುವಂತಿದ್ದಿದ್ದು ವಿಶೇಷವಾಗಿತ್ತು. ಎಮ್ಮೆಲ್ಲೆ ಚುನಾವಣೆಯಲ್ಲಿ ಜನರನ್ನು ಕರೆದುಕೊಂಡು ಬರಲು ಸ್ಪಧರ್ಿಸಿದ್ದ ಅಭ್ಯಥರ್ಿಗಳು ನಾನಾ ಕಸರತ್ತು ಮಾಡುತ್ತಿದ್ದರು. ಆದರೆ ಶುಕ್ರವಾರ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರೇ ಸ್ವಯಂಪ್ರೇರಿತರಾಗಿ ತಂಡೋಪತಂಡವಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದು ಮತ್ತೊಂದು ವಿಶೇಷ.

ಇಲ್ಲಿನ ವಾರ್ಡ್​ 13ರಲ್ಲಿ ಮತದಾರರ ಪಟ್ಟಿಯಿಂದ ಕೆಲವರ ಹೆಸರು ಕೈ ಬಿಡಲಾಗಿದೆ ಎಂದು ಬಿಜೆಪಿ, ಜೆಡಿಎಸ್ ಹಾಗೂ ಬಿಜೆಪಿ ಅಭ್ಯಥರ್ಿಗಳು ಆರೋಪಿಸಿದ ಘಟನೆ ನಡೆಯಿತು. ಇದರಿಂದ ಮತದಾನಕ್ಕೆ ಕೆಲಕಾಲ ಅಡ್ಡಿಯಾಯಿತು. ವಿಷಯ ತಿಳಿದ ನಂತರ ಸ್ಥಳಕ್ಕೆ ಆಗಮಿಸಿದ ಶಾಸಕ ವೆಂಕಟರಡ್ಡಿ ಮುದ್ನಾಳ್ ಚುನಾವಣೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. 5 ನಕಲಿ ಮತದಾನವಾಗಿದೆ ಎಂದು ಆರೋಪಿಸಿದ ಕಾರಣ ಕೆಲಕಾಲ ಗೊಂದಲದ ವಾತಾವರಣ ಸೃಷ್ಠಿಯಾಗಿತ್ತು.
ಇನ್ನೂ ಈ ಚುನಾವಣೆ ನಗರದ ಕೆಲ ವಾರ್ಡ್​ಗಳಲ್ಲಂತೂ ಪ್ರತಿಷ್ಠೆಯಾಗಿ ಹೊರಹೊಮ್ಮಿದ ಕಾರಣ ಮತದಾನ ಕೇಂದ್ರದಲ್ಲಿ ಅಭ್ಯಥರ್ಿಗಳು ಕೊನೆವರೆಗೂ ಮತದಾರರನ್ನು ಓಲೈಸುತ್ತಿರುವುದು ಸಾಮಾನ್ಯ ದೃಶ್ಯವಾಗಿತ್ತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾಟರ್ಿನ್ ಮರ್ಬನ್ಯಾಂಗ್ ನಿದರ್ೇಶನದಲ್ಲಿ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಮಾತಿನ ಚಕಮಕಿ: ಮತಗಟ್ಟೆ ಕೇಂದ್ರದೊಳಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದು ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ಶಾಂತವಾದ ಪ್ರಸಂಗ ಯಾದಗಿರಿಯ ವಾರ್ಡ್​ 28ರ ಮತಗಟ್ಟೆ 57ರಲ್ಲಿ ನಡೆಯಿತು. ನಗರದ ಸುಭಾಷ ವೃತ್ತದಲ್ಲಿರುವ ಮತಗಟ್ಟೆಯೊಳಗೆ ಮತದಾನ ಆರಂಭಗೊಂಡ ನಂತರ ಎರಡೂ ಪಕ್ಷಗಳ ಕಾರ್ಯಕರ್ತರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭಿಸಿದರೂ ಕೊನೆಗೆ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದರು.

ಮತ ಚಲಾಯಿಸಿ ತಂದೆ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಮಗ: ಗುರುಮಠಕಲ್ ನಿವಾಸಿ ವೆಂಕಟರಾವ್ ಎಂಬುವರು ಗುರುವಾರ ಮೃತಪಟ್ಟಿದ್ದರು. ಇದರಿಂದ ಮನೆಯಲ್ಲಿ ಶೋಕ ಮಡುಗಟ್ಟಿತ್ತು. ತಂದೆಯನ್ನು ಕಳೆದುಕೊಂಡ ದುಃಖದಲ್ಲೇ ವಾರ್ಡ್​ 18ರ ಮತಗಟ್ಟೆಗೆ ಆಗಮಿಸಿದ ಮೃತರ ಪುತ್ರ ರೂಪೇಶ ಮತದಾನದ ಹಕ್ಕು ಚಲಾಯಿಸಿದರು. ನಂತರ ತಂದೆಯ ಅಂತ್ಯಕ್ರಿಯೆ ಕಾರ್ಯದಲ್ಲಿ ಭಾಗಿಯಾದರು.

ಮತದಾನಕ್ಕೆ ಅಡ್ಡಿಯಾದ ಖಡಕ್ ಬಿಸಿಲು: ಕಳೆದ ಒಂದು ವಾರದಿಂದ ಜಿಲ್ಲಾದ್ಯಂತ ವರುಣನ ಅಬ್ಬರ ಹೆಚ್ಚಾಗಿತ್ತು. ಆದರೆ ಶುಕ್ರವಾರ ಮಾತ್ರ ಖಡಕ್ ಬಿಸಲು ಬಿದ್ದಿತ್ತು. ಬೆಳಗ್ಗೆ 11 ಗಂಟೆಯಾಗುತ್ತಿದ್ದಂತೆ ಬಿಸಿಲಿನ ಬೇಗೆಯೂ ಹೆಚ್ಚಾಗತೊಡಗಿತು. ಇದರಿಂದ ಮತದಾನದಲ್ಲಿ ಕೊಂಚ ಮಂಕಾದಂತೆ ಕಂಡು ಬಂದರೂ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಜನ ಉರಿ ಬಿಸಿಲನ್ನೂ ಲೆಕ್ಕಿಸದೆ ಆಟೋ ಹಾಗೂ ಬೈಕ್ಗಳ ಮೇಲೆ ಆಗಮಿಸಿ ಸರತಿಯಲ್ಲಿ ನಿಂತೇ ಮತದಾನ ಮಾಡಿದರು.