ವರ್ತಕರ ಅಳಲಿಗೆ ಶಾಸಕ ನರಸಿಂಹ ನಾಯಕ ಸ್ಪಂದನೆ

ಕಕ್ಕೇರಾ: ಪಟ್ಟಣದಲ್ಲಿ ರಸ್ತೆ ಅಗಲೀಕರಣಕ್ಕಾಗಿ 100ಕ್ಕೂ ಹೆಚ್ಚು ನೆಲಸಮಗೊಂಡ ಅಂಗಡಿಗಳ ಸ್ಥಳಕ್ಕೆ ಶನಿವಾರ ಸಂಜೆ ಶಾಸಕ ನರಸಿಂಹ ನಾಯಕ ಭೇಟಿ ನೀಡಿ ಅವಲೋಕನ ನಡೆಸಿದರು.

ಶಾಸಕರ ಆಗಮನದ ಸುದ್ದಿ ತಿಳಿದ ನೂರಾರು ವರ್ತಕರು ಸ್ಥಳದಲ್ಲಿ ಜಮಾಯಿಸಿದರು. ನರಸಿಂಹ ನಾಯಕ ಬರುತ್ತಲೇ ವರ್ತಕರ ಬಳಿ ತೆರಳಿ ಸಮಾಲೋಚನೆ ನಡೆಸಿದರು. ಪಟ್ಟಣದ ಮಹಷರ್ಿ ವಾಲ್ಮೀಕಿ ವೃತ್ತ ಹಾಗೂ ಶಾಂತಪುರ ಕ್ರಾಸ್, ಸೋಮನಾಥ ರಸ್ತೆ ಹಾಗೂ ಬಲಶೆಟ್ಟಿಹಾಳ ರಸ್ತೆ ಮಾರ್ಗ ವಿಸ್ತರಿಸಲಾಗಿತ್ತು. ಈ ವೇಳೆ ಲೋಕೋಪಯೋಗಿ ಇಲಾಖೆ ಕೆಲ ಅಂಗಡಿಗಳಿಗೆ 15 ಮೀ. ಗುರುತು ಮಾಡಿ ನೋಟಿಸ್ ನೀಡಿತ್ತು. ನಂತರ ವ್ಯಾಪಾರಸ್ಥರ ನಿಯೋಗ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿ 10 ಮೀ.ವರೆಗೆ ಅಗಲಗೊಳಿಸಲು ಒತ್ತಾಯಿಸಿದ್ದರು. ನಂತರ ಪಿಡಬು್ಲೃಡಿ ಇಲಾಖೆ 10 ಮೀಟರ್ವರೆಗೆ ಅಳತೆ ಮಾಡಿದ್ದರಿಂದ ವ್ಯಾಪಾರಸ್ಥರು ನಿರಾಳರಾಗಿ ಅಗಲೀಕರಣಕ್ಕೆ ಸಹಕರಿಸಿದರು.

ಆದರೆ ಕಳೆದ 3ರಂದು ಬೆಳಗ್ಗೆ ಪಿಡಬ್ಲ್ಯೂಡಿ ಅಧಿಕಾರಿಗಳು, ಪುರಸಭೆ ಆಡಳಿತ ಮಂಡಳಿ ಹಾಗೂ ಜೆಸಿಬಿಗಳೊಂದಿಗೆ ಪೊಲೀಸರ ಸರ್ಪಗಾವಲಿನಲ್ಲಿ 12.5 ಮೀಟರ್ವರೆಗೆ ಅಂಗಡಿ ತೆರವುಗೊಳಿಸಿದ್ದರು. ಇದರಿಂದ ಸಕರ್ಾರಿ ಶಾಲೆ ಕಂಪೌಂಡ್ಗೆ ಹೊಂದಿಕೊಂಡಿದ್ದ 100ಕ್ಕೂ ಹೆಚ್ಚು ಅಂಗಡಿಗಳು ಕ್ಷಣಾರ್ಧದಲ್ಲಿಯೇ ನೆಲಸಮಗೊಂಡು ಕೋಟ್ಯಂತರ ರೂ. ನಷ್ಟವಾಗಿದೆ. ಕೆಲ ಅಂಗಡಿಗಳಿಗೆ ನೋಟಿಸ್ ನೀಡದೆ ಡೆಮಾಲಿಷನ್ ಮಾಡಲಾಗಿದೆ. ಇದರಿಂದ ಜೀವಾನಾಧಾರವಾಗಿದ್ದ ವ್ಯಾಪಾರ ಇಲ್ಲದೆ ಬೀದಿಗೆ ಬಂದಿದ್ದೇವೆ. ವ್ಯಾಪಾರ-ವಹಿವಾಟಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಿ ಎಂದು ಗೋಳು ತೋಡಿಕೊಂಡರು.

ಡೆಮಾಲಿಷನ್ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಶಾಸಕರು, ಶಾಲೆ ಮುಖ್ಯಸ್ಥರು ಹಾಗೂ ಜಿಲ್ಲಾಧಿಕಾರಿ ಜತೆ ಮಾತನಾಡುವೆ. ನಿಮಗೆಲ್ಲ ಮೊದಲಿದ್ದ ಸ್ಥಳದಲ್ಲೇ ವ್ಯಾಪಾರಕ್ಕಾಗಿ ಎರಡ್ಮೂರು ದಿನದಲ್ಲಿ ಸ್ಥಳಾವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಪುರಸಭೆ ವತಿಯಿಂದ ವರ್ತಕರಿಗೆ ಅನುಕೂಲ ಮಾಡಿಕೊಡಿ ಸ್ಥಳದಲ್ಲಿದ್ದ ಅಧ್ಯಕ್ಷರಿಗೆ ಸೂಚಿಸಿದರು.

ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ(ತಾತಾ), ಪುರಸಭೆ ಅಧ್ಯಕ್ಷ ದಶರಥ ಆರೇಶಂಕರ, ಶ್ಯಾಮಸುಂದರ ಶೆಟ್ಟಿ, ಭೀಮಣ್ಣಗೌಡ ಹಳ್ಳಿ, ರಮೇಶಶೆಟ್ಟಿ, ಪರಮಣ್ಣ ಪೂಜಾರಿ, ಅಯ್ಯಣ್ಣ ಗುಮೇದಾರ ಇತರರಿದ್ದರು.

ಅಧಿಕಾರಿಗಳು ಕೆಲವೊಂದು ನಿಯಮ ಗಾಳಿಗೆ ತೂರಿ ಅಂಗಡಿಕಾರರಿಗೆ ಕೋಟ್ಯಂತರ ರೂ. ನಷ್ಟವುಂಟು ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಸಂಕಷ್ಟದಲ್ಲಿರುವ ವರ್ತಕರಿಗೆ ಪರಿಹಾರ ನೀಡಬೇಕು.
| ನರಸಿಂಹ ನಾಯಕ, ಶಾಸಕ ಸುರಪುರ