Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಮಳೆ ಚಲ್ಲಾಟ ಅನ್ನದಾತನಿಗೆ ಸಂಕಟ

Friday, 13.07.2018, 5:33 AM       No Comments

ವಿಜಯವಾಣಿ ವಿಶೇಷ ಕೊಡೇಕಲ್
ಒಂದು ವಾರದಿಂದ ವಲಯದಲ್ಲಿ ಕಾಣಿಸಿಕೊಳ್ಳುತ್ತಿರುವ ಮೋಡಗಳು ಮಳೆ ಸುರಿಸಬಹುದು ಎಂಬ ರೈತರ ನಿರೀಕ್ಷೆ ಹುಸಿಯಾಗುತ್ತಿದ್ದು, ಮೋಡಗಳು ಮೂಡಿದ ಕೇಲವೆ ಕ್ಷಣಗಳಲ್ಲಿ ಮಾಯವಾಗುತ್ತಿರುವುದರಿಂದ ರೈತರಲ್ಲಿ ಆತಂಕ ಮೂಡಿದೆ.

ಅಲ್ಪ ಪ್ರಮಾಣದಲ್ಲಿ ಆಗಿರುವ ಮುಂಗಾರು ಮಳೆಯಿಂದ ರೈತರು ಬಿತ್ತನೆ ಮಾಡಿದ್ದಾರೆ. ಆದರೆ ಸಕಾಲಕ್ಕೆ ಮಳೆ ಆಗದಿರುವುದರಿಂದ ಬೆಳೆ ಬಾಡುತ್ತಿದೆ. ಸಾವಿರಾರು ರೂಪಾಯಿ ಖಚರ್ು ಮಾಡಿ, ಬೀಜ, ರಸಗೊಬ್ಬರ ತಂದು ಬಿತ್ತನೆ ಮಾಡಿರುವ ಬೆಳೆ ಮೊಳಕೆ ಒಡೆಯುವ ಹಂತದಲ್ಲೇ ಕೈಗೊಡುವ ಭೀತಿ ರೈತರಲ್ಲಿ ಎದುರಾಗಿದೆ.

ಮಳೆ ಆದ್ರೆ ಆರಿದ್ರ, ಇಲ್ದಿದ್ರೆ ದರಿದ್ರ: ದುಬಾರಿ ಬೆಲೆಗೆ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದೇವೆ. ಇದೀಗ ಬೆಳೆ ಒಂದು ಹಂತಕ್ಕೆ ಬೆಳದು ನಿಂತಿದೆ. ಅದರೆ ಬೆಳೆ ಎಳಸು ಇರುವಾಗಲೇ ಮಳೆ ಕೈಕೊಟ್ಟಿದ್ದು, ಭಯ ಮೂಡಿಸಿದೆ. ಮಳೆ ಬಾರದಿದ್ದರೆ ಭಾರಿ ಸಮಸ್ಯೆಯಾಗುತ್ತದೆ. ಮಳೆಯಾದ್ರೆ ಆರಿದ್ರ, ಇಲ್ಲದಿದ್ದರೇ ರೈತರಿಗೆ ದರಿದ್ರ ಎನ್ನುವ ಮಾತು ನಿಜವಾಗುತ್ತಾ ಎಂಬ ಭೀತಿ ರೈತರಲ್ಲಿದೆ.

ಕಾಲುವೆಗೆ ನೀರು ಯಾವಾಗ?: ಸುರಿದ ಅಲ್ಪ ಮಳೆಗೆ ಬಿತ್ತನೆ ಮಾಡಿರುವ ರೈತರಿಗೆ ಮಳೆ ಕೈಕೊಟ್ಟಿದೆ. ಆದರೆ ನೀರಾವರಿ ಜಮೀನುಗಳಲ್ಲಿ ಬಿತ್ತಿರುವ ರೈತರೂ ಚಿಂತಾಕ್ರಾಂತರಾಗಿದ್ದಾರೆ. ಕಾಲುವೆಗೆ ನೀರು ಬರುತ್ತದೆ ಎಂಬ ನಿರೀಕ್ಷೆಯೊಂದಿಗೆ ಬಿತ್ತನೆ ಮಾಡಿರುವ ರೈತರು ಈಗ ಕಾಲುವೆಗೆ ನೀರಿಗೆ ಕಾಯುವಂತಾಗಿದೆ. ಆದರೆ ರೈತರ ಜೀವನಾಡಿಯಾಗಿರುವ ಬಸವಸಾಗರ ಜಲಾಶಯದಲ್ಲಿ ಇದುವರೆಗೆ ನಿಗದಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಮಹಾರಾಷ್ಟ್ರದ ಕೃಷ್ಣಾ ಕಣಿವೆ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಆಲಮಟ್ಟಿಯ ಜಲಾಶಯಕ್ಕೆ ನೀರಿನ ಒಳಹರಿವು ಉಂಟಾಗಿದೆ. ಆದ್ದರಿಂದ ಬಸವಸಾಗರ ಜಲಾಶಯಕ್ಕೂ ನೀರು ಬರುವ ನಿರೀಕ್ಷೆಯಲ್ಲಿದ್ದಾರೆ ರೈತರು. ಹಿಂದಿನ ವರ್ಷ ಜುಲೈ ಕೊನೆ ವಾರದಲ್ಲಿ ಎಡದಂಡೆ ಕಾಲುವೆಗೆ ನೀರು ಹರಿಸಲಾಗಿತ್ತು. ಆದರೆ ಈ ಬಾರಿ ಯಾವಾಗ ಕಾಲುವೆಗೆ ನೀರು ಪ್ರಶ್ನೆ ರೈತರಲ್ಲಿ ಉದ್ಭವವಾಗಿದೆ. ಒಂದೆಡೆ ಮಳೆ ಇನ್ನೊಂದೆಡೆ ಕಾಲುವೆ ನೀರಿಗಾಗಿ ರೈತರು ಕಾಯುತ್ತಿದ್ದಾರೆ.

ಮುಂಗಾರು ಮಳೆ ಆರಂಭದಲ್ಲಿ ಉತ್ತಮವಾಗಿತ್ತು, ಆದ್ದರಿಂದ ತೊಗರಿ, ಸಜ್ಜೆ ಸೇರಿ ವಿವಿಧ ಬೆಳೆ ರೈತರು ಬಿತ್ತನೆ ಮಾಡಿದ್ದಾರೆ. ಇದೀಗ ಬಿತ್ತಿದ ಬೀಜಗಳು ಮೊಳಕೆ ಒಡೆದು, ಒಂದು ಹಂತಕ್ಕೆ ಬೆಳೆದಿವೆ. ಆದರೆ ಮಳೆಯಾಗದೇ ಕೇವಲ ಒಣ ಗಾಳಿ ಬೀಸುತ್ತಿದ್ದು, ಪೈರು ಒಣಗುತ್ತಿವೆ.
| ಕನಕಪ್ಪ ಜಂಗಳಿ, ರೈತ

Leave a Reply

Your email address will not be published. Required fields are marked *

Back To Top