ವ್ಯಾಪಾರಕ್ಕೆ ಸ್ಥಳಾವಕಾಶ ಕಲ್ಪಿಸಲು ಒತ್ತಾಯ

ಕಕ್ಕೇರಾ: ರಸ್ತೆ ಅಗಲೀಕರಣದ ವೇಳೆ ನೆಲಸಮಗೊಂಡ ಪಟ್ಟಣದ ಅಂಗಡಿಗಳ ನೂರಾರು ವರ್ತಕರು ಸೋಮವಾರ ಪುರಸಭೆಗೆ ಭೇಟಿ ನೀಡಿ ನಮಗೆ ವ್ಯಾಪಾರ-ವಹಿವಾಟು ಮಾಡಲು ಸೂಕ್ತ ಸ್ಥಳಾವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಸ್ಥಳೀಯ ಪುರಸಭೆ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಲೋಕೋಪಯೋಗಿ ಇಲಾಖೆ ಕಳೆದ ಆ. 3ರಂದು ಕೈಗೊಂಡ ವಾಲ್ಮೀಕಿ ವೃತ್ತ ಅಭಿವೃದ್ಧಿ ಹಾಗೂ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಅಂಗಡಿಗಳನ್ನು ನೆಲಸಮ ಮಾಡಲಾಗಿತ್ತು. ವ್ಯಾಪಾರ-ವಹಿವಾಟು ಇಲ್ಲದೇ ಬೀದಿಪಾಲಾದ ನೂರಕ್ಕೂ ಹೆಚ್ಚು ವರ್ತಕರು ಶಾಲಾ ಆವರಣದಿಂದ ಪುರಸಭೆ ವರೆಗೆ ಪಾದಯಾತ್ರೆ ಮೂಲಕ ತೆರಳಿ ಕೆಲ ಹೊತ್ತು ಧರಣಿ ನಡೆಸಿದರು.

40 ವರ್ಷಗಳಿಂದ ಸರ್ಕಾರಿ ಶಾಲಾ ಆವರಣದಲ್ಲಿ ಶಾಲಾ ಆಡಳಿತ ಮಂಡಳಿಯ ಸೂಚನೆಯಂತೆ ಭೂಬಾಡಿಗೆ ಪಾವತಿಸಿ ವ್ಯಾಪಾರ ನಿರ್ವಹಿಸುತ್ತಿದ್ದೇವು. ಅಂಗಡಿಗಳ ನೆಲಸಮದಿಂದ ಸಂತ್ರಸ್ಥ ವ್ಯಾಪಾರಸ್ಥರಿಗೆ ಸಕರ್ಾರ ಪರಿಹಾರ ಧನ ನೀಡಬೇಕು. ಪುರಸಭೆ ಆಡಳಿತ ಮಂಡಳಿ ಅವರು ಕೂಡಲೇ ನಿರ್ಣಯ ಕೈಗೊಂಡು ವ್ಯಾಪಾರ-ವಹಿವಾಟು ಮಾಡಲಿಕ್ಕೆ ಸ್ಥಳಾವಕಾಶದ ಜತೆಗೆ ಅಂಗಡಿ ಕಟ್ಟಡಕ್ಕೆ ಪರವಾನಿಗೆ ನೀಡಬೇಕೆಂದು ಒತ್ತಾಯಿಸಿರು.

ಪುರಸಭೆ ಅಧ್ಯಕ್ಷ ದಶರಥ ಆರೇಶಂಕರ ವರ್ತಕರಿಂದ ಮನವಿ ಸ್ವೀಕರಿಸಿ, ಒಂದು ವಾರದೊಳಗೆ ಸದಸ್ಯರ ಹಾಗೂ ಅಧಿಕಾರಿಗಳ ಸಭೆ ಕರೆದು ವ್ಯಾಪಾರಸ್ಥರಿಗೆ ಸ್ಥಳಾವಕಾಶದ ಜತೆಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.

ವರ್ತಕರಾದ ಆನಂದ ಪಾಟೀಲ್, ಕೊಟ್ರಯ್ಯಸ್ವಾಮಿ, ಹಣಮಂತ್ರಾಯಗೌಡ ಪಾಟೀಲ್, ಮಹಾರುದ್ರಯ್ಯ ಸ್ವಾಮಿ, ಪರಮಣ್ಣ ಗುಮೇದಾರ, ಸಂಗಯ್ಯಸ್ವಾಮಿ, ಗೋವಿಂದ್ ಬೈಲಪತ್ತಾರ್, ಧರ್ಮಸಾ ಸಾವಜೀ, ಆದಯ್ಯಸ್ವಾಮಿ, ಅಬ್ದುಲ್ ಗನಿಸಾಬ, ರಾಮಣ್ಣಗೌಡ, ಯಂಕಣ್ಣ ಮಡಿವಾಳ, ಪರಮಣ್ಣ ದೊಡ್ಡಮನಿ, ಮೈನೂದ್ದೀನ್ ಖಾಜಿ, ಸುರೇಶರಡ್ಡಿ, ಅನೀಪ್, ರಹೀಮ್ ಟೇಲರ್, ನಂದಪ್ಪ ಕುರಿ, ಕಾಸೀಂ ಹೊಳಿ, ಮಲ್ಲಿಕಾಜರ್ುನ ಹಡಪದ, ಸಿದ್ದಲಿಂಗಪ್ಪ ಶೆಟ್ಟಿ, ವಿರುಪಾಕ್ಷಿ ಅಂಗಡಿ, ದಾವುದ್ ಮಕಾಂದಾರ್, ಬಸವರಾಜ ಯಾಳಗಿ ಇತರರಿದ್ದರು.

ಪುರಸಭೆ ಕೆಲ ಸದಸ್ಯರುಗಳು ಸೇರಿದಂತೆ ಪುರಸಭೆ ಮುಖ್ಯಾಧಿಕಾರಿ ಆದಪ್ಪ ಸುರಪುರಕರ, ಪುರಸಭೆ ಸಿಬ್ಬಂದಿಗಳಾದ, ಪರಮಾನಂದ, ಸಲೀಮ್, ಕೃಷ್ಣಾ ರಾಠೋಡ್ ಇದ್ದರು. ವರ್ತಕರು ಮನವಿ ಪತ್ರ ಸಲ್ಲಿಸುವ ವೇಳೆ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಿಎಸ್ಐ ಕಾಳಪ್ಪ ಬಡಿಗೇರ ಹುಣಸಗಿ ಹಾಗೂ ಕೊಡೇಕಲ್ ಪೊಲೀಸ್ ಠಾಣೆಗಳಿಂದ 20ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.